ಬಿಡುಗಡೆ ಆದ ಕೇವಲ ಇಪ್ಪತ್ತು ದಿನಕ್ಕೆ ಅಮೆಜಾನ್ ಪ್ರೈಮ್ ಅಲ್ಲಿ ಬರುತ್ತಿದೆ ಪುಷ್ಪಾ ಚಿತ್ರ

ಇತ್ತೀಚೆಗೆ ತಾನೇ ಗ್ರ್ಯಾಂಡ್ ಆಗಿ ವರ್ಲ್ಡ್ ವೈಡ್ ರಿಲೀಸ್ ಆದ ಟಾಲಿವುಡ್ ಸ್ಟೈಲೀಶ್ ಸ್ಟಾರ್ ಯೂಥ್ ಐಕಾನ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಚಿತ್ರ ಓಟಿಟಿ ಪ್ಲಾಟ್ ಫಾರ್ಮ್ ಗೆ ಬರಲು ಸಿದ್ದವಾಗಿದೆ ಎಂಬ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗಿದೆ. ಭಾರತೀಯ ಚಿತ್ರರಂಗ ಬಹು ನಿರೀಕ್ಷಿತ ಸಿನಿಮಾ ಆಗಿದ್ದ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾ ರಿಲೀಸ್ ಗೂ ಮುನ್ನ ಟೀಸರ್, ಟ್ರೇಲರ್ ಮತ್ತು ಸಾಂಗ್ ಗಳಿಂದ ಸಖತ್ ಕ್ರೇಜ಼್ ಹುಟ್ಟು ಹಾಕಿತ್ತು. ಅದರಂತೆ ಪುಷ್ಪ ಸಿನಿಮಾ ರಿಲೀಸ್ ಆಗುವ ಒಂದು ದಿನದ ಮುನ್ನವೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತ್ತು.

ಪುಷ್ಪ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚಿತ್ರ ಮಂದಿರಗಳು ಸಂಪೂರ್ಣವಾಗಿ ತುಂಬಿ ತುಳುಕಿ ಅಲ್ಲು ಅರ್ಜುನ್ ಅಭಿಮಾನಿಗಳು ಕೂರಲು ಸೀಟ್ ಸಿಗದೇ ನೆಲದ ಮೇಲೆಯೇ ಕೂತು ಸಿನಿಮಾ ವೀಕ್ಷಣೆ ಮಾಡಿದ್ದರು. ಅಷ್ಟರ ಮಟ್ಟಿಗೆ ಈ ಪುಷ್ಪ ಸಿನಿಮಾ ಕ್ರೇಜ಼್ ಹುಟ್ಟು ಹಾಕಿತ್ತು. ಆದರೆ ಪುಷ್ಪ ಸಿನಿಮಾ ರಿಲೀಸ್ ಆದ ನಂತರ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಯಾವಾಗ ಪುಷ್ಪ ಸಿನಿಮಾ ಫ್ಲಾಪ್ ಅಂತ ಗೊತ್ತಾಯಿತೋ ಆಗಿನಿಂದ ಕನ್ನಡಿಗರು ಪುಷ್ಪ ಚಿತ್ರವನ್ನು ಟ್ರೋಲ್ ಮಾಡಲು ಶುರು ಮಾಡಿದರು. ಏಕೆಂದರೆ ತೆಲುಗಿನ ಈ ಒಂದು ಪುಷ್ಪ ಚಿತ್ರ ಕನ್ನಡದ ಹತ್ತು ಕೆಜಿಎಫ್ ಚಿತ್ರಗಳಿಗೆ ಸಮ ಎಂದು ಟಾಲಿವುಡ್ ನಿರ್ದೇಶಕರೊಬ್ಬರು ತಿಳಿಸಿದ್ದರು. ಇದರ ಜೊತೆಗೆ ಪುಷ್ಪ ಚಿತ್ರ ಕರ್ನಾಟಕದಲ್ಲಿ ಕನ್ನಡ ಅವತರಿಣಿಕೆಗಿಂತ ಹೆಅಚಚ ಹಾಗಾಗಿ ಪುಷ್ಪ ಚಿತ್ರವನ್ನ ಸಖತ್ ಟ್ರೋಲ್ ಮಾಡಲಾಯಿತು.

ಪುಷ್ಪ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರು ಕೂಡ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ದಾಖಲೆ ಮಾಡಿದೆ. ಹೌದು ಬಿಡುಗಡೆಯಾದ ಕೇವಲ ಮೂರೇ ವಾರದಲ್ಲಿ ಪುಷ್ಪ ಸಿನಿಮಾ ಬರೋಬ್ಬರಿ ಮುನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಬರೋಬ್ಬರಿ ಅರವತ್ತು ಕೋಟಿ ಗಳಿಸಿರುವ ಹಿಂದಿ ವರ್ಸನ್ ಪುಷ್ಪ ಚಿತ್ರ ತಮಿಳಿನಲ್ಲಿ ಇಪ್ಪತ್ತು ಕೋಟಿ ಗಳಿಕೆ ಮಾಡಿದೆ. ಇದರ ನಡುವೆ ಹೊಸ ಸುದ್ದಿ ಏನಪ್ಪಾ ಅಂದರೆ ಪುಷ್ಪ ಸಿನಿಮಾ ಥಿಯೇಟರ್ ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೂ ಕೂಡ ಪ್ರಸಿದ್ದ ಓಟಿಟಿ ಸಂಸ್ಥೆಗೆ ಬಹುದೊಡ್ಡ ಮೊತ್ತಕ್ಕೆ ಪುಷ್ಪ ಸಿನಿಮಾ ಮಾರಾಟವಾಗಿದೆಯಂತೆ.

ಹೌದು ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ‌ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವಂತಹ ಪುಷ್ಪ ಅಮೆಜಾ಼ನ್ ಪ್ರೈಮ್ ಓಟಿಟಿಗೆ ಸೇಲ್ ಆಗಿದೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಇದೇ ಜನವರಿ 7 ರಂದು ಓಟಿಟಿ ಅಮೆಜಾ಼ನ್ ಪ್ರೈಮ್ ನಲ್ಲಿ ಪುಷ್ಪ ಸಿನಿಮಾ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಪುಷ್ಪ ಚಿತ್ರದ ನಾಯಕ ನಟ, ನಿರ್ದೇಶಕ ಅಥವಾ ನಿರ್ಮಾಪಕರು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಇನ್ನೊಂದೆಡೆ ತೆಲುಗಿನ ನಿರ್ಮಾಪಕರು ನಿರ್ಧಾರ ಮಾಡಿರುವುದು ಏನೆಂದರೆ ಯಾವುದೇ ಸ್ಟಾರ್ ನಟನ ಸಿನಿಮಾಗಳು ರಿಲೀಸ್ ಆದಾಗ ಆ ಚಿತ್ರವನ್ನು ಕನಿಷ್ಟ ಐವತ್ತು ದಿನಗಳವರೆಗೆ ಥಿಯೇಟರ್ ನಲ್ಲಿ ಪ್ರದರ್ಶನಗೊಳಿಸಿ ತದ ನಂತರದಲ್ಲಿ ಓಟಿಟಿಗೆ ಮಾರಾಟ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ.

%d bloggers like this: