ಭಾರಿ ಹವಾ ಸೃಷ್ಟಿಸುತ್ತಿದೆ ಜೈ ಭೀಮ್ ಚಿತ್ರ, ಮತ್ತೆ ಮೂರು ಅವಾರ್ಡ್ ಗಳು

ಅಂತರಾಷ್ಟ್ರೀಯ ಅವಾರ್ಡ್ ನಲ್ಲಿ ಮತ್ತೆ ಸಡ್ಡು ಮಡಿದ ದಕ್ಷಿಣ ಭಾರತದ ಚಿತ್ರ, ಇತ್ತೀಚೆಗೆ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಓಟಿಟಿ ಮೂಲಕವೇ ಬಿಡುಗಡೆಯಾದರು ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ ಸಿನಿಮಾ ಅಂದರೆ ಅದು ಜೈಭೀಮ್. ತಮಿಳಿನ ನಿರ್ದೇಶಕ ಜ್ಞಾನವೇಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ಸಾಮಾಜಿಕ ಸಂದೇಶ ಇರುವ ಈ ಜೈ ಭೀಮ್ ಸಿನಿಮಾ ಪೊಲೀಸ್ ವ್ಯವಸ್ಥೆಯಲ್ಲಿ ಬುಡಕಟ್ಟು ಸಮುದಾಯವೊಂದರ ಅಮಾಯಕರ ಮೇಲೆ ಯಾವ ರೀತಿ ದೌರ್ಜನ್ಯ ಎಸಗುತ್ತದೆ, ಅದರಿಂದಾಗುವ ಪರಿಣಾಮ ಎಂತ್ತಾದ್ದು ಎಂಬುದನ್ನ ನಿರ್ದೇಶಕರು ಬಹಳ ಸೂಕ್ಷ್ಮವಾಗಿ ಅಚ್ಚು ಕಟ್ಟಾಗಿ ಕಟ್ಟಿಕೊಡುವ ಮೂಲಕ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅಪಾರ ಪ್ರಶಂಸೆ ಪಡೆದುಕೊಂಡಿತ್ತು.

ತಮಿಳುನಾಡಿನ ಜಸ್ಟೀಸ್ ಚಂದ್ರು ಅವರ ಜೀವನದಲ್ಲಿ ನಡೆದ ಈ ಸತ್ಯ ಘಟನೆ ಆಧಾರಿತ ಸಿನಿಮಾದಲ್ಲಿ ನಟ ಸೂರ್ಯ ಅವರು ಚಂದ್ರು ಎಂಬ ವಕೀಲ ಪಾತ್ರದಲ್ಲಿ ಅಮೋಘ ಅಭಿನಯ ಮಾಡಿದ್ದಾರೆ. ಜೊತೆಗೆ ಚಿತ್ರದ ನಾಯಕಿಯಾಗಿ ನಟಿಸಿರುವ ನಟಿ ಲಿಜೋಮೋಲ್ ಜೋಸ್ ಇಬ್ಬರಿಗೂ ಕೂಡ ನೋಯ್ಡಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2022 ನೇ ಸಾಲಿನ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೆ ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಯನ್ನು ಕೂಡ ಜೈ ಭೀಮ್ ಸಿನಿಮಾ ತನ್ನ ಮುಡಿಗೇರಿಸಿಕೊಂಡಿದೆ. ಹೀಗೆ ಟು ಡಿ ಎಂಟರ್ಟೈನ್ ಮೆಂಟ್ ನಿರ್ಮಾಣ ಸಂಸ್ದೆ ನಿರ್ಮಾಣ ಮಾಡಿದ ಜೈ ಭೀಮ್ ಸಿನಿಮಾ ತಂಡ ಒಟ್ಟು ಮೂರು ಅಂತರಾಷ್ಟ್ರೀಯ ಪ್ರಶಸ್ತಿಯನ್ನ ಪಡೆದುಕೊಂಡು ಸಂಭ್ರಮದಲ್ಲಿದೆ.

ಇತ್ತೀಚೆಗಷ್ಟೇ ಜೈ ಭೀಮ್ ಸಿನಿಮಾ ಆಸ್ಕರ್ ಅವಾರ್ಡ್ ನಾಮ ನಿರ್ದೇಶನಗೊಂಡಿರುವುದು ಕೂಡ ತಮಿಳು ಚಿತ್ರರಂಗಕ್ಕೆ ಕೀರ್ತಿ ಸಂದಂತಾಗಿದೆ ಎನ್ನಬಹುದು. ಜೈ ಭೀಮ್ ಸಿನಿಮಾ ದೇಶಾದ್ಯಂತ ಈ ಪ್ರಮಾಣದ ಸದ್ದು ಮಾಡಲು ಪ್ರಮುಖ ಕಾರಣ ಅಂದರೆ ಈ ಸಿನಿಮಾದ ಕಥೆ. ಹೌದು ತಮಿಳುನಾಡಿನ ಇರುಲರ್ ಎಂಬ ಬುಡಕಟ್ಟಿನ ಸಮುದಾಯದ ಮೇಲೆ ಆಗುವ ಪೊಲೀಸ್ ದೌರ್ಜನ್ಯ ಮತ್ತು ಅವರಿಗಾಗುವ ಅನ್ಯಾಯವನ್ನ ಪ್ರತಿಭಟಿಸುವ ಪ್ರತಿನಿಧಿಯಾಗಿ ಚಂದ್ರು ಎಂಬ ವಕೀಲರು ಕಾನೂನಿನ ಹೋರಾಟ ಮಾಡಿದ ಕಥೆಯನ್ನ ಹೊಂದಿದೆ.

ಇದು ಸಂವಿಧಾನಕ್ಕೆ ಇರುವ ಮಹತ್ವದ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಅಪಾರ ಜಾಗೃತಿ ಮೂಡಿಸುವಂತಹ ಸಿನಿಮಾವಾಗಿ ಹೊರ ಹೊಮ್ಮಿತು. ಒಟ್ಟಾರೆಯಾಗಿ ಈ ಜೈ಼ ಭೀಮ್ ಸಿನಿಮಾ ನಟ ಸೂರ್ಯ ಅವರ ಸಿನಿ ವೃತ್ತಿ ಜೀವನದ ಹೊಸ ಮೈಲಿಗಲ್ಲು ಎಂದರೆ ಅತಿಶಯೋಕ್ತಿ ಅಲ್ಲ ಎಂದು ಹೇಳಬಹುದಾಗಿರುತ್ತದೆ. ಇದೀಗ ನೋಯ್ಡಾ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ನಟ ಸೂರ್ಯ ಅವರಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಲಭಿಸುವ ಮೂಲಕ ಅವರ ನಟನಾ ಪ್ರತಿಭೆಗೆ ಗೌರವ ಸಂದಂತಾಗಿದೆ.

%d bloggers like this: