ಭಾರತೀಯ ಚಿತ್ರರಂಗದಲ್ಲೇ ಈ ವರ್ಷ ಅತೀ ಹೆಚ್ಚು ಜನ ‘ಲೈಕ್’ ಮಾಡಿರುವ ಟ್ವೀಟ್ ಇದು

ದಕ್ಷಿಣ ಭಾರತದ ಈ ಖ್ಯಾತ ನಟನ ಪೋಸ್ಟ್ ವೊಂದು ಇಡೀ ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಮೆಚ್ಚುಗೆ ಪಡೆದುಕೊಂಡು ಸುದ್ದಿಯಾಗಿದೆ. ಸಾಮಾನ್ಯವಾಗಿ ಸ್ಟಾರ್ ಸಿನಿಮಾ ನಟರು ತಮ್ಮ ಸಿನಿಮಾದ ಟೀಸರ್, ಟ್ರೇಲರ್ ಗಳನ್ನು ಅತಿ ಹೆಚ್ಚು ಜನರಿಗೆ ತಲುಪುವುದಕ್ಕಾಗಿ ಪ್ರಮೋಶನ್ ಕಾರ್ಯವನ್ನು ಸೋಶಿಯಲ್ ಮೀಡಿಯಾ ಮುಖಾಂತರವೇ ಮಾಡುತ್ತಿರುತ್ತಾರೆ. ಅದು ಹೆಚ್ಚು ಇಂಪ್ಯಾಕ್ಟ್ ಕೂಡ ಆಗುತ್ತದೆ. ಇಂದು ಬಹುತೇಕ ನಟ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಫೇಸ್ ಬುಕ್, ಟ್ವಿಟರ್ ನಲ್ಲ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ಖಾತೆಯಲ್ಲಂತೂ ತಮ್ಮ ಡೈಲಿ ಅಪ್ ಡೇಟ್ ಜೊತೆಗೆ ಸಂಭ್ರಮ ಕ್ಷಣಗಳ ಫೋಟೋಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಅಂತೆಯೇ ತಮಿಳು ಚಿತ್ರರಂಗದ ಇಳಯ ದಳಪತಿ ಖ್ಯಾತಿಯ ನಟ ವಿಜಯ್ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ವಿಜಯ್ ಅವರು ಟ್ವಿಟ್ಟರ್ ನಲ್ಲಿ ಜೂನ್ ತಿಂಗಳಲ್ಲಿ ತಮ್ಮ ನಾಯಕತ್ವದ ಮುಂದಿನ ಸಿನಿಮಾ ಬೀಸ್ಟ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ವೊಂದನ್ನ ಶೇರ್ ಮಾಡಿಕೊಂಡಿದ್ದರು. ಇದರ ಜೊತೆಗೆ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ಮಾಸ್ಟರ್ ಸಿನಿಮಾ ಪೋಸ್ಟರ್ ವೊಂದನ್ನು ಕೂಡ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ ಟ್ವಿಟ್ಟರ್ ನಲ್ಲಿ ಬರೋಬ್ಬರಿ 3.42 ಲಕ್ಷಕ್ಕೂ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ. ಜೊತೆಗೆ ಹತ್ತು ಸಾವಿರಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. ಇದು ಇಡೀ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಮೆಚ್ಚುಗೆ ಮತ್ತು ರೀ ಟ್ವೀಟ್ ಪಡೆದ ಪೋಸ್ಟ್ ಎಂದು ಟ್ವಿಟರ್ ಸಂಸ್ಥೆ ಇತ್ತೀಚೆಗೆ ತಿಳಿಸಿದೆ.

ಇನ್ನು ಕಳೆದ ವರ್ಷದಲ್ಲಿ ಇಳಯ ದಳಪತಿ ವಿಜಯ್ ಅವರ ಸೆಲ್ಫಿ ವಿಥ್ ಫ್ಯಾನ್ಸ್ ಪೋಸ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದವು. ಅಂತೆಯೇ ಟ್ವಿಟರ್ ನಲ್ಲಿ ಅತಿ ಹೆಚ್ಚು ಮೆಚ್ಚುಗೆ ಮತ್ತು ರೀಟ್ವೀಟ್ ಪಡೆದ ಪೋಸ್ಟ್ ಗಳಲ್ಲಿ ವಿಜಯ್ ಅವರ ಬೀಸ್ಟ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಮೊದಲ ಸಾಲಿನಲ್ಲಿದ್ದು, ನಂತರದ ಸ್ಥಾನದಲ್ಲಿ ಅಜಿತ್ ಕುಮಾರ್ ನಟನೆಯ ವಾಲಿ ಮೈ ನಂಬರ್2 ಚಿತ್ರದ ಪೋಸ್ಟರ್ ಇದೆ. ಮೂರನೇಯ ಸ್ಥಾನದಲ್ಲಿ ಮತ್ತೆ ವಿಜಯ್ ಅವರ ಮಾಸ್ಟರ್ ಸಿನಿಮಾದ ಪೋಸ್ಟರ್ ಇದ್ದು, ನಾಲ್ಕನೇಯ ಸ್ಥಾನದಲ್ಲಿ ಸೂರ್ಯ ಅಭಿನಯದ ಜೈ ಭೀಮ್ ಸಿನಿಮಾದ ಪೋಸ್ಟರ್ ಅತಿ ಹೆಚ್ಚು ಮೆಚ್ಚುಗೆ ಮತ್ತು ರೀ ಟ್ವೀಟ್ ಪಡೆದುಕೊಂಡಿದೆ.

%d bloggers like this: