ಭಾರತವೇ ಕಾಯುತ್ತಿರುವ ಕೆಜಿಎಫ್ 2 ಚಿತ್ರಕ್ಕೆ ಯಶ್ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತೇ

ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ. ಇಡೀ ಸಿನಿ ಜಗತ್ತು ನಮ್ಮ ಸ್ಯಾಂಡಲ್ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್ ಚಾಪ್ಟರ್ 1. ನಮ್ಮ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಕೆಜಿಎಫ್ ಚಾಪ್ಟರ್ 1 ಸಿನಿಮಾದಿಂದ ನಮ್ಮ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರು ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಹಿಂದಿನ ಎಲ್ಲ ಸಿನಿಮಾಗಳ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿತ್ತು. ಕನ್ನಡ, ತೆಲುಗು, ತಮಿಳು, ಹಿಂದಿ ಮಲಯಾಳಂ ಹೀಗೆ ಐದು ಭಾಷೆಗಳಲ್ಲಿ ರಿಲೀಸಾದ ನಮ್ಮ ಕೆಜಿಎಫ್ ಚಾಪ್ಟರ್ 1 ಸಿನಿಮಾ ಎಲ್ಲ ಭಾಷೆಗಳಲ್ಲೂ ಭರ್ಜರಿ ಯಶಸ್ಸನ್ನು ಕಂಡಿತ್ತು.

ಕೆಜಿಎಫ್ ಚಾಪ್ಟರ್ 1 ಸಿನಿಮಾ ನೋಡಿದ ಸಿನಿಪ್ರೇಕ್ಷಕರು ಕೆಜಿಎಫ್ ಚಾಪ್ಟರ್ 2 ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಕೊರೋನಾ ಬಿಕ್ಕಟ್ಟು ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಕೆಜಿಎಫ್ ಚಾಪ್ಟರ್ 2 ಥಿಯೇಟರ್ಗೆ ಬರಬೇಕಿತ್ತು. ನಮ್ಮ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿರುವ ಕೆ ಜಿ ಎಫ್ ಚಾಪ್ಟರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆಯನ್ನು ಮೂಡಿಸಿದ ಸಿನಿಮಾ ಆಗಿದೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾದ ದಿನವೇ ಅತಿಹೆಚ್ಚು ಲೈಕ್ಸ್ ಮತ್ತು ವ್ಯೂಸ್ ಗಳನ್ನು ಪಡೆದು ದಾಖಲೆ ಬರೆದಿತ್ತು. ರಾಕಿಂಗ್ ಸ್ಟಾರ್ ಯಶ್, ಸಂಜಯ್ ದತ್, ಪ್ರಕಾಶ ರಾಜ್, ರವೀನ ಟಂಡನ್ ಹೀಗೆ ಹಲವಾರು ಗಣ್ಯ ಕಲಾವಿದರು ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಸಂಪೂರ್ಣವಾಗಿ ಮುಗಿದಿದೆ.

ಇನ್ನು ಸಿನೆಮಾ ರಿಲೀಸ್ ಆಗುವುದೊಂದೇ ಬಾಕಿ. ಕಳೆದ 3 ವರ್ಷಗಳಿಂದ ಕೆಜಿಎಫ್ ಸಿನಿಮಾ ಮಾಡುತ್ತಿರೋ ಸೌಂಡ್ ಎಂಥದ್ದು ಅಂತ ಗೊತ್ತೇ ಇದೆ. ಪ್ರೀಕ್ವೆಲ್ ಗಿಂದ ಸೀಕ್ವೆಲ್ 10 ಪಟ್ಟು ದೊಡ್ಡದಾಗಿರುತ್ತದೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಕಳೆದ ವರ್ಷ ಯಶ್ ಅವರ ಹುಟ್ಟುಹಬ್ಬದ ಸಂಭ್ರಮ ದಲ್ಲಿ ರಿಲೀಸ್ ಆದ ಟೀಸರ್, ಹೊಸ ದಾಖಲೆ ಬರೆದಿತ್ತು. ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಈ ಸಿನಿಮಾ ಬಜೆಟ್ ವಿಚಾರದಲ್ಲೂ ಕುತೂಹಲ ಕೆರಳಿಸಿದೆ. ಅಸಲಿ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 1 ಅಲ್ಲ, ಕೆಜಿಎಫ್ ಚಾಪ್ಟರ್ 2 ಎಂದು ಚಿತ್ರತಂಡ ಹೇಳುತ್ತಾ ಬರುತ್ತಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗೊವರೆಗೂ ಹೊಸ ಸಿನಿಮಾ ಅನೌನ್ಸ್ ಮಾಡೋಲ್ಲ ಎಂದಿದ್ದಾರೆ.

ಒಟ್ಟಾರೆ ಕೆಜಿಎಫ್ ಸಿನಿಮಾಗಾಗಿ 5 ರಿಂದ 6 ವರ್ಷ ಮೀಸಲಿಟ್ಟಂತಾಗಿದೆ. ಕೆಜಿಎಫ್ ಸಿನಿಮಾದಿಂದ ನ್ಯಾಷನಲ್ ಸ್ಟಾರ್ ಆಗಿ ಹೊರಹೊಮ್ಮಿದ ರಾಕಿಂಗ್ ಸ್ಟಾರ್ ಯಶ್ ಅವರ ಸಂಭಾವನೆ ಎಷ್ಟಿರಬಹುದು ಎಂದು ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಇದೀಗ ಈ ಪ್ರಶ್ನೆಗೆ ತೆರೆ ಎಳೆದಂತಾಗಿದೆ. ಹೌದು ಕೆಜಿಎಫ್ ಚಾಪ್ಟರ್ 2 ಗೆ ಯಶ್ ಅವರು 25 ರಿಂದ 27 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಮ್ಮ ಕನ್ನಡದ ಸ್ಟಾರ್ ಒಬ್ಬರು, ಬಾಲಿವುಡ್ ಸ್ಟಾರ್ ಗಳನ್ನೂ ಮೀರಿಸುವ ಹಾಗೆ ಸಂಭಾವನೆ ಪಡೆಯುವುದು ಖುಷಿಯ ವಿಷಯ.

%d bloggers like this: