ಬಿಗ್ ಬಾಸ್ ಟ್ರೋಫಿಯೊಂದಿಗೆ ನಲವತ್ತು ಲಕ್ಷ ಹಣ ಗೆದ್ದ ನಟಿ ತೇಜಸ್ವಿ ಪ್ರಕಾಶ್

ಬಿಗ್ ಬಾಸ್ ರಿಯಾಲಿಟಿ ಶೋ ಅಂದಾಕ್ಷಣ ಸರೆಮನೆ, ನೆಚ್ಚಿನ ಸ್ಟಾರ್ ನಟ ನಟಿಯರು ಇರುತ್ತಾರೆ. ತೆರೆ ಮೇಲೆ ನೋಡುತ್ತಿದ್ದ ಕಲಾವಿದರನ್ನ ಕಣ್ತುಂಬ ಪ್ರತಿದಿನ ನೋಡಬಹುದು ಎಂದು ಅವರ ಅಭಿಮಾನಿಗಳು ಸಂಭ್ರಮದಲ್ಲಿರುತ್ತಾರೆ. ಅಂತೆಯೇ ಈ ಬಿಗ್ ಬಾಸ್ ಮನೆಯೊಳಗೆ ಹೋಗುವ ಸ್ಪರ್ಧಿಗಳು ಬಾಹ್ಯ ಜಗತ್ತು ಹೊರಗಿನ ಪ್ರಪಂಚದ ಬಗ್ಗೆ ಯಾರಿಗೂ ಯಾವುದೇ ರೀತಿಯಲ್ಲಿಯೂ ಮಾಹಿತಿ ಸಿಗದೆ ಒಂದು ರೀತಿಯಾಗಿ ಸರೆ ಮನೆಯಂತಹ ಅರಮನೆಯಲ್ಲಿರುವ ವಾಸದಂತೆ ಇರುತ್ತದೆ ಎಂದು ದೊಡ್ಮನೆಯ ಬಗ್ಗೆ ಒಂದಷ್ಟು ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾಗುತ್ತದೆ. ಆದರೆ ಹಿಂದಿಯ ಬಿಗ್ ಬಾಸ್ ಸೀಸನ್ 15ರಲ್ಲಿ ಕೊಂಚ ಅನುಮಾನದ ಹುತ್ತ ಬೆಳೆದುಕೊಂಡಿದೆ. ಹೌದು ನಿನ್ನೆ ತಾನೇ ಜನವರಿ 30ರಂದು ಭಾನುವಾರ ಹಿಂದಿಯ ಬಿಗ್ ಬಾಸ್ 15ನೇ ಆವೃತ್ತಿಗೆ ತೆರೆ ಬಿದ್ದಿದೆ.

ಈ ಸೀಸನ್ ನಲ್ಲಿ ನಟಿ ತೇಜಸ್ವಿ ಪ್ರಕಾಶ್ ವಿಜಯದ ಟ್ರೋಫಿಯನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟ, ನಿರೂಪಕ ಸಲ್ಮಾನ್ ಖಾನ್ ಅವರು ನಟಿ ತೇಜಸ್ವಿ ಪ್ರಕಾಶ್ ಅವರ ಕೈಯೆತ್ತಿ ವಿನ್ನರ್ ಎಂದು ಘೋಷಣೆ ಮಾಡಿದ್ದಾರೆ. ನಲವತ್ತು ಲಕ್ಷ ನಗದು ಮೊತ್ತ ಮತ್ತು ಟ್ರೋಫಿ ಪಡೆದ ನಟಿ ಬಿಗ್ ಬಾಸ್ 15ನೇ ಆವೃತ್ತಿಯ ವಿಜೇತೆ ತೇಜಸ್ವಿ ಪ್ರಕಾಶ್ ಅವರಿಗೆ ಬಂಪರ್ ಆಫರ್ ಸಿಕ್ಕಿದೆ. ಅದೂ ಕೂಡ ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ಈ ಒಂದು ಆಫರ್ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗುತ್ತಿದೆ. ಹೌದು ಜನಪ್ರಿಯ ನಾಗಿನ್ ಧಾರಾವಾಹಿಯ 6ನೇ ಸರಣೆಯಲ್ಲಿ ನಾಯಕಿಯಾಗಿ ತೇಜಸ್ವಿ ಪ್ರಕಾಶ್ ಅವರನ್ನ ಆಯ್ಕೆ ಮಾಡಲಾಗಿದೆಯಂತೆ.

ನಾಗಿನ್6 ತಂಡ ನಟಿ ತೇಜಸ್ವಿ ಪ್ರಕಾಶ್ ಅವರ ಜೊತೆ ಈ ಬಗ್ಗೆ ಮಾತನಾಡಲು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರು ಎಂಬುದಕ್ಕೆ ನಾಗಿನ್6 ಧಾರಾವಾಹಿಯ ಪ್ರೋಮೋಗಳು ಪುರಾವೆಯಾಗಿ ಕಾಣುತ್ತಿವೆ. ಇದರಿಂದ ಬಿಗ್ ಬಾಸ್ ರಿಯಾಲಿಟಿ ಶೋ ಬಗ್ಗೆ ಎಲ್ಲೋ ಒಂದು ಕಡೆ ಅನುಮಾನ ಉಂಟಾಗಿದೆ. ಹೊರ ಜಗತ್ತಿನ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಜೊತೆಗೆ ಹೊರಗಿನ ವ್ಯಕ್ತಿಗಳೊಂದಿಗೆ ಸಂಪರ್ಕ ಇರುವುದಿಲ್ಲ ಅಂದಮೇಲೆ ತೇಜಸ್ವಿನಿ ಪ್ರಕಾಶ್ ಅವರನ್ನ ನಾಗಿನ್6 ಧಾರಾವಾಹಿ ತಂಡ ಹೇಗೆ ಭೇಟಿ ಮಾಡಿ ಆಫರ್ ನೀಡಿತು, ಅದಲ್ಲದೆ ಬಿಗ್ ಬಾಸ್ ಮನೆಯೊಳಗೆ ಪ್ರೋಮೋಶೂಟ್ ಹೇಗೆ ಮಾಡಿದರು ಎಂಬೆಲ್ಲಾ ಅನುಮಾನದ ಪ್ರಶ್ನೆಗಳು ಹಿಂದಿ ವೀಕ್ಷಕರಿಗೆ ಮೂಡಿದೆ. ಇನ್ನು ಈ ನಾಗಿನ್6 ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿ ತೇಜಸ್ವಿ ಪ್ರಕಾಶ್ ಆಯ್ಕೆಯಾಗಿದ್ದು, ಪ್ರಸಿದ್ದ ನಿರ್ಮಾಪಕಿಯಾದ ಏಕ್ತಾ ಕಪೂರ್ ಅವರು ಈ ನಾಗಿನ್6 ಸೀರಿಯಲ್ಗೆ ಬಂಡವಾಳ ಹೂಡುತ್ತಿದ್ದಾರೆ.

%d bloggers like this: