ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸಂಸ್ಥೆಯ ಪೈಕಿ ಟಿವಿಎಸ್ ಮೋಟಾರ್ ಕೂಡ ಒಂದಾಗಿದೆ. ಟಿವಿಎಸ್ ಮೋಟಾರ್ ಅಂದಾಕ್ಷಣ ಬಹುತೇಕರಿಗೆ ತುಂಬಾ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ವಾಹನಗಳು ಎಂಬ ಮನೋಭಾವನೆಯೇ ಹೆಚ್ಚಾಗಿ ಮೂಡುತ್ತದೆ. ಈ ಭಾವನೆ ಮೂಡಲು ಟಿವಿಎಸ್ ಮೋಟಾರ್ ಸಂಸ್ಥೆ ಕೂಡ ಗ್ರಾಹಕರ ವಿಶ್ವಾಸರ್ಹತೆಯನ್ನ ಉಳಿಸಿಕೊಂಡು ಬಂದಿದೆ. ಇನ್ನು ಈ ಆಟೋ ಮೊಬೈಲ್ ಕ್ಷೇತ್ರ ಅಂದ್ರೆ ಸದಾ ಅಪ್ ಡೇಟ್ ಆಗುತ್ತಿರುವ, ಆಗಲೇಬೇಕಾದ ಉದ್ಯಮ ಎನ್ನಬಹುದು. ತಾಂತ್ರಿಕತೆ ಬೆಳೆಯುತ್ತಾ ಗ್ರಾಹಕರ ಅಭಿರುಚಿ ಆಸಕ್ತಿ ಕೂಡ ವಿಭಿನ್ನವಾಗಿರುತ್ತದೆ. ಹಾಗಾಗಿ ದ್ವಿಚಕ್ರ ವಾಹನ ಕಂಪನಿಗಳು ಕೂಡ ಬಹಳ ಸ್ಪರ್ಧೆಯನ್ನ ಎದುರಿಸಲೇಬೇಕಾಗಿರುತ್ತದೆ.

ಇದರ ಹಿನ್ನೆಲೆಯಲ್ಲಿ ಬಜಾಜ್, ಆಕ್ಟಿವಾ, ಸುಜುಕಿ ಅಂತಹ ದಿಗ್ಗಜ ಸಂಸ್ಥೆಗಳು ಪ್ರತಿ ವರ್ಷ ವಿಶಿಷ್ಟ ಬಗೆಯ ವಿಭಿನ್ನ ಫೀಚರ್ ಹೊಂದಿರುವ ವಾಹನಗಳನ್ನ ಬಿಡುಗಡೆ ಮಾಡುತ್ತಲೇ ಇರುತ್ತವೆ. ಅವುಗಳಂತೆ ಇದೀಗ ಟಿವಿಎಸ್ ಮೋಟಾರ್ ಕಂಪನಿ ಕೂಡ ಹೊಸ ವಿನ್ಯಾಸ ವೈಶಿಷ್ಟ್ಯತೆಯೊಂದಿಗೆ ಮತ್ತೊಂದು ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. ಹೌದು ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ರೋನಿನ್ 225 ಬೈಕ್ ಅನ್ನ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ ನೋಡಲು ಅತ್ಯಾಕರ್ಷಕವಾಗಿದ್ದು, ಮೂರು ವಿಭಿನ್ನ ವೇರಿಯೆಂಟ್ ಗಳಲ್ಲಿ ಈ ಬೈಕ್ ಬಿಡುಗಡೆಗೊಂಡಿದೆ. 225 ಸಿಸಿ ಇಂಜಿನ್ ಕೆಪಾಸಿಟಿ ಹೊಂದಿದ್ದು, ಫೈವ್ ಸ್ಪೀಡ್ ವೇಗವನ್ನೊಂದಿದೆ. ಈ ಬೈಕ್ ತೂಕ ಸರಿ ಸುಮಾರು 159 ಕೆ.ಜಿಯಷ್ಟಿದೆ. ಈ ಟಿವಿಎಸ್ ರೋನಿನ್ ಬೈಕ್ 14 ಲೀಟರ್ ಇಂಧನ ಸಾಮರ್ಥ್ಯವನ್ನೊಂದಿದೆ.



ಈ ರೋನಿನ್ ಎಸ್. ಎಸ್ ಸಿಂಗಲ್ ಚಾನಲ್ ಎಬಿಎಸ್ 1,49,000 ರೂ ಮೌಲ್ಯವನ್ನೊಂದಿದ್ದು, ರೋನಿನ್ ಡಿ.ಎಸ್ ಸಿಂಗಲ್ ಚಾನಲ್ ಎ.ಬಿ.ಎಸ್. 1,56,500 .ಮೌಲ್ಯ ಮತ್ತು ರೋನಿನ್ ಟಿ.ಡಿ ಡ್ಯುಯಲ್ ಚಾನಲ್ ಎಬಿಎಸ್ 1,68,750 ಮೌಲ್ಯವನ್ನೊಂದಿದೆ. ಕಪ್ಪು ಬಣ್ಣ ಸೇರಿದಂತೆ ಒಟ್ಟು ಆರು ಬಣ್ಣಗಳಲ್ಲಿ ಈ ಟಿವಿಎಸ್ ರೋನಿನ್ ಬೈಕ್ ಲಭ್ಯವಿರಲಿದೆ. 20 ಬಿಎಚ್ಪಿ ಪವರ್, ಬಿ.ಎಸ್. 6 ಪವರ್ ಹೊಂದಿದೆ. ಇನ್ನು ಭಾರತೀಯ ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆ ಆಗಿರುವ ಟಿವಿಎಸ್ ರೋನಿನ್ 225 ಬೈಕ್ ಬಜಾಜ್ ಪಲ್ಸರ್ ಮತ್ತು ಬಜಾಜ್ ಡೋಮಿನರ್ ಬೈಕ್ ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬೈಕ್ ಪ್ರಿಯರು ಈ ಟಿವಿಎಸ್ ರೋನಿನ್ ಬೈಕ್ ಗೆ ಆಕರ್ಷಿತರಾಗುತ್ತಿದ್ದಾರೆ.