ಕರ್ನಾಟಕದಲ್ಲಿ ಒಟ್ಟಾರೆಯಾಗಿ ಎಷ್ಟು ಜನರಿಗೆ ಕೊರೋನ ಸೋಂಕು ತಗುಲಿದೆ ಮತ್ತು ಸೋಂಕು ಧೃಢಪಟ್ಟು ಸಾವಿಗೀಡಾಗಿರುವವರ ಸಂಖ್ಯೆ ಇತ್ಯಾದಿ ಮಾಹಿತಿಗಳನ್ನು ಆರೋಗ್ಯ ಸಚಿವ ಸುಧಾಕರ್ ಅವರು ಪತ್ರಿಕಾಗೋಷ್ಠಿ ಕರೆದು ವಿಚಾರ ತಿಳಿಸಿದ್ದಾರೆ. ಇದರಲ್ಲಿ ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ತಿಳಿದುಬಂದಿದೆ. ಹೌದು ಆರೋಗ್ಯ ಇಲಾಖೆಯು ರಾಜ್ಯದ ಜನರ ಆರೋಗ್ಯ ಹಿತದೃಷ್ಟಿಯಿಂದ ಮತ್ತು ಕೊರೋನ ಪ್ರಮಾಣಗಳ ಕುರಿತು ಅಧ್ಯಾಯನ ಜೊತೆಗೆ ಅದರ ಸ್ಥಿತಿಗತಿಗಳ ಕುರಿತು ಸಮೀಕ್ಷೆಯನ್ನು ಮಾಡಿದಾಗ ರಾಜ್ಯದಲ್ಲಿ ಇದುವರೆಗೂ ಅಂದರೆ, ಈ ಸರ್ವೆ ನಡೆದಿರುವುದು ಸೆಪ್ಟಂಬರ್ ಮೂರರಿಂದ ಹದಿನಾರವರೆಗೆ ನಡೆದಿದ್ದು ಈ ನಡುವೆ ಬರೋಬ್ಬರಿ ಎರಡು ಕೋಟಿಯ ಜನರಿಗೆ ಕೊರೋನ ಸೋಂಕು ಬಂದು ಹೋಗಿರಬಹುದು ಎಂದು ತಿಳಿಸಲಾಗಿದೆ. ಅದರಲ್ಲಿ ಕೋವಿಡ್ ಸೋಂಕಿನಿಂದ ಮರಣ ಹೊಂದಿರುವಂತಹ ಪ್ರಮಾಣ ಸಂಖ್ಯೆ ಹೆಚ್ಚೇನೂ ಇಲ್ಲ ಎಂಬುದಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ಮರಣ ಸರಾಸರಿ ಸಂಖ್ಯೆ 0.05% ಇದ್ದು ಮಹರಾಷ್ಟ್ರದಲ್ಲಿ 0.05% ಮತ್ತು ಪುಣೆಯಲ್ಲಿ 0.08%, ದೆಹಲಿಯಲ್ಲಿ 0.09%, ಚೆನ್ನೈಯಲ್ಲಿಯೂ ಸಹ 0.73% ಮರಣ ಪ್ರಮಾಣ ಸಂಖ್ಯೆ ಇದೆ ಎಂದು ತಿಳಿಸಿದ್ದಾರೆ.
ಆದರೆ ರಾಜ್ಯದಲ್ಲಿ ಮಾತ್ರ ಶೇ27.3 ರಷ್ಟು ಜನರು ಕೋವಿಡ್ ಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದರು. ಈ ರೀತಿಯ ಸಮೀಕ್ಷೆಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಒಮ್ಮೆ ಮತ್ತು ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಮತ್ತೊಂದು ಸಮೀಕ್ಷೆ ಮಾಡಲಾಗುತ್ತದೆ. ಸರ್ಕಾರ ಎಲ್ಲಾ ರೀತಿಯಲ್ಲಿಯೂ ಕೋವಿಡ್ ನಿಯಂತ್ರಣ ಕುರಿತು ಜಾಗೃತಿಯನ್ನು ಕಟ್ಟುನಿಟ್ಟಾಗಿ ಮತ್ತು ಕ್ರಮಬದ್ದವಾಗಿ ನಡೆಸುತ್ತದೆ ರಾಜ್ಯದ ಜನರು ಭಯ ಪಡುವ ಅವಶ್ಯಕತೆಯಿಲ್ಲ ಸರ್ಕಾರದ ನಿಯಮ, ಕಾನೂನುಗಳನ್ನು ಚಾಚೂತಪ್ಪದೆ ಪಾಲಿಸಿ ತಮ್ಮ ಜೀವ ಮತ್ತು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಕಡ್ಡಾಯವಾಗಿ ಆರೋಗ್ಯ ಇಲಾಖೆಯ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.