ಭರ್ಜರಿ ಕಿಕ್ ಕೊಡುತ್ತಂತೆ ಈ ಓಲ್ಡ್ ಮಾಂಕ್ ಚಿತ್ರ, ಚಿತ್ರ ನೋಡಿದ ಪ್ರೇಕ್ಷಕರು ಫುಲ್ ಖುಷ್

ಯಾವಾಗಲೂ ವಿಭಿನ್ನ ಚಿತ್ರ ಕಥೆಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ಸ್ಯಾಂಡಲ್ವುಡ್ ನ ರಿಯಲ್ ಸ್ಟಾರ್ ಉಪೇಂದ್ರ ಅವರ ಗರಡಿಯಲ್ಲಿ ಪಳಗಿದ ಪ್ರತಿಭೆ ಶ್ರೀನಿ ಅವರು. ಶ್ರೀನಿ ಅವರು ನಿರ್ದೇಶಿಸಿರುವ ಓಲ್ಡ್ ಮಾಂಕ್ ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದೆ. ಒಂದು ಚಿತ್ರ ರೆಡಿಯಾಗಬೇಕೆಂದರೆ, ಆ ಚಿತ್ರದ ಹಿಂದೆ ಹಲವಾರು ಜನರ ಪರಿಶ್ರಮವಿರುತ್ತದೆ. ಎಷ್ಟೋ ಕಲಾವಿದರು, ತಂತ್ರಜ್ಞರು ತೆರೆಯ ಹಿಂದೆ ಕಷ್ಟ ಪಟ್ಟು ಕೆಲಸ ಮಾಡಿರುತ್ತಾರೆ. ಇವರು ಪಟ್ಟ ಶ್ರಮದ ಪ್ರತಿಫಲ ಬಿಡುಗಡೆಯದ ದಿನವೇ ಪ್ರೇಕ್ಷಕರ ಮುಖದಲ್ಲಿ ಕಾಣುತ್ತದೆ. ಒಂದು ಚಿತ್ರ ಎಲ್ಲರಿಗೂ ಇಷ್ಟವಾಗಬೇಕಾದರೆ ಅದು ಸುಲಭವಲ್ಲ. ಏಕೆಂದರೆ ಕೆಲವರಿಗೆ ಕಾಮಿಡಿ ಕಂಟೆಂಟ್ ಇಷ್ಟವಾದರೆ, ಕೆಲವರಿಗೆ ಮಾಸ್ ದೃಶ್ಯಗಳು ಇಷ್ಟವಾಗುತ್ತವೆ. ಇನ್ನು ಇತ್ತೀಚಿಗಂತೂ ಫ್ಯಾಮಿಲಿ ಒಟ್ಟಿಗೆ ಕೂಳಿತುಕೊಂಡು ನೋಡುವ ಸಿನಿಮಾಗಳು ಬರುತ್ತಿಲ್ಲ ಎಂಬ ಕಂಪ್ಲೇಂಟ್ ಇದೆ.

ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಶ್ರೀನಿ ಅವರು ಓಲ್ಡ್ ಮಾಂಕ್ ಚಿತ್ರವನ್ನು ತಗೆದಿದ್ದಾರೆ. ಈ ಚಿತ್ರವು ತನ್ನ ವಿಭಿನ್ನವಾದ ಟೀಸರ್ ಮತ್ತು ಟ್ರೈಲರ್ ಹಾಗೂ ಬ್ಯೂಟಿಫುಲ್ ಸಾಂಗ್ಸ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಆದರೆ ಈ ಚಿತ್ರ ಬಿಡುಗಡೆಯಾದ ಮೇಲೆ ವೀಕ್ಷಕರು ಈ ಚಿತ್ರವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಸಾಮಾನ್ಯವಾಗಿ ಚಿತ್ರತಂಡಕ್ಕಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕೆಲವರು ಇಡೀ ಸಿನಿಮಾ ಅದ್ಭುತವಾಗಿತ್ತು ಎಂದರೆ, ಇನ್ನೂ ಕೆಲವರು ಸೆಕೆಂಡ್ ಹಾಫ್ ಚೆನ್ನಾಗಿತ್ತು ಎಂದು ಹೇಳಿದರು.

ಇನ್ನೂ ಕೆಲವರು ಈ ಸಿನಿಮಾವನ್ನು ಇಡೀ ಕುಟುಂಬ ಸಮೇತವಾಗಿ ಬಂದು ನೋಡಬಹುದಾದಂತಹ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಎಂದು ಹೇಳಿದರು. ಇನ್ನೂ ಕೆಲವರು ಚಿತ್ರದ ಹಾಸ್ಯದ ಬಗ್ಗೆ ಮಾತನಾಡಿದರು. ಒಟ್ಟಾರೆಯಾಗಿ ಓಲ್ಡ್ ಮಾಂಕ್ ಚಿತ್ರವನ್ನು ನೋಡಿದ ಪ್ರೇಕ್ಷಕರು ಮನಸಾರೆ ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವು ಸೆಲೆಬ್ರಿಟಿಗಳು ಕೂಡ ಈ ಚಿತ್ರವನ್ನು ವೀಕ್ಷಿಸಿದ್ದು, ತುಂಬಾ ಒಳ್ಳೆಯ ಕಥೆಯನ್ನು ಕಾಮಿಡಿ ಮೂಲಕ ಈ ಚಿತ್ರದಲ್ಲಿ ವಿವರಿಸಿದ್ದಾರೆ.

ಫ್ಯಾಮಿಲಿ ಸಮೇತ ಬಂದು ನೋಡಬಹುದಾದಂತಹ ಸಿನಿಮಾ ಇದಾಗಿದೆ ಎಂದು ಹೇಳಿದರು. ಮತ್ತು ಲವ್ ಮ್ಯಾರೇಜ್ ಬಗ್ಗೆ ಪಾಲಕರ ಅಭಿಪ್ರಾಯವನ್ನು ಈ ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ ಹೀಗಾಗಿ ಪೇರೆಂಟ್ಸ್ ನ್ನು ಕರೆದುಕೊಂಡು ಬಂದು ಈ ಚಿತ್ರ ತೋರಿಸಬೇಕು ಎಂದು ಕೆಲವರು ಹೇಳಿದ್ದಾರೆ. ಇನ್ನು ಈ ಹಿಂದೆ ಪುನೀತ್ ರಾಜಕುಮಾರ್ ಅವರೂ ಕೂಡ ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಒಂದು ಕಾರ್ಯಕ್ರಮದಲ್ಲಿ ಶುಭಹಾರೈಸಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಆದಿತಿ ಪ್ರಭುದೇವ ಹಾಗೂ ಶ್ರೀನಿವಾಸ್ ಜೋಡಿ ಮೋಡಿ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

%d bloggers like this: