ಭಾರತಕ್ಕೆ ಎರಡು ಸೀಟ್ ಹೊಂದಿರುವ ಜಪಾನ್ ಎಲೆಕ್ಟ್ರಿಕ್ ಕಾರಿನ ಆಗಮನ

ಭಾರತದ ಕಾರು ಮಾರುಕಟ್ಟೆಯಲ್ಲಿ ಎರಡು ಸೀಟ್ ಹೊಂದಿರುವ ಎಲೆಕ್ಟ್ರಿಕ್ ಕಾರ್ ವೊಂದು ಭಾರಿ ಸುದ್ದಿ ಮಾಡುತ್ತಿದೆ, ಆಟೋಮೊಬೈಲ್ ಕ್ಷೇತ್ರದ ಹಲವು ಕಾರು ತಯಾರಕ ಕಂಪನಿಗಳಲ್ಲಿ ಪ್ರಸಿದ್ದ ಸಂಸ್ಥೆಯಾದ ಟಯೋಟಾ ಕೂಡ ಒಂದಾಗಿದ್ದು, ಭಾರತದಲ್ಲಿ ಅಪಾರ ಗ್ರಾಹಕ ವರ್ಗವನ್ನೊಂದಿದೆ. ಜಪಾನ್ ದೇಶ ಮೂಲದ ಟಯೋಟಾ ಕಂಪನಿಯ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಗ್ರಾಹಕರಿಗೆ ಸೂಕ್ತ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಕಂಪನಿಯು ಹೊಸ ಪೀಳಿಗೆಯ ಲ್ಯಾಂಡ ಕ್ರೂಜ಼ರ್ ಎಸ್ಯುವಿಯನ್ನು ಇತ್ತೀಚಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. ಜೊತೆಗೆ ಇತ್ತೀಚೆಗೆ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಟಯೋಟಾ ಸಂಸ್ಥೆಯ ಕಾರುಗಳನ್ನ ಖರೀದಿ ಮಾಡಿದರೆ ಕಾರಿನ ಮೌಲ್ಯದ ಮೇಲೆ 22,000 ವರೆಗೂ ರಿಯಾಯಿತಿ ನೀಡುವ ಮೂಲಕ ಕಾರು ಪ್ರಿಯರನ್ನ ಸೆಳೆಯುವ ಪ್ರಯತ್ನ ಮಾಡಿದೆ.

ಟಯೋಟಾ ಸಂಸ್ಥೆಯ ಮಾರುಕಟ್ಟೆ ತಂತ್ರಗಾರಿಕೆಗೆ ತಕ್ಕಂತೆ ಜುಲೈ ತಿಂಗಳಿನಲ್ಲಿ 13 ಸಾವಿರಕ್ಕೂ ಹೆಚ್ಚು ಕಾರು ಮಾರಾಟವಾಗಿ ಉತ್ತಮ ಲಾಭಾಂಶವನ್ನು ಪಡೆದಿದೆ. ಟಯೋಟಾ ಕಿರ್ಲೋಸ್ಕರ್ ಮೋಟರ್ ಕಂಪನಿಯು ವರ್ಷಕ್ಕೆ ಶೇ143 ರಷ್ಟು ಪ್ರಗತಿ ಕಾಣುವ ಮೂಲಕ ಯಶಸ್ವಿ ಉದ್ಯಮವಾಗಿ ಹೊರ ಹೊಮ್ಮಿದೆ. ಇದೀಗ ಟಯೋಟಾ ಕಂಪನಿಯ ಎರಡು ಸೀಟುಗಳ ಸಿ+ಪಾಡ್ ಎಲೆಕ್ಟ್ರಿಕ್ ಕಾರ್ ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಎರಡು ಸೀಟು ಹೊಂದಿರುವ ಪುಟ್ಟ ಕಾರನ್ನು ಹತ್ತಿರದ ಸ್ಥಳಗಳಿಗೆ ಬಳಸಲು ಅತ್ಯುತ್ತಮವಾಗಿದೆ.

ಈ ಸಿ+ಪಾಡ್ ಎಲೆಕ್ಟ್ರಿಕ್ ಕಾರ್ ಅನ್ನು ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇದರ ಹೊರ ವಿನ್ಯಾಸ ಆಕರ್ಷಕವಾಗಿದ್ದು, 9.06 ಕಿವ್ಯಾ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ವ್ಯವಸ್ಥೆ ಅಳವಡಿಸಿದೆ. ಈ ಕಾರನ್ನ ಪ್ರತಿಗಂಟೆಗೆ 60 ಕಿಮೀ ವೇಗದಲ್ಲಿ ಚಾಲನೆ ಮಾಡಬಹುದಾಗಿದ್ದು, ಒಂದು ಬಾರಿ ಚಾರ್ಜಿಂಗ್ ಮಾಡಿದರೆ 150 ಕಿ.ಮೀ ದೂರದವರೆಗೆ ಪ್ರಯಾಣಿಸಬಹುದಾಗಿದೆ. 200 ವಿ16 ಎಔಟ್ಲೇಟ್ ಉಪಯೋಗಿಸಿ ಈ ಕಾರನ್ನ ಐದು ಗಂಟೆಗಳ ಕಾಲ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ಇನ್ನು ಈ ಸಿ + ಪಾಡ್ ಎಲೆಕ್ಟ್ರಿಕ್ ಕಾರ್ 2,490 ಎಂ.ಎಂ ಉದ್ದ ಮತ್ತು 1,290 ಎಂ.ಎಂ. ಅಗಲ ಮತ್ತು 1550 ಎಂ.ಎಂ. ಎತ್ತರವನ್ನೊಂದಿದೆ. ಈ ಕಾರಿನಲ್ಲಿರುವ ಫೀಚರ್ಸ್ ತಿಳಿಯುವುದಾದರೆ ಎಲ್.ಇ.ಡಿ ಹೆಡ್ ಲೈಟ್, ಎಲ್.ಇ.ಡಿ.ಟೇಲ್ ಲೈಟ್, ಎಲ್ಇ.ಡಿ ಟರ್ನ್ ಇಂಡಿಕೇಟರ್ ಹೊಂದಿದೆ. ಎರಡು ಸೀಟ್ ಹೊಂದಿರುವ ಈ ಸಿ ಪ್ಲಸ್ ಎಲೆಕ್ಟ್ರಿಕ್ ಕಾರ್ 1,100 ಎಂ.ಎಂ ಕ್ಯಾಬಿನ್ ವಿಸ್ತೀರ್ಣ ಹೊಂದಿದೆ. ಟೊಯೋಟಾ ಕಂಪನಿಯ ಈ ಸಿಪ್ಲಸ್ ಪಾಡ್ ಎಲೆಕ್ಟ್ರಿಕ್ ಕಾರಿನ ಬೆಲೆ ಭಾರತದ ಶೋ ರೂಂನಲ್ಲಿ 11.7 ಲಕ್ಷ ಬೆಲೆಯಲ್ಲಿ ದೊರೆಯುತ್ತಿದೆ.

%d bloggers like this: