ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡ ನಟಿ

ಚಿತ್ರರಂಗವೆಂದರೆ ಹಾಗೆ, ಅದಕ್ಕೆ ಯಾವುದೇ ಭಾಷೆಯ ಬೇಧಭಾವ ಇರುವುದಿಲ್ಲ. ಒಂದು ಉತ್ತಮ ಚಿತ್ರ ಕೊಟ್ಟರೆ ಅದು ಎಲ್ಲ ಭಾಷೆಗಳಲ್ಲಿಯೂ ಹೆಸರು ಗಳಿಸಬಹುದು ಎಂಬುದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಅದೇ ರೀತಿ ನಟ ನಟಿ ಮಣಿಯರ ವಿಷಯಕ್ಕೆ ಬಂದರೆ ಒಂದು ಭಾಷೆಯ ನಟ ಅಥವಾ ನಟಿ ಬೇರೆ ಭಾಷೆಗಳಲ್ಲಿ ಅವಕಾಶಗಳನ್ನು ಪಡೆದುಕೊಂಡು ನಟಿಸುವುದು ಸಾಮಾನ್ಯ. ಅದೇ ರೀತಿ ನಮ್ಮ ಕನ್ನಡದ ನಟಿಯಾಗಿರುವ ಹರ್ಷಿಕಾ ಪೂಣಚ್ಚ ಅವರು ಈಗಾಗಲೇ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಿ ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಈಗ ಅವರು ಮತ್ತೊಂದು ಅಪರೂಪದ ವಿಷಯಕ್ಕೆ ಮುನ್ನುಡಿ ಬರೆದಿದ್ದಾರೆ.

ನಮ್ಮ ದಕ್ಷಿಣ ಭಾರತದ ಚಿತ್ರರಂಗದಿಂದ ಉತ್ತರ ಭಾರತದ ಭೋಜಪುರಿ ಚಿತ್ರೋದ್ಯಮಕ್ಕೆ ಕಾಲಿಟ್ಟವರ ಸಂಖ್ಯೆ ಅತಿ ವಿರಳ. ಆದರೆ ಹರ್ಷಿಕಾ ಪೂಣಚ್ಚ ಅವರು ಭೋಜಪುರಿ ಚಿತ್ರದಲ್ಲಿ ನಟಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಭೋಜಪುರಿ ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಪವನ್ ಸಿಂಗ್ ಅವರೊಡನೆ ಅಭಿನಯಿಸುತ್ತಿದ್ದಾರೆ ಹರ್ಷಿಕಾ ಪೂಣಚ್ಚ. ಈ ವಿಷಯವನ್ನು ಸ್ವತಃ ಹರ್ಷಿಕ ಅವರು ಪವನ್ ಸಿಂಗ್ ಅವರೊಡನೆ ನಿಂತಿರುವ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ನಾನು ಭೋಜಪುರಿ ಚಿತ್ರೋದ್ಯಮಕ್ಕೆ ಕಾಲಿಡುತ್ತಿದ್ದೇನೆ ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರ ಪ್ರತಿಶತ ಐವತ್ತು ಭಾಗ ಚಿತ್ರೀಕರಣವನ್ನು ಮುಗಿಸಿದೆ.

ಇಲ್ಲಿಯವರೆಗೆ ಬಂದ ಮಾಹಿತಿಗಳ ಪ್ರಕಾರ ಯಾಶಿ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಸಂಪೂರ್ಣ ಚಿತ್ರೀಕರಣ ಇಂಗ್ಲೆಂಡ್ ದೇಶದ ರಾಜಧಾನಿ ಲಂಡನ್ನಲ್ಲಿ ನಡೆಯುತ್ತಿದೆ. ಹೀಗಾಗಿ ಕಳೆದ ಹಲವು ದಿನಗಳಿಂದ ಲಂಡನಿನಲ್ಲಿ ಬೀಡುಬಿಟ್ಟಿರುವ ಹರ್ಷಿಕ ಈ ಚಿತ್ರದಲ್ಲಿ ಶ್ರೀಮಂತ ಹುಡುಗಿಯೊಬ್ಬಳ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪ್ರೆಮಾಂಶು ಸಿಂಗ್ ಆಕ್ಷನ್ ಕಟ್ ಹೇಳುತ್ತಿದ್ದು ಅಭಯ್ ಸಿನ್ನಃ ಅವರು ಬಂಡವಾಳ ಹೂಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ಭೋಜಪುರಿಯ ಫೇಮಸ್ ನಾಯಕ ನಟ ಪವನ್ ಸಿಂಗ್ ಅವರೊಡನೆ ನಟಿಸುವ ಅವಕಾಶ ಪಡೆದುಕೊಂಡ ಹರ್ಷಿಕಾ ಅವರಿಗೆ ಈ ಚಿತ್ರ ಯಶಸ್ಸು ನೀಡಲಿ. ಒಟ್ಟಾರೆಯಾಗಿ ಹೇಳುವುದಾದರೆ ಹರ್ಷಿಕಾ ಅವರ ಈ ಹೊಸ ಪ್ರಯತ್ನ ಅವರಿಗೆ ಯಾವ ರೀತಿಯ ಯಶಸ್ಸು ದೊರಕಿಸಿಕೊಡಲಿದೆ ಎಂಬುದನ್ನು ಕಾದುನೋಡಬೇಕು.

%d bloggers like this: