ಬಿಡುಗಡೆಗೂ ಮೊದಲೇ ಇಪ್ಪತ್ತು ಸಾವಿರ ಬುಕಿಂಗ್ಸ್ ಪಡೆದುಕೊಂಡ ಭಾರತದ ಈ ಹೊಸ ಕಾರು

ಆಟೋಮೊಬೈಲ್ ಕ್ಷೇತ್ರದಲ್ಲಿ ಈ ಜನಪ್ರಿಯ ಕಾರು ಭಾರಿ ಸದ್ದು ಮಾಡುತ್ತಿದೆ. ಅದು ಯಾವ ಮಟ್ಟಿಗೆ ಅಂದರೆ ಈ ಕಂಪನಿಯ ಕಾರು ಇನ್ನು ಕೂಡ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಬಿಡುಗಡೆಯೇ ಆಗಿಲ್ಲ. ಆದರೂ ಕೂಡ ಕೇವಲ ಕಾರಿನ ಟೀಸರ್ ನೋಡಿಯೇ ಕಾರು ಪ್ರಿಯರು ಫಿದಾ ಆಗಿ ಕಾರು ಕೊಳ್ಳಲು ಉತ್ಸುಕರಾಗಿದ್ದಾರೆ. ಹಾಗಿದ್ದರೆ ಬಿಡುಗಡೆಯ ಮುನ್ನವೇ ಈ ಪರಿ ಪ್ರಮಾಣದ ಬೇಡಿಕೆಯನ್ನ ಹೊಂದಿರುವ ಕಾರು ಯಾವುದು ಗೊತ್ತಾ. ಹೌದು ಕಾರು ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಮಾರುತಿ ಸುಜುಕಿ ಕಂಪನಿಯ ಮಾರುತಿ ಗ್ರ್ಯಾಂಡ್ ವಿಟಾರಾ ಕಾರು ಇದೀದ ಕಾರು ಪ್ರಿಯರಿಗೆ ಮೋಡಿ ಮಾಡಿದೆ. ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ಯೂವಿ ಈ ಕಾರಿನ ಬುಕ್ಕಿಂಗ್ ಜುಲೈ 11ರಿಂದಲೇ ಆರಂಭಗೊಂಡಿತ್ತು.

ಅಂದಿನಿಂದ ಇಲ್ಲಿಯವರೆಗೆಈ ಕಾರನ್ನ ಖರೀದಿ ಮಾಡಲು ಕಾರು ಪ್ರಿಯರು ಉತ್ಸುಕರಾಗಿದ್ದು, ಇದುವರೆಗೆ ಬರೋಬ್ಬರಿ ಇಪ್ಪತ್ತು ಸಾವಿರಕ್ಕೂ ಅಧಿಕ ಬುಕ್ಕಿಂಗ್ ಪಡೆದು ದಾಖಲೆ ಮಾಡಿದೆ. ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ ಯೂ ವಿ ಕಾರನ್ನ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಲು ಆನ್ಲೈನ್ ನಲ್ಲಿ 11,000 ರೂಗಳನ್ನು ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿರುತ್ತದೆ. ಈ ಕಾರು ಇದೇ ಆಗಸ್ಟ್ ತಿಂಗಳಿನಲ್ಲಿ ಭರ್ಜರಿಯಾಗಿ ಬಿಡುಗಡೆ ಆಗಲಿದೆ. ಈ ಕಾರಿನ ಆರಂಭಿಕ ಬೆಲೆಯು 9.50 ಲಕ್ಷ ರೂಗಳಿಂದ ಆರಂಭವಾಗಲಿದೆ. ಇನ್ನು ಈ ಮಾರುತಿ ಗ್ರ್ಯಾಂಡ್ ವಿಟಾರಾ ಕಾರಿನ ವಿಶೇಷ ಫೀಚರ್ ಗಳನ್ನು ನೋಡುವುದಾದರೆ ಇದರಲ್ಲಿ ವಿಭಿನ್ನ ವೈಶಿಷ್ಟ್ಯಗಳು ಇರಲಿದ್ದು, ಗ್ರ್ಯಾಂಡ್ ವಿಟಾರಾ ಪೆಟ್ರೋಲ್ ಆವೃತ್ತಿಯು ನಾಲ್ಕು ರೂಪಾಂತರಗಳಲ್ಲಿ ಕಾರು ಲಭ್ಯವಿರಲಿದೆ.

ಈ ಗ್ರ್ಯಾಂಡ್ ವಿಟಾರಾ ಎಸ್ಯೂವಿ ಕಾರು 4,345 ಎಂಎಂ ಉದ್ದವನ್ನೊಂದಿದ್ದು, 1,795 ಎಂಎಂ ಅಗಲ ಇದ್ದು,1645 ಎಂಎಂ ಎತ್ತರ ಮತ್ತು 2,600 ಎಂಎಂ ವ್ಹೀಲ್ ಬೇಸ್ ಅನ್ನೊಂದಿದೆ. ಈ ಕಾರು ಬರೋಬ್ಬರಿ 45 ಲೀಟರ್ ಇಂಧನ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಅನ್ನು ಹೊಂದಿದ್ದು, ಐದು ಸೀಟುಗಳನ್ನೊಂದಿದೆ. ಇನ್ನು ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ಯೂವಿ ಕಾರು 1.5 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪೈರಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಫೈವ್ ಸ್ಪೀಡ್ ಮ್ಯಾನುವಲ್ ಅಂಡ್ ಸಿಕ್ಸ್ ಸ್ಪೀಡ್ ಟಾರ್ಕ್ ಕನ್ವರ್ಟರ್ ಅಟೋಮ್ಯಾಟಿಕ್ ಗೇರ್ ಬಾಕ್ಸ್ ಒಳಗೊಂಡಿದ್ದು, 103 ಬಿಎಚ್ ಪಿ ಪವರ್ ಮತ್ತು 136.8 ಎನ್ಎಮ್ ಟಾರ್ಕ್ ಅನ್ನು ಉತ್ಪಾದನೆ ಮಾಡುತ್ತದೆ. ಆಟೋಮ್ಯಾಟಿಕ್ ಮಾದರಿಯ 20.58 ಕಿಮೀ ಮೈಲೆಜ್ ಅನ್ನು ಈ ಮಾರುತಿ ಗ್ರ್ಯಾಂಡ್ ವಿಟಾರಾ ಎಸ್ಯೂವಿ ಕಾರು ನೀಡಲಿದ್ದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ನೋಡಲು ಆಕರ್ಷಕವಾಗಿ ವಿನ್ಯಾಸ ಹೊಂದಿರುವುದರಿಂದ ಕಾರು ಪ್ರಿಯರು ಈ ಕಾರು ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ.

%d bloggers like this: