ಬಿಡುಗಡೆಯಾಗಿ ನಾಲ್ಕು ವರ್ಷವಾದ ಮೇಲೆ ಮತ್ತೊಂದು ದಾಖಲೆ ಬರೆದ ಕಿರಿಕ್ ಪಾರ್ಟಿ

ಕನ್ನಡಕ್ಕೆ ವಿಭಿನ್ನ ಬಗೆಯ ಚಿತ್ರಗಳನ್ನು ನೀಡಿದ ರಕ್ಷಿತ್ ಶೆಟ್ಟಿ ನಾಯಕನಟನಾಗಿ ಅಭಿನಯಿಸಿದ ಮತ್ತು ಕನ್ನಡ ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದ 2016 ರಲ್ಲಿ ತೆರೆಕಂಡ ಬ್ಲಾಕ್ಬಸ್ಟರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಎಲ್ಲರಿಗೂ ಚಿರಪರಿಚಿತ. ಕಾಲೇಜ್ ಜೀವನದ ಸಿಂಪಲ್ ಕಥೆಯೊಂದನ್ನು ಸುಂದರವಾಗಿ ಹೆಣೆದ ರೀತಿಗೆ ಕನ್ನಡಿಗರು ಸೇರಿದಂತೆ ಬೇರೆ ಭಾಷೆಯ ಚಿತ್ರರಸಿಕರು ಶಹಭಾಶ್ ಎಂದರು. ಈ ಚಿತ್ರ ಎಷ್ಟರಮಟ್ಟಿಗೆ ಫೇಮಸ್ ಆಯಿತೆಂದರೆ ಈ ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬರು ಕನ್ನಡಿಗರ ಮನೆ ಮನದ ಮಾತಾಗಿ ಬಿಟ್ಟರು.

ಇದೇ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಮಟ್ಟಿಗೆ ನಿಂತಿರುವುದು ಈ ಚಿತ್ರ ಅವರಿಗೆ ನೀಡಿದ ಬಹುದೊಡ್ಡ ಆರಂಭ ಎನ್ನಬಹುದು. ದಾಖಲೆಗಳ ಮೇಲೆ ದಾಖಲೆ ಬರೆದ ಈ ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷದ ನಂತರವೂ ಮತ್ತೊಂದು ದಾಖಲೆಯನ್ನು ಬರೆದಿದೆ. ಕನ್ನಡದ ಸಾರ್ವಕಾಲಿಕ ಅತ್ಯುತ್ತಮ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದ ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಎಂಬ ಒಂದು ಹಾಡು ಚಿತ್ರದಷ್ಟೇ ಫೇಮಸ್ ಆಯಿತು.

ವಿಜಯ ಪ್ರಕಾಶ್ ಅವರ ಧ್ವನಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಹಾಡು ಇದೀಗ ಯೂಟ್ಯೂಬ್ ಮಾಧ್ಯಮದಲ್ಲಿ ಬರೋಬ್ಬರಿ 100 ಮಿಲಿಯನ್ ಅಂದರೆ ಹತ್ತು ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡ ಹಾಡಾಗಿ ಹೊರಹೊಮ್ಮಿದೆ. ಈ ಕುರಿತು ರಕ್ಷಿತ್ ಶೆಟ್ಟಿ ಅವರು ಟ್ವೀಟ್ ಮಾಡುವ ಮೂಲಕ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಟ್ವೀಟ್ ನಲ್ಲಿ ಅವರು ಈ ಅದ್ಭುತ ಹಾಡಿನ ಸೃಷ್ಟಿಕರ್ತರಾದ ಅಜನೀಶ್ ಲೋಕನಾಥ್ ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ.

ಈಗಾಗಲೇ ಎರಡು 100 ಮಿಲಿಯನ್ ಗಿಂತ ಅಧಿಕ ವೀಕ್ಷಣೆ ಪಡೆದ ಹಾಡುಗಳನ್ನು ಕಂಡ ನಮ್ಮ ಚಿತ್ರರಂಗಕ್ಕೆ ಈಗ ಮತ್ತೊಂದು ಸೇರಿಕೊಂಡಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಕರಾಬು ಹಾಡು ಹಾಗೂ ಶರಣ್ ಅಭಿನಯದ ರಾಂಬೊ ಚಿತ್ರದ ಚುಟು ಚುಟು ಹಾಡುಗಳ ನಂತರ ಇದೀಗ ಬೆಳಗೆದ್ದು ಯಾರ ಮುಖವ ನೋಡಲಿ ಹಾಡು ದಾಖಲೆ ಬರೆದ ಪಟ್ಟಿಗೆ ಸೇರ್ಪಡೆಯಾಗಿದೆ.

%d bloggers like this: