ಬಿಡುಗಡೆ ಆದ ಮೊದಲ ದಿನವೇ ದೊಡ್ಡ ಮೊತ್ತದ ಗಳಿಕೆ ಮಾಡಿ ದಾಖಲೆ ಬರೆದ ದಕ್ಷಿಣ ಭಾರತದ ಚಿತ್ರ

ಅಜಿತ್ ಅವರ ವಲಿಮೈ ಚಿತ್ರವು ಫೆಬ್ರವರಿ 24ರಂದು ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಸೀನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಲಿವುಡ್ನ ನಿರ್ಮಾಪಕ ಬೋನಿ ಕಪೂರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು, ತೆಲುಗು, ಹಿಂದಿ, ಕನ್ನಡ ಮೂರು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ವಲಿಮೈ ಸಿನಿಮಾದಲ್ಲಿ ಸೆನ್ಸಾರ್ ಮಂಡಳಿಯು 15ತಿದ್ದುಪಡಿಗಳನ್ನು ಮಾಡಿ, ಯು/ಎ ಸರ್ಟಿಫಿಕೇಟ್ ಕೊಟ್ಟಿತ್ತು. ಇನ್ನೂ ಕೆಲವು ಅಂಶಗಳಿಗೆ ದಕ್ಕೆ ತರುವಂತಹಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿತ್ತು. ಎಚ್ ವಿನೋತ್, ವಲಿಮೈ ಸಿನಿಮಾವನ್ನು ನಿರ್ದೇಶಿಸಿದ್ದು, ಅಜಿತ್ ಅವರು ಈ ಸಿನಿಮಾದಲ್ಲಿ ಅವರು ಪೊಲೀಸ್ ಪಾತ್ರಧಾರಿಯಾಗಿ ರಂಜಿಸಲಿದ್ದಾರೆ.

ಈ ಚಿತ್ರವು ಆಕ್ಷನ್ ಮತ್ತು ರೇಸಿಂಗ್ ದೃಶ್ಯಗಳಿಂದ ಕೂಡಿದ್ದು ಈ ಚಿತ್ರದಲ್ಲಿ ಕಾರ್ತಿಕೇಯ ಅವರು ಅಜಿತ್ ವಿರುದ್ಧ ಹೋರಾಡಲಿದ್ದಾರೆ. ಹುಮಾ ಕುರೇಶಿ, ಯೋಗಿ ಬಾಬು, ಸುಮಿತ್ರ, ಪುಗಜ್, ರಾಜ್ ಅಯ್ಯಪ್ಪ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಯುವನ್ ಶಂಕರ್ ರಾಜಾ ಹಾಡುಗಳಿಗೆ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತವನ್ನು ಘಿಬ್ರನ್ ಸಂಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಸರಿಯಾಗಿದ್ದರೆ ಈ ಚಿತ್ರವನ್ನು ಜನೆವರಿ13 ಪೊಂಗಲ್ ಹಬ್ಬದ ದಿನದಂದು ಬಿಡುಗಡೆ ಮಾಡಲು ಚಿತ್ರತಂಡವು ನಿರ್ಧರಿಸಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕೋವಿಡ್ ಕಾರಣದಿಂದಾಗಿ ಪ್ರೇಕ್ಷಕರು ಮೊದಲಿನಷ್ಟು ಚಿತ್ರ ಮಂದಿರಗಳಿಗೆ ಬರುತ್ತಿಲ್ಲ ಎನ್ನುವ ಮಾತಿದೆ.

ಹಲವಾರು ಬಾರಿ ಈ ಮಾತು ನಿಜವಾಗಿದೆ. ಇದರೊಂದಿಗೆ ಹಲವು ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳು ಒಟ್ಟಿಗೆ ಬಿಡುಗಡೆಯಾಗುತ್ತಿರುವುದರಿಂದ ಕಲೆಕ್ಷನ್ಗೆ ಹೊಡೆತ ಬೀಳುತ್ತಿದೆ. ಅಜಿತ್ ಅವರ ವಲಿಮೈ ಚಿತ್ರವನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂನಲ್ಲಿ ಬಿಡುಗಡೆ ಮಾಡಲು 300 ಕೋಟಿ ರುಪಾಯಿಯ ಒಪ್ಪಂದದ ಆಫರ್ ನೀಡಲಾಗಿತ್ತು. ಈ ಚಿತ್ರವನ್ನು ಜನರು ಥಿಯೇಟರ್ ಗಳಲ್ಲಿ ನೋಡಬೇಕೆಂಬ ಉದ್ದೇಶದಿಂದ ನಿರ್ಮಿಸಿರುವುದರಿಂದ, ಸಿನಿಮಾದ ನಿರ್ಮಾಪಕರು ಇಷ್ಟು ದೊಡ್ಡ ಮೊತ್ತದ ಒಪ್ಪಂದವನ್ನು ತಿರಸ್ಕರಿಸಿದ್ದರು. ಚಿತ್ರ ಬಿಡುಗಡೆ ತಡವಾದ ಮಾತ್ರಕ್ಕೆ ಜನರಿಗೆ ಸಿನಿಮಾದ ಮೇಲಿರುವ ನಿರೀಕ್ಷೆ ಹೋಗುವುದಿಲ್ಲ ಎಂದು ಕೂಡ ಅವರು ಹೇಳಿದ್ದರು. ಇದೀಗ ನಿರ್ಮಾಪಕರ ಮಾತು ನಿಜವಾಗಿದೆ. ಸಾಕಷ್ಟು ಹೈಪ್ ನೊಂದಿಗೆ ಈ ಸಿನಿಮಾ ರಿಲೀಸ್ ಆಗಿದ್ದರಿಂದ ಮೊದಲ ದಿನ ಒಳ್ಳೆಯ ಕಲೆಕ್ಷನ್ ಆಗಿದೆ.

ಹೌದು ವಲಿಮೈ ಚಿತ್ರವು, ರಜನಿಕಾಂತ್ ನಟನೆಯ ಅಣ್ಣಾಥೆ ಸಿನಿಮಾದ ರೆಕಾರ್ಡ್ ನ್ನು ಬ್ರೇಕ್ ಮಾಡಿದೆ. ಹೌದು ಅಣ್ಣಾಥೆ ಸಿನಿಮಾ ತಮಿಳುನಾಡಿನಾದ್ಯಂತ 34 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಆದರೆ ಈಗ ವಲಿಮೈ ಚಿತ್ರವು ಚೆನ್ನೈ ಒಂದರಲ್ಲೇ 1.82 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಮತ್ತು ತಮಿಳುನಾಡಿನಾದ್ಯಂತ ಒಟ್ಟು 36 ಕೋಟಿ ರೂಪಾಯಿಯನ್ನು ಈ ಚಿತ್ರ ಗಳಿಕೆ ಮಾಡಿದೆ. ಭಾರತ ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಅಮೆರಿಕ, ಮಲೇಷಿಯಾ, ಸಿಂಗಾಪುರ್ ನಲ್ಲಿಯೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ವಿಶ್ವದಾದ್ಯಂತ ಈ ಸಿನಿಮಾ ಒಟ್ಟಾರೆಯಾಗಿ ಒಂದೇ ದಿನಕ್ಕೆ 62 ಕೋಟಿ ರೂಪಾಯಿ ಬಾಚಿಕೊಂಡಿದೆ.

%d bloggers like this: