ಬರೋಬ್ಬರಿ ಆರು ವರ್ಷಗಳ ಕಾಲ ಅಭಿವೃದ್ದಿ ಪಡಿಸಿದ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಕಳೆದ ಎರಡು ವರ್ಷಗಳಿಂದ ಇಂಧನ ಆಧಾರಿತ ವಾಹನಗಳಿಗಿಂತ ಹೆಚ್ಚಾಗಿ ವಿದ್ಯುಚ್ಚಾಲಿತ ವಾಹನಗಳಗೆ ಭಾರಿ ಬೇಡಿಕೆ ಉಂಟಾಗಿದೆ. ದೇಶದಲ್ಲಿ ಇಂಧನದ ಬೆಲೆ ಗಗನಕ್ಕೇರುತ್ತಿವ ಹಿನ್ನೆಲೆಯಲ್ಲಿ ಚಾಲಕರು ಕೂಡ ಈ ಪೆಟ್ರೋಲ್, ಡೀಸೆಲ್ ಆಧಾರಿತ ವಾಹನಗಳ ಬಳಕೆಯ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದಾಗಿ ಬಹುತೇಕರು ಇಂಧನ ಆಧಾರಿತ ವಾಹನಗಳಿಗಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಅದರಂತೆ ವಾಹನ ತಯಾರಿಕಾ ಸಂಸ್ಥೆಗಳು ಕೂಡ ಬೇಡಿಕೆಯ ಅನುಸಾರ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಉತ್ಸುಕತೆಯನ್ನ ತೋರುತ್ತಿವೆ.

ಅದರಂತೆ ಇದೀಗ ಪುಣೆ ಮೂಲದ ಟಾರ್ಕ್ ಮೋಟಾರ್ಸ್ ಕಂಪನಿಯು ನೂತನ ಎಲೆಕ್ಟ್ರಿಕ್ ಬೈಕ್ ವೊಂದನ್ನ ಸಿದ್ದಪಡಿಸಿದೆ. ಈ ಬೈಕಿನ ಹೆಸರು ಟಾರ್ಕ್ ಕ್ರಾಟೋಸ್ ಎಂಬುದಾಗಿದ್ದು ಈ ಬೈಕ್ ತಯಾರಿಕೆಗೆ ಬರೋಬ್ಬರಿ ಆರು ವರ್ಷಗಳ ಕಾಲ ಸಮಯ ತೆಗೆದುಕೊಂಡಿದೆ. ಈ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ಇದೇ ಜನವರಿ 26 ಗಣರಾಜ್ಯೋತ್ಸವ ದಿನದಂದು ಲಾಂಚ್ ಆಗಲಿದೆ ಎಂದು ಟಾರ್ಕ್ ಮೋಟಾರ್ಸ್ ಸಂಸ್ಥೆ ತಿಳಿಸಿದೆ. ವಿಶೇಷವಾಗಿ ಅದೇ ದಿನ ಮುಂಗಡ ಬುಕ್ಕಿಂಗ್ ಕೂಡ ಆರಂಭವಾಗಲಿದೆಯಂತೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಆಸಕ್ತರು ಅಂತರ್ಜಾಲದ ಮುಖಾಂತರ ಖರೀದಿ ಮಾಡಬಹುದಾಗಿರುತ್ತದೆ. ಈ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ಗೆ ಈ ಮೊದಲು ಟಾರ್ಕ್ ಟಿಸಿಕ್ಸ್ ಎಕ್ಸ್ ಬೈಕ್ ಎಂದು ಹೆಸರಿಟ್ಟಿದ್ದರಂತೆ.



ಈಗಾಗಲೇ ಮಾರುಕಟ್ಟೆಯಲ್ಲಿ ಬ್ರಿಟೀಷ್ ಬ್ರ್ಯಾಂಡ್ ರಿವೋಲ್ಟ್ ಮತ್ತು ಅಲ್ಟ್ರಾ ವೈಲೆಟ್ ಅಂತಹ ಬ್ರ್ಯಾಂಡ್ ಹೊಂದಿದೆ. ಇನ್ನು ಈ ಕ್ರಾಟೋಸ್ ಟಿಸಿಕ್ಸ್ ಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಮೂರು ಹಂತದಲ್ಲಿ ಮಾರಾಟ ಮಾಡಲಾಗುತ್ತದೆಯಂತೆ. ಮೊದಲ ಹಂತದಲ್ಲಿ ಐದು ಸಾವಿರ ಮತ್ತು ಎರಡನೇ ಹಂತದಲ್ಲಿ ಹತ್ತು ಸಾವಿರ ಯುನಿಟ್ ಗಳನ್ನು ಮಾರಾಟ ಮಾಡುವ ಉದ್ದೇವವೊಂದಿದ್ದಾರಂತೆ. ಈ ಟಾರ್ಕ್ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾರ್ಕ್ ಲಿಯನ್, ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಶೇಕಡಾ 90-96 ರಷ್ಟು ದಕ್ಷತೆಯ ರೇಟಿಂಗ್ ಹೊಂದಿರುವ ಈ ಎಲೆಕ್ಟ್ರಿಕ್ ಬೈಕ್ ಬೆಲೆಯು ಬರೋಬ್ಬರಿ 1.25 ಲಕ್ಷದಿಂದ ಆರಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.