ಬಿಡುಗಡೆ ಆದ ಹದಿನೈದು ದಿನಕ್ಕೆ ಅಮೆಜಾನ್ ಪ್ರೈಮ್ ಅಲ್ಲಿ ಬರುತ್ತಿದೆ ದಕ್ಷಿಣ ಭಾರತದ ಬಿಗ್ ಬಜೆಟ್ ಚಿತ್ರ

ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಥಿಯೇಟರ್ ನಲ್ಲಿ ರಿಲೀಸ್ ಆಗುತ್ತಿದ್ದವು. ಈ ಕೋವಿಡ್ ಸಂಧರ್ಭದಲ್ಲಿ ಲಾಕ್ ಡೌನ್ ಆಗಿ ಥಿಯೇಟರ್ ಗಳು ಬಂದ್ ಆದ ಕಾರಣ ಅನೇಕ ಸ್ಟಾರ್ ನಟರ ಸಿನಿಮಾಗಳು ಅನಿವಾರ್ಯವಾಗಿ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ರಿಲೀಸ್ ಆಗಲು ಆರಂಭ ಆದವು. ಅವುಗಳಲ್ಲಿ ಕೆಲವು ಉತ್ತಮವಾಗಿ ಮೆಚ್ಚುಗೆ ಗಳಿಸಿಕೊಂಡವು. ಆದರೆ ಮಲೆಯಾಳಂ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ಅಭಿನಯದ ಮರಕ್ಕಾರ್ ಚಿತ್ರ ಮಲೆಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಈಗಾಗಲೇ ಥಿಯೇಟರ್ ನಲ್ಲಿ ರಿಲೀಸ್ ಆಗಿ ಕೋಟಿ ಕೋಟಿ ಬಾಚಿ ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿದೆ. ಆದರೆ ಇದೀಗ ಮತ್ತೆ ಓಟಿಟಿ ಅಮೇಜಾ಼ನ್ ಪ್ರೈಮ್ ನಲ್ಲಿಯೂ ಕೂಡ ಬಿಡುಗಡೆ ಆಗುತ್ತಿದೆ.

ಹೌದು ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ನಟ ಮೋಹನ್ ಲಾಲ್ ನಟನೆಯ ಮರಕ್ಕರ್ ಸಿನಿಮಾ ಇದೇ ಡಿಸೆಂಬರ್ 2ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಂಡಿದೆ. ರಿಲೀಸ್ ಆದ ಜಸ್ಟ್ ಮೂರೇ ದಿನದಲ್ಲಿ ಮರಕ್ಕರ್ ಚಿತ್ರ ಸರಿ ಸುಮಾರು 14.56 ಕೋಟಿ ಲೂಟಿ ಮಾಡಿದೆ. ನಟ ಮೋಹನ್ ಲಾಲ್ ಸಿನಿ ವೃತ್ತಿ ಜೀವನದಲ್ಲಿ ಯಾವ ಸಿನಿಮಾ ಕೂಡ ಇಷ್ಟೊಂದು ದೊಡ್ಡ ಮೊತ್ತದ ಹಣ ಗಳಿಕೆ ಮಾಡಿರಲಿಲ್ಲವಂತೆ. ಹೀಗಿರುವಾಗ ಮರಕ್ಕರ್ ಚಿತ್ರ ಒಂದು ವಾರದೊಳಗೆ ಇಪ್ಪತ್ತಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಕೂಡ ಇದೆ ಎಂದು ಚಿತ್ರತಂಡ ಮಾಹಿತಿ ನೀಡಿತ್ತು‌.

ಆದರೆ ಇದೀಗ ಸಿನಿಮಾದ ಅಭೂತಪೂರ್ವ ಯಶಸ್ಸು ಸಿನಿ ಪ್ರೇಕ್ಷಕರಿಂದ ಕೇಳಿ ಬರುತ್ತಿರುವ ಅದ್ಭುತ ಪ್ರತಿಕ್ರಿಯೆಯಿಂದಾಗಿ ಅಮೆಜಾ಼ನ್ ಪ್ರೈಮ್ ನಲ್ಲಿ ಇದೇ ಡಿಸೆಂಬರ್ 17ದಂದು ಪ್ರೀಮಿಯರ್ ಶೋ ಇರಲಿದೆ ಎಂದು ಮರಕ್ಕರ್ ಚಿತ್ರತಂಡ ತಿಳಿಸಿದೆ. ಬರೋಬ್ಬರಿ 80 ಕೋಟಿ ವೆಚ್ಚದ ಈ ಐತಿಹಾಸಿಕ ಕಥೆಯಾಧಾರಿತ ಮರಕ್ಕರ್ ಸಿನಿಮಾಗೆ ಪ್ರಿಯದರ್ಶನ್ ಆಕ್ಷನ್ ಕಟ್ ಹೇಳಿದ್ದು, ಅಂಕಿತ್ ಸೂರಿ ಮತ್ತು ರಾಹುಲ್ ರಾಜ್ ಮ್ಯೂಸಿಕ್ ಮಾಡಿದ್ದು, ಆಂಟೋನಿ ಪೆರುಂಬಾವೂರ್ ಅವರು ಬಂಡವಾಳ ಹೂಡಿದ್ದಾರೆ. ಮೋಹನ್ ಲಾಲ್ ಅವರೊಟ್ಟಿಗೆ ತಾರಾಗಣದಲ್ಲಿ ಸುಹಾಸಿನಿ, ಅರ್ಜುನ್ ಸರ್ಜಾ, ಪ್ರಭು, ಕೀರ್ತಿ ಸುರೇಶ್ ಮತ್ತು ಹಿಂದಿಯ ಖ್ಯಾತ ನಟ ಸುನೀಲ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

%d bloggers like this: