ಬಿಡುಗಡೆ ಆದ ಮಾರುತಿ ಸುಜುಕಿಯ ಈ ಹೊಸ ಕಾರಿಗೆ ಒಂದೇ ವಾರಕ್ಕೆ ಬರೋಬ್ಬರಿ 25 ಸಾವಿರ ಕಾರುಗಳ ಬುಕಿಂಗ್

ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನದೇಯಾದ ಅಪಾರ ಗ್ರಾಹಕ ವಲಯ ಹೊಂದಿರುವ ಪ್ರತಿಷ್ಟಿತ ಕಾರು ಸಂಸ್ಥೆಗಳಲ್ಲಿ ಪ್ರಮುಖವಾಗಿರುವ ಕಾರು ತಯಾರಿಕಾ ಸಂಸ್ಥೆ ಅಂದರೆ ಅದು ಮಾರುತಿ ಸುಜುಕಿ ಕಾರು ತಯಾರಕ ಕಂಪನಿ. ಮಾರುತಿ ಸುಜುಕಿ ಕಂಪನಿಯ ಕಾರುಗಳು ತನ್ನ ಗುಣಮಟ್ಟ ಮತ್ತು ಕೈ ಗೆಟುಕುವ ದರದಲ್ಲಿ ಮಾರಾಟ ಆಗುತ್ತಿರುವ ಕಾರಣ ಭಾರತದಲ್ಲಿ ಅಪಾರ ಜನಪ್ರಿಯತೆ ಪಡೆದು ಅತಿ ಹೆಚ್ಚು ಗ್ರಾಹಕ ವಲಯವನ್ನೊಂದಿದೆ. ಹಬ್ಬ ಹರಿ ದಿನಗಳಲ್ಲಿ ಅದರಲ್ಲಿಯೂ ಹೊಸ ವರ್ಷದ ಹಿನ್ನೆಲೆಯಲ್ಲಿ ಕಾರು ಪ್ರಿಯರು ತಮ್ಮಿಷ್ಟದ ಕಾರುಗಳ ಖರೀದಿ ಮಾಡಲು ತುಂಬಾ ಇಷ್ಟ ಪಡುತ್ತಾರೆ. ಅದರಂತೆ ಇದೀಗ ಭಾರತೀಯ ಮಾರುಕಟ್ಟೆಗೆ ಮಾರುತಿ ಸುಜುಕಿ ಕಂಪನಿಯು ತನ್ನ ಸಂಸ್ಥೆಯಿಂದ ನೂತನ ಬಲೆನೋ ಹ್ಯಾಚ್ ಬ್ಯಾಕ್ ಕಾರ್ ಅನ್ನು ಪರಿಚಯ ಮಾಡಿದೆ.

ಹೌದು 2022ರ ಹೊಸ ವರ್ಷದ ಆವೃತ್ತಿಯ ಮಾರುತಿ ಸುಜುಕಿ ಬಲೆನೋ ಹ್ಯಾಚ್ ಬ್ಯಾಕ್ ಮಾದರಿಯ ಕಾರು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ವಾರದಲ್ಲಿ ಭಾರಿ ಬೇಡಿಕೆ ಪಡೆದುಕೊಂಡು ಭರ್ಜರಿ ಮಾರಾಟ ಮಾಡಿಕೊಂಡಿದೆ. ಹೌದು ಈ ಮಾರುತಿ ಸುಜುಕಿ ಬಲೆನೊ ಹ್ಯಾಚ್ ಬ್ಯಾಕ್ ಮಾದರಿಯ ಕಾರು ಬಿಡುಗಡೆಯಾದ ಒಂದೇ ವಾರದಲ್ಲಿ ಬರೋಬ್ಬರಿ ಇಪ್ಪತ್ತೈದು ಸಾವಿರಕ್ಕೂ ಅಧಿಕ ಅಡ್ವಾನ್ಸ್ ಬುಕ್ಕಿಂಗ್ ಪಡೆದುಕೊಂಡು ದಾಖಲೆ ಮಾಡಿದೆ. ಈ ಮಾರುತಿ ಸುಜುಕಿ ಬಲೆನೊ ಹ್ಯಾಚ್ ಬ್ಯಾಕ್ ಕಾರಿಗೆ ಈ ಪ್ರಮಾಣದ ಬೇಡಿಕೆ ಉಂಟಾಗಲು ಅನೇಕ ಕಾರಣಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಮಾರುತಿ ಸುಜುಕಿ ಕಂಪನಿಯ ಕಾರುಗಳಿಗೆ ಅದರದೇ ಆದ ಬ್ರ್ಯಾಂಡ್ ಲೇಬಲ್ ಇದೆ.

ಮಾರುತಿ ಸುಜುಕಿಯ ಕಾರುಗಳು ಉತ್ತಮ ಗುಣಮಟ್ಟ ಫೀಚರ್, ಮೈಲೇಜ್, ಆಕರ್ಷಕ ವಿನ್ಯಾಸ ಒಳಗೊಂಡಂತೆ ವಿವಿಧ ರೀತಿಯ ವೇರಿಯೆಂಟ್ಸ್ ಗಳ ಮೂಲಕ ಗ್ರಾಹಕರ ಮೆಚ್ಚಿನ ಕಾರ್ ಕಂಪನಿಯಾಗಿದೆ. ಇದೀಗ ಲಾಂಚ್ ಆಗಿರುವ ಮಾರುತಿ ಸುಜುಕಿ ಬಲೆನೋ ಹ್ಯಾಚ್ ಬ್ಯಾಕ್ ಕಾರಿನ ವೈಶಿಷಟ್ಯಗಳನ್ನು ತಿಳಿಯುವುದಾದರೆ ಕಾರಿನ ಹಿಂಬದಿಯಲ್ಲಿ ಹೊಸ ಟೈಲ್ ಗೇಟ್ ವಿನ್ಯಾಸ ಹೊಸ ಸಿ-ಆಕಾರದ ಎಲ್.ಇ ಡಿ. ಟೈಲ್ ಲೈಟ್ ಗಳು ಮತ್ತು ರಿಪ್ರೊಫೈಲ್ಡ್ ರಿಯರ್ ಬಂಪರ್ ನೊಂದಿಗೆ ರಿ ಸ್ಟ್ರಕ್ಚರ್ ಪಡೆದುಕೊಂಡಿದೆ. 9.0 ಇಂಚಿನ ಟಚ್ ಸ್ಟ್ರೀನ್ ಇನ್ಫೋಟೈನ್ ಮೆಂಟ್ ವ್ಯವಸ್ಥೆಯನ್ನೊಂದಿದೆ. ಅದರ ಜೊತೆಗೆ ಫಾಸ್ಟ್ ಚಾರ್ಜಿಂಗ್ ಯು.ಎಸ್.ಬಿ ಪೋರ್ಟ್, ಹೆಡ್ ಅಪ್ ಡಿಸ್ಪ್ಲೇಯನ್ನೊಂದಿದೆ. ಇನ್ನು ಎಬಿಎಸ್, ಕೀಲೆಸ್ ಎಂಟ್ರಿ, ಆಟೋ ಮ್ಯಾಟಿಕ್ ಕ್ಲೈಮ್ಯಾಕ್, ಇಎಸ್ ಪಿ ಮತ್ತು ಇಬಿಡಿ ಸಹ ಸೇರ್ಪಡೆಯಾಗಿದೆ.

ಮಾರುತಿ ಸುಜುಕಿ ಬಲೆನೊ ಹ್ಯಾಚ್ ಬ್ಯಾಕ್ ಕಾರು 360 ಡಿಗ್ರಿ ವ್ಯೂ ಕ್ಯಾಮೆರಾ, 1.2 ಲೀಟರಿನ ಪೆಟ್ರೋಲ್ ಇಂಜಿನ್ ಮಾದರಿಯ ಫೈವ್ ಸ್ಪೀಡ್ ಮ್ಯಾನ್ಯುಯಲ್ ಮತ್ತು ಫೈವ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನೊಂದಿದೆ. ಇದು 115 ಎನ್.ಎಂ. ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಈ ಬಲೆನೊ ಹ್ಯಾಚ್ ಬ್ಯಾಕ್ ಕಾರು ಪ್ರತಿ ಲೀಟರಿಗೆ 22.35 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ ಪರ್ಲ್ ಆಕ್ಟ್ರಿಕ್ ವೈಟ್, ಸ್ಪ್ಲೈಂಡಿಡ್ ಸಿಲ್ವರ್, ಗ್ರಾಂಡ್ಯೂರ್ ಗ್ರೇ, ಸೆಲೆಸ್ಟಿಯಲ್ ಬ್ಲೂ, ಓಪ್ಯೂಲೆಂಟ್ ರೆಡ್ ಮತ್ತು ಲಕ್ಸ್ ಬೀಜ್ ಅಂತಹ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಾಗಲಿದ್ದು, ಮಾರುಕಟ್ಟೆಯಲ್ಲಿ ಇದರ ಎಕ್ಸ್ ಶೋರೂಂ ಬೆಲೆಯು 6.35 ಲಕ್ಷದಿಂದ ಆರಂಭವಾಗಿ 9.35 ಲಕ್ಷ ರೂಗಳನ್ನೊಂದಿದೆ. ಇನ್ನು ಮಾರುತಿ ಸುಜುಕಿ ಕಂಪನಿಯ ಕಾರುಗಳು ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹುಂಡೈ, ಟಾಟಾ ಮೋಟಾರ್ಸ್ ಅಂತಹ ಕಂಪನಿಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ.

%d bloggers like this: