ಭರ್ಜರಿ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ ಈ ಹೊಸ ಕಾರು

ಆಟೋ ಮೊಬೈಲ್ ಕ್ಷೇತ್ರದಲ್ಲಿ ಸುಪ್ರಸಿದ್ದ ಕಾರು ಕಂಪನಿಯಾದ ಹುಂಡೈ ಕಾರು ಕಂಪನಿ ಇತ್ತೀಚೆಗೆ ತಾನೇ ನ್ಯೂ ಜನರೇಷನ್ ಹ್ಯುಂಡೈ ಟ್ಯೂ ಸಾನ್ ಎಸ್ ಯೂ ವಿ ಕಾರು ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಈ ಹುಂಡೈ ನ್ಯೂ ಜನರೇಷನ್ ಟ್ಯೂಸನ್ ಎಸ್ ಯೂ ವಿ ಕಾರಿನ ಟೀಸರ್ ಕಂಡು ಕಾರು ಪ್ರಿಯರು ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಈ ಕಾರನ್ನ ಖರೀದಿ ಮಾಡಲು ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಹೌದು ಹುಂಡೈ ಸಂಸ್ಥೆಯ ಈ ಹೊಸ ಹುಂಡೈ ಟ್ಯೂಸಾನ್ ಎಸ್ ಯೂವಿ ಕಾರು ಇದೇ ಆಗಸ್ಟ್ 4 ರಂದು ಭಾರತೀಯ ಕಾರು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆಟೋ ಮೊಬೈಲ್ ಕ್ಷೇತ್ರದಲ್ಲಿ ಈ ಕಾರು ಮಾರುಕಟ್ಟೆಯಲ್ಲಿ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಆವಿಷ್ಕಾರ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ.

ಸದಾ ತಾವೇ ಮುಂದಿರಬೇಕು, ತಮ್ಮ ಕಂಪನಿಯ ಕಾರುಗಳೇ ಹೆಚ್ಚು ಜನಪ್ರಿಯವಾಗಬೇಕು. ಹೆಚ್ಚೆಚ್ಚು ಮಾರಾಟವಾಗಬೇಕು ಎಂದು ಕಾರು ಪ್ರಿಯರಿಗೆ ಬೇಡಿಕೆ ಮತ್ತು ಅವರ ಅನುಕೂಲಕ್ಕೆ ತಕ್ಕಂತಹ ಫೀಚರ್ ಗಳನ್ನ ಅಳವಡಿಸಿ ನೂತನ ಕಾರುಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುತ್ತಿರುತ್ತವೆ. ಅದರಂತೆ ಇದೀಗ ಮಾರುಕಟ್ಟೆಗೆ ಬರಲು ಸಜ್ಜಾಗಿರುವ ಈ ಹುಂಡೈ ನ್ಯೂ ಜನರೇಷನ್ ಟ್ಯೂಸಾನ್ ಎಸ್ ಯುವಿ ಕಾರು ಕೂಡ ಅನೇಕ ಅಡ್ವಾನ್ಸ್ಡ್ ಫೀಚರ್ ಗಳನ್ನ ಒಳಗೊಂಡಿದೆ. ಈ ಕಾರಿನ ಮುಂಭಾಗ ಪ್ಯಾರಾಮೆಟ್ರಿಕ್ ಜ್ಯುವೆಲ್ ನ ಬೃಹತ್ ಗ್ರಿಲ್ ಹೊಂದಿದೆ. ಆದರ ಜೊತೆಗೆ ಎಲ್ ಇ ಡಿ ಡೇ ಟೈಮ್ ರನ್ನಿಂಗ್ ಲೈಟಿಂಗ್ ಗಳನ್ನ ಹೊಂದಿದೆ. ವಿಶೇಷವಾಗಿ ಈ ಎಸ್ ಯೂ ವಿ ಹೆಡ್ ಲೈಟ್ ಗಳನ್ನ ಲಂಬವಾಗಿ ಗ್ರಿಲ್ ನ ಎರಡೂ ಬದಿಯಲ್ಲಿ ಜೋಡಿಸಲಾಗಿದೆ. ಇನ್ನು ಒಂದಷ್ಟು ಫೀಚರ್ ಗಳನ್ನ ನೋಡುವುದಾದರೆ ಇದರಲ್ಲಿ 18 ಇಂಚಿನ ಅಲಾಯ್ ವ್ಹೀಲ್ , ಬಲ್ಬಸ್ ವ್ಹೀಲ್ ಆರ್ಚ್ ಗಳ ಒಳಗೆ ಇದ್ದು, ರೂಫ್ ಮೌಂಟೆಡ್ ಫಾಕ್ಸ್ ಸಿಲ್ವರ್ ಬ್ಯಾಷ್ ಪ್ಲೇಟ್ ಅನ್ನ ಕೂಡ ಒಳಗೊಂಡಿದೆ.

ಇನ್ನು 10.25 ಇಂಚಿನ ಡಿಸ್ ಪ್ಲೇ ಜೊತೆಗೆ ಇನ್ಫೋಟೈನ್ ಮೆಂಟ್ ಪರದೆಯನ್ನು ಹೊಂದಿದೆ. ಅದರ ಜೊತೆಯಲ್ಲಿ ಆಂಡ್ರಾಯ್ಡ್ ಆಟೋ ಅಂಡ್ ಆಪಲ್ ಕಾರ್ ಪ್ಲೇ ಮತ್ತು ಪಿಯಾನೋ ಬ್ಲ್ಯಾಕ್ ಸರೌಂಡ್ ಗೆ ಸಪೋರ್ಟ್ ಹೊಂದಿರುವ ಟಚ್ ಸ್ಕ್ರೀನ್ ಯುನಿಟ್ ಹೊಂದಿದೆ. ಈ ಕಾರಿನ ಎಲ್ಲಾ ಸೀಟುಗಳು ಲೆಥೆರೆಟ್ ಅಪ್ಹೋಲ್ಸ್ಟರಿ ಆಗಿವೆ. 8- ಸ್ಪೀಕರ್ ಬೋಸ್ ಸಿಸ್ಟಮ್, ಏರ್ ಫ್ಯೂರಿಫೈಯರ್, ರೈನ್ ಸೆನ್ಸಿಂಗ್ ವೈಪರ್ ಗಳು, ಮತ್ತು ಎಲೆಕ್ಟ್ರಿಕ್ ಆಗಿ ಹೊಂದಾಣಿಕೆ ಮಾಡಲಾಗಿದೆ. ಈ ಕಾರು 2.0 ಲೀಟರಿನ 4.ಸಿಲಿಂಡರ್ ನ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಮತ್ತು ಹೊಸ 2.0 ಲೀಟರಿನ ವಿಜಿಟಿ ಟರ್ಬೋ ಡೀಸೆಲ್ ಎಂಜಿನ್ ಹೊಂದಿದೆ. 156 ಬಿಎಚ್ ಪಿ ಪವರ್ ಜೊತೆಗೆ 192 ಎನ್ ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ ಈ ಹುಂಡೈ ಟ್ಯೂಸಾನ್ ಎಸ್ ಯೂ ವಿ ಕಾರು. ಈ ರೀತಿ ಹತ್ತು ಹಲವು ಹೊಸ ಫೀಚರ್ ಒಳೊಗಂಡಿರುವ ಈ ಟ್ಯೂಸನ್ ಕಾರಿನ ಅಡ್ವಾನ್ಸ್ ಬುಕ್ಕಿಂಗ್ ಇದೀಗ ಆರಂಭವಾಗಿದೆ ಎಂದು ಹುಂಡೈ ಕಂಪನಿ ತಿಳಿಸಿದೆ.

%d bloggers like this: