ಭರ್ಜರಿಯಾಗಿ ಬಿಡುಗಡೆಯಾದ ವಿಕ್ರಾಂತ್ ರೋಣ ಚಿತ್ರದ ಒಂದು ವಾರದ ಗಳಿಕೆ ಇಷ್ಟು

ಕನ್ನಡದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರ ಇದೀಗ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿದೆ. ಹೌದು ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇತ್ತು. ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನ ಬುರ್ಜ್ ಖಲೀಫಾ ಮೇಲೆ ಮೊದಲ ಬಾರಿಗೆ ಟೀಸರ್ ಅನ್ನು ಲಾಂಚ್ ಮಾಡಿದ ಕೀರ್ತಿ ವಿಕ್ರಾಂತ್ ರೋಣ ಚಿತ್ರತಂಡಕ್ಕೆ ಸೇರಿತು. ಇದೀಗ ಜುಲೈ 28 ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಅನ್ನು ಪಡೆದುಕೊಂಡಿದೆ.

ನಿರೀಕ್ಷೆಗೆ ತಕ್ಕಂತೆ ಗಲ್ಲಾಪೆಟ್ಟಿಗೆಯಲ್ಲಿ ಸಹ ಕೋಟಿ ಕೋಟಿ ಹಣ ಬಾಚಿಕೊಂಡಿಂದೆ. ಇದೀಗ ಚಿತ್ರ ಬಿಡುಗಡೆಯಾಗಿ ಒಂದು ವಾರ ಪೂರ್ತಿಯಾಗಿದ್ದು ಈ ವಾರದಲ್ಲಿ ಬರೋಬ್ಬರಿ 150 ಕೋಟಿ ರೂಪಾಯಿಗಳ ಗಳಿಕೆಯತ್ತ ಚಿತ್ರ ಸಾಗುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ 200 ಕೋಟಿ ರೂಪಾಯಿಗಳ ಕ್ಲಬ್ ಗೆ ಸೇರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದು ಕಿಚ್ಚ ಸುದೀಪ್ ಅವರ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಗಳಿಕೆಯಾಗಿದ್ದು ಅವರ ಸಾಧನೆಗಳ ಪಟ್ಟಿಗೆ ಇದು ಒಂದು ಸೇರ್ಪಡೆಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಭಾರತದಲ್ಲೇ ಹಿಂದೆಂದೂ ಇರದ ವಿಎಫ್ಎಕ್ಸ್ ಎಫೆಕ್ಟ್ ಹೊಂದಿರುವ ಚಿತ್ರ ಎಂದು ಸುದ್ದಿಯಾದ ವಿಕ್ರಾಂತ್ ರೋಣ ಚಿತ್ರದ ಪ್ರಮುಖ ಹೈಲೈಟ್ಸ್ ಸುದೀಪ್ ಅವರ ಅದ್ಭುತ ಅಭಿನಯ, ಚಿತ್ರದ ಕ್ಲೈಮ್ಯಾಕ್ಸ್ ಫೈಟಿಂಗ್, ರಕ್ಕಮ್ಮ ಹಾಡು,ಅದ್ಭುತ ಕ್ಯಾಮರಾ ಕೈ ಚಳಕ ಇನ್ನೂ ಹಲವಾರು ಸಂಗತಿಗಳು ಪ್ರೇಕ್ಷಕರನ್ನು ಸಿನಿಮಾ ಮಂದಿರಗಳಿಗೆ ಕರೆ ತರುತ್ತಿವೆ. ಹೀಗಾಗಿಯೇ ವಿಶ್ವಾದ್ಯಂತ ಇನ್ನು ಈ ಚಿತ್ರದ ಹವಾ ನಿಲ್ಲುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡದ ಮತ್ತೊಂದು ಚಿತ್ರ ಇದೀಗ ವಿಶ್ವಾದ್ಯಂತ ಸದ್ದು ಮಾಡುತ್ತಿರುವುದು ಕನ್ನಡಿಗರ ಹೆಮ್ಮೆಯ ಸಂಗತಿಯಾಗಿದೆ.

%d bloggers like this: