ಬಿಡುಗಡೆ ಆಗಿ ಒಂದು ವರ್ಷದ ನಂತರ ಮತ್ತೆ ಕೈ ಹಿಡಿದ ಅವನೇ ಶ್ರೀಮನ್ನಾರಾಯಣ

2020ರ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ಕನ್ನಡ ಚಿತ್ರರಂಗದ ಇಬ್ಬರು ಸ್ಟಾರ್ ನಟರಿಗೆ ಲಭಿಸಿದೆ! ದಕ್ಷಿಣ ಭಾರತ ಚಿತ್ರೋದ್ಯಮಗಳಾದ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಮಾಡಿದ ಆ ವರ್ಷದ ಸಿನಿಮಾ ಸಾಧಕರನ್ನು ಗುರುತಿಸಿ ಅವರಿಗೆ ಮತ್ತಷ್ಟು ಹುರುಪು, ಉತ್ಸಾಹ ತುಂಬುವುದರ ಜೊತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನೀಡುವ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಯನ್ನು ಆಯಾ ಭಾಷೆಯ ನಟರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ. ಈ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ನಾಲ್ಕು ಭಾಷೆಯ ನಟರು, ತಂತ್ರಜ್ಞರ ಹೆಸರುಗಳು ಪ್ರಕಟಣೆಗೊಂಡಿದೆ ಆದರೆ, ಈ ಪ್ರಶಸ್ತಿ ಪ್ರಧಾನ ಮಾಡುವ ದಿನಾಂಕವನ್ನು ಕೊರೋನ ವೈರಸ್ ಪರಿಣಾಮ ಇನ್ನು ನಿಗದಿ ಪಡಿಸಿಲ್ಲ. ಇನ್ನು ಈ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ತಮಿಳು ಭಾಷೆಯಲ್ಲಿ ಅತ್ಯುತ್ತಮ ನಟರಾಗಿ ನಾಯಕ ನಟ ಧನುಷ್ ಅವರು ಪ್ರಶಸ್ತಿಯನ್ನು ಪಡೆದರೆ, ಅತ್ಯುತ್ತಮ ನಟಿ ಎಂದು ಜ್ಯೋತಿಕಾ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ತಮಿಳು ಚಿತ್ರರಂಗದಲ್ಲಿ ತಾಲಾ ಎಂದೇ ಖ್ಯಾತಿಯಾಗಿರುವ ನಟ ಅಜಿತ್ ಅವರು ಅತ್ಯುತ್ತಮ ಬಹುಮುಖ ಕಲಾವಿದ ಪಾತ್ರಕ್ಕೆ ಭಾಜನರಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಮಲಯಾಳಂ ಭಾಷೆಯಲ್ಲಿ ಅತ್ಯುತ್ತಮ ನಟರಾಗಿ ತನ್ನ ಸಹಜ ಅಭಿನಯದ ಮೂಲಕವೇ ಮಾಸ್ ಅಂಡ್ ಕ್ಲಾಸ್ ಅಭಿಮಾನಿ ಬಳಗ ಹೊಂದಿರುವ ನಟ ಮೋಹನ್ ಲಾಲ್ ಅವರು ಬಹುಮುಖ ಕಲಾವಿದ ಎಂದು ಗುರುತಿಸಿ ದಾದಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ, ಅತ್ಯುತ್ತಮ ನಟರಾಗಿ ಸೂರಜ್ ವೆಂಜರ್ ಮೂಡು ಅವರು ಭಾಜನರಾದರೆ, ಅತ್ಯತ್ತಮ ನಟಿಯಾಗಿ ಪಾರ್ವತಿ ತಿರುವೊತ್ತು ಅವರಿಗೆ ಒಲಿದಿದೆ.

ತೆಲುಗು ಚಿತ್ರರಂಗದಲ್ಲಿ ಕಲಾಸೇವೆ ಪರಿಗಣಿಸಿ ಮತ್ತು ತೆಲುಗು ಚಿತ್ರರಂಗದ ಹೊಸ ಪ್ರತಿಭೆಯಾಗಿರುವ ನವೀನ್ ಪಾಲಿಶೆಟ್ಟಿ ಅವರಿಗೆ ಅತ್ಯುತ್ತಮವಾದ ನಟ ಪ್ರಶಸ್ತಿಗೆ ಪಾತ್ರರಾಗಿದ್ದು, ಅತ್ಯುತ್ತಮ ನಟಿಯಾಗಿ ಸೌತ್ ಕ್ರಷ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಭಾಜನರಾಗಿದ್ದಾರೆ.

ಅತ್ಯುತ್ತಮ ಸಿನಿಮಾ ಎಂಬ ಪ್ರಶಸ್ತಿಗೆ ನಟ ನಾನಿ ಅಭಿನಯದ ಜೆರ್ಸಿ ಸಿನಿಮಾ ಪಾತ್ರವಾಗಿದೆ, ಬಹುಮುಖ ನಟ ಪ್ರಶಸ್ತಿಗೆ ನಟ ನಾಗರ್ಜುನ ಅಕ್ಕಿನೇನಿಯವರು ಭಾಜನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕಳೆದ ಬಾರಿ ಅಂದರೆ 2019ರಂದು ದಾದಾಸಾಹೇಬ್ ಫಾಲ್ಕೆ ಸೌಥ್ ಪ್ರಶಸ್ತಿಗೆ ರಾಕಿಂಗ್ ಸ್ಟಾರ್ ಯಶ್ ಅವರು ಭಾಜನರಾಗಿದ್ದರು. ಇದೀಗ 2020 ವರ್ಷದ ಅತ್ಯುತ್ತಮ ನಟರಾಗಿ ಸಿಂಪಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇದೀಗ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯ ಪ್ರೇಕ್ಷಕರು ಗುರುತಿಸುವಂತಹ ಸ್ಟಾರ್ ನಟರಾಗಿ ಬೆಳೆದಿರುವ ಮತ್ತು ತನ್ನ ಸಹಜ ಅಭಿನಯದ ಮೂಲಕವೇ ಕ್ಲಾಸ್ ಅಂಡ್ ಮಾಸ್ ಅಪಾರ ಅಭಿಮಾನಿ ಹೊಂದಿರುವ ನಟ ಅಂದರೆ ಅದು ರಕ್ಷಿತ್ ಶೆಟ್ಟಿಎನ್ನಬಹುದು.

ಈ 2020 ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟರಾಗಿ ರಕ್ಷಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ, ರಕ್ಷಿತ್ ಶೆಟ್ಟಿ ಆರಂಭದಲ್ಲಿ ಬೆಂಗಳೂರಿನ ಐಟಿ ಉದ್ಯೋಗಿಯಾಗಿ ಕೆಲಸ ಮಾಡುತಿದ್ದ ರಕ್ಷಿತ್ ಶೆಟ್ಟಿ ಬಣ್ಣದ ಗೀಳಿನಿಂದ ಹಿರಿಯ ನಟ, ರಂಗಕರ್ಮಿ, ಖ್ಯಾತ ನಿರ್ದೇಶಕ ಟಿಎಸ್ ನಾಗಾಭರಣ ಗರಡಿಯಲ್ಲಿ ಒಂದಷ್ಟು ನಾಟಕಗಳನ್ನು ಮಾಡುವುದರ ಮೂಲಕ ನಟನೆಯ ಬಗ್ಗೆ ತಿಳಿದುಕೊಂಡ ನಂತರ 2010ರಲ್ಲಿ ನಮ್ ಏರಿಯಲ್ ಒಂದಿನಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಕ್ಷಿತ್ ಶೆಟ್ಟಿ ನಂತರ ತಾವೇ ನಾಯಕರಾಗಿ ತುಘಲಕ್ ಚಿತ್ರ ಮಾಡಿದರು ಅದು ಚಿತ್ರಮಂದಿರದಲ್ಲಿ ನಿಲ್ಲಲಿಲ್ಲ.

ನಂತರದಲ್ಲಿ ಸುನಿ ನಿರ್ದೇಶನದಲ್ಲಿ ಬಂದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಸಿನಿಮಾದಲ್ಲಿ ನಾಯಕರಾಗಿ ಅಭಿನಯಿಸಿದ ರಕ್ಷಿತ್ ಯಶಸ್ಸು ಕಂಡರು, ಅಂದಿನಿಂದ ಹಿಂತಿರುಗಿ ನೋಡದ ರಕ್ಷಿತ್ ಶೆಟ್ಟಿ ಇಂದು ಯೂಥ್ ಐಕಾನ್ ಆಗಿ ಬೆಳೆದು ನಿಂತಿದ್ದಾರೆ. ಇನ್ನು ಕಳೆದ ವರ್ಷ ಅಂದರೆ ಡಿಸೆಂಬರ್ 2019ರಲ್ಲಿ ನಾಲ್ಕು ಭಾಷೆಯಲ್ಲಿ ತೆರೆಕಂಡು ಭರ್ಜರಿ ಕಲೆಕ್ಷನ್ ಜೊತೆಗೆ ಅಭೂತ ಪೂರ್ವ ಯಶಸ್ಸು ಕಂಡ ಅವನೇ ಶ್ರೀಮನ್ನಾರಯಣ ಚಿತ್ರದ ಅಭಿನಯಕ್ಕಾಗಿ ರಕ್ಷಿತ್ ಶೆಟ್ಟಿಯವರಿಗೆ 2021ರ ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶ್ರೀಮನ್ನಾರಾಯಣ ಬಿಡುಗಡೆ ಆಗಿ ಬರೋಬ್ಬರಿ ಒಂದು ವರ್ಷವಾದರೂ ಅದರ ಗೆಲುವು ರಕ್ಷಿತ್ ಅವರಿಗೆ ಈಗ ಸಿಕ್ಕಿರುವುದು ಸಂತೋಷದ ಸುದ್ದಿ.

ಜೊತೆಗೆ ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಅವರಿಗೆ ಬಹುಮುಖ ನಟ ಎಂದು ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಟಗರು ಚಿತ್ರದಲ್ಲಿನ ಅವರ ಅಭಿನಯ, ಡ್ಯಾನ್ಸ್ ಯುವಕರನ್ನು ಯುವನಟರನ್ನು ನಾಚಿಸುವಂತಿದೆ. ಇನ್ನು ಕನ್ನಡದ ಅತ್ಯುತ್ತಮ ಸಿನಿಮಾ ಶಿವರಾಮಕಾರಂತರ ಕಾದಂಬರಿ ಆಧಾರಿತವಾಗಿದ್ದ ಪಿ.ಶೇಷಾದ್ರಿಯವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಮೂಕಜ್ಜಿಯ ಕನಸುಗಳು ಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ, ನಟ ಜಗ್ಗೇಶ್ ಅಭಿನಯದ ಪ್ರೀಮಿಯರ್ ಪದ್ಮಿನಿ ಚಿತ್ರದ ನಿರ್ದೇಶಕ ರಮೇಶ್ ಇಂದಿರಾ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ, ಹರಿಕೃಷ್ಣ ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎನ್ನಲಾಗಿದೆ.

%d bloggers like this: