ಹೌದು ಇತ್ತೀಚೆಗೆ ತಾನೇ ರಾಮ್ ಚರಣ್ ತೇಜಾ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಅಭಿನಯದ ಮಲ್ಟಿ ಸ್ಟಾರರ್ ರೌದ್ರಂ ರಣಂ ರುಧಿರ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಭಾರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಆದರೆ ಆರ್.ಆರ್.ಆರ್ ಚಿತ್ರತಂಡಕ್ಕೆ ಇದೀಗ ಆಂಧ್ರ ಪ್ರದೇಶ ಸರ್ಕಾರ ಶಾಕ್ ವೊಂದನ್ನ ನೀಡಿದೆ. ಹೌದು ಕೆಲವು ದಿನಗಳ ಹಿಂದೆಯಷ್ಟೇ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರ ಪ್ರದೇಶ ಸರ್ಕಾರ ಸಿನಿಮಾ ರೆಗ್ಯೂಲೇಶನ್ ಆಕ್ಟ ನಲ್ಲಿ ತಿದ್ದು ಮಾಡಿದೆ. ಈ ಹೊಸ ಫಿಲ್ಮ್ ರೆಗ್ಯೂಲೇಶನ್ ಆಕ್ಟ್ಗೆಅಸೆಂಬ್ಲಿಯಲ್ಲಿ ಸರ್ವಪಕ್ಷಗಳ ಒಪ್ಪಿಗೆ ಕೂಡ ದೊರೆತಿದೆ. ಈ ಹೊಸ ಫಿಲ್ಮ್ ರೆಗ್ಯೂಲೇಶನ್ ಆಕ್ಟ್ ಗೆ ನಿರ್ಮಾಪಕರು ಮತ್ತು ಚಲನಚಿತ್ರ ಮಂದಿರದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಸಿನಿ ಪ್ರಿಯರಿಗೆ ಮಾತ್ರ ಈ ಹೊಸ ಸಿನಿಮಾ ರೆಗ್ಯೂಲೇಶನ್ ಆಕ್ಟ್ ಅನುಕೂಲ ಮಾಡಿತ್ತು.

ಹಾಗಾದರೆ ನೂತನ ಸಿನಿಮಾ ರೆಗ್ಯೂಲೇಶನ್ ಆಕ್ಟ್ ನಲ್ಲಿ ತಿದ್ದುಪಡಿ ಮಾಡಿ ಜಾರಿ ಮಾಡಿರುವ ಹೊಸ ನಿಯಮಗಳು ಏನಿರಬಬಹುದು. ಯಾವ ಕಾರಣಕ್ಕೆ ಈ ನಿಯಮವನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಯುವುದಾದರೆ ಈ ನಿಯಮದ ಪ್ರಕಾರ ಟಿಕೆಟ್ ದರವನ್ನು ಸರ್ಕಾರವೇ ನಿಗದಿ ಮಾಡಲಿದ್ದು, ಥಿಯೇಟರ್ ಗಳಲ್ಲಿ ದಿನವೊಂದಕ್ಕೆ ನಾಲ್ಕು ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ಈ ಮೊದಲು ಥಿಯೇಟರ್ ಮಾಲೀಕರು ಹೆಚ್ಚು ಹಣ ಮಾಡುವ ಉದ್ದೇಶದಿಂದ ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಆದಾಗ ಟಕೆಟ್ ದರ ಹೆಚ್ಚಳ ಮಾಡುತ್ತಿದ್ದರು. ಜೊತೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಎಂದೇಳಿ ದಿನವೊಂದಕ್ಕೆ ಆರು ಶೋ ಗಳನ್ನು ಮಾಡುತ್ತಿದ್ದರು.

ಇದರಿಂದ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದರು. ಇದನ್ನು ತಪ್ಪಿಸುವುದಕ್ಕಾಗಿ ಆಂಧ್ರ ಪ್ರದೇಶದ ಸರ್ಕಾರ ಈ ಮಹತ್ವದ ತೀರ್ಮಾನಕ್ಕೆ ಬಂದಿದೆ. ಇನ್ನು ಸಿನಿ ಪ್ರೇಕ್ಷಕರು ಸರ್ಕಾರದ ಅಧಿಕೃತ ಜಾಲತಾಣದ ಮೂಲಕವೇ ಆನ್ಲೈನ್ ಮೂವಿ ಟಿಕೆಟ್ ಬುಕ್ಕಿಂಗ್ ಮಾಡಬೇಕಾಗಿರುತ್ತದೆ. ಈ ಮೂಲಕ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಎಸ್.ಎಂ.ಎಸ್ ಬರುತ್ತದೆ. ಇದು ಸಿನಿ ಪ್ರೇಕ್ಷಕರಿಗೆ ಉತ್ತಮ ಯೋಜನೆ. ಆದರೆ ಇದರಿಂದಾಗಿ ನೂರಾರು ಕೋಟಿ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕರಿಗೆ, ಚಿತ್ರ ಮಂದಿರದ ಮಾಲೀಕರಿಗೆ ಅಪಾರ ನಷ್ಟವಾಗುತ್ತದೆ.

ಅದರಂತೆ ಇದೀಗ 2022 ಜನವರಿ 7ರಂದು ವಿಶ್ವಾದ್ಯಂತ ತೆರೆ ಕಾಣಲಿರುವ ರಾಜಮೌಳಿ ನಿರ್ದೇಶನದಲ್ಲಿ ಬಿಗ್ ಸ್ಟಾರ್ ಗಳಾದ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ, ಆಲಿಯಾ ಭಟ್, ಅಜಯ್ ದೇವಗನ್ ಹೀಗೆ ದುಬಾರಿ ನಟರ ಕಾಸ್ಟ್ ಹೊಂದಿರುವ ಬರೋಬ್ಬರಿ ನಾಲ್ಕು ನೂರು ಕೋಟಿ ಬಜೆಟ್ ಹೊಂದಿರುವ ಆರ್.ಆರ್.ಆರ್ ಸಿನಿಮಾಗೆ ಆಂಧ್ರಪ್ರದೇಶ ಸರ್ಕಾರ ಜಾರಿ ಮಾಡಿರುವ ಸಿನಿಮಾ ಹೊಸ ನೀತಿ ನಿಜಕ್ಕೂ ಕೂಡ ಅಪಾರ ನಷ್ಟ ಉಂಟು ಮಾಡಲಿದೆ ಎಂದು ನಿರ್ಮಾಪಕ ದಾನಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಡಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನ ಭೇಟಿ ಮಾಡುವುದಾಗಿ ಕೂಡ ನಿರ್ಮಾಪಕ ದಾನಯ್ಯ ಅವರು ತಿಳಿಸಿದ್ದಾರೆ.