ಬಿಎಂಟಿಸಿಯಂತೆ ನಮ್ಮ ಕೆ.ಎಸ್.ಆರ್.ಟಿ.ಸಿಗೂ ಬರುತ್ತಿವೆ ದುಬಾರಿ ಎಲೆಕ್ಟ್ರಿಕ್ ಬಸ್ಸುಗಳು

ದೇಶದಲ್ಲಿ ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಇಂಧನ ರಹಿತ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ಮತ್ತು ಉತ್ತೇಜನ ನೀಡುತ್ತಿದೆ. ಇದು ಜನ ಸಾಮಾನ್ಯರಿಗೆ ಏನೋ ಉಪಯುಕ್ತವಾದುದು. ಆದರೆ ಇದು ಸರ್ಕಾರಿ ನಿಗಮಗಳಿಗೆ ಎಷ್ಟರ ಮಟ್ಟಿಗೆ ಉಪಯೋಗ ಆಗಲಿದೆ ಎಂಬುದನ್ನ ಅವಲೋಕನ ಮಾಡಬೇಕಾಗುತ್ತದೆ. ಹೌದು ಈಗಾಗಲೇ ಬಿಎಂಟಿಸಿ ನಷ್ಟದಲ್ಲಿ ಇದೆ ಎಂದು ಅನೇಕ ಬಾರಿ ಸಮಸ್ಯೆಯ ವರದಿ ಆಗಿತ್ತು. ಸಾರಿಗೆ ನಿಗಮ ನಷ್ಟದಲ್ಲಿ ನಡೆಯುವುದಕ್ಕೆ ಕಾರಣ ಏನಪ್ಪಾ ಅಂದರೆ ನಿರಂತರವಾಗಿ ಹೆಚ್ಚುತ್ತಿರುವ ಇಂಧನ ತೈಲದರ, ಸಿಬ್ಬಂದಿಗಳ ಸಂಬಳ, ನಿಗಮದ ನಿರ್ವಹಣೆ ಇನ್ನೊಂದೆಡೆ ಪ್ರಯಾಣಿಕರು ಎಲ್ಲಾ ಕಡೆ ಕೂಡ ಬಿಎಂಟಿಸಿ ಸಾರಿಗೆಯನ್ನೇ ಅವಲಂಬನೆ ಆಗಿರುವುದಿಲ್ಲ. ಯಾಕಂದ್ರೆ ಇಂದು ಬಹು ಸಂಖ್ಯಾತ ಮಟ್ಟಿಗೆ ವಾಹನಗಳನ್ನೆ ಹೊಂದಿರುತ್ತಾರೆ.

ಇದೆಲ್ಲ ಒಂದು ಕಡೆಯಾದರೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಬಿಎಂಟಿಸಿ ಏನೋ ಒಂದಷ್ಟು ಎಲೆಕ್ಟ್ರಿಕ್ ಬಸ್ ಗಳನ್ನ ಪರಿಚಯ ಪಡಿಸಲಾಯಿತು. ಆದರೆ ಇದು ಇಂಧನ ರಹಿತ ಅಂದ್ರೆ ಈ ಎಲೆಕ್ಟ್ರಿಕ್ ಬಸ್ ಗಳು ದುಬಾರಿ ಬೆಲೆಯಾದದ್ದು. ಇದರ ನಿರ್ವಹಣೆ ವೆಚ್ಚ ಕಡಿಮೆ ಆದ್ರು ಕೂಡ ಈ ಎಲೆಕ್ಟ್ರಿಕ್ ಬಸ್ ಗಳು ಎಷ್ಟರ ಮಟ್ಟಿಗೆ ಲಾಭದಾಯಕವಾಗಿವೆ. ಇದೀಗ ಬಿಎಂಟಿಸಿಯಂತೆ ಕೆ.ಎಸ್.ಆರ್.ಟಿ.ಸಿ ಕೂಡ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ಮುಂದಾಗಿದೆ. ಈಗಾಗಲೇ ನಿಗಮ ಕೂಡ ಐವತ್ತು ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ ಆರ್ಡರ್ ಕೂಡ ಮಾಡಿದೆ. ಈ ಎಲೆಕ್ಟ್ರಿಕ್ ಬಸ್ ಗಳು ಬೆಂಗಳೂರಿನಿಂದ ಮೈಸೂರು, ತುಮಕೂರು, ಕೋಲಾರ ಸೇರಿದಂತೆ ಇನ್ನೂರು ಕಿ ಮೀ ಅಂತರದಲ್ಲಿರುವ ಎಲ್ಲಾ ನಗರಗಳಲ್ಲೂ ಸೇವೆ ನೀಡಲಿದೆಯಂತೆ.

ಈ ಎಲೆಕ್ಟ್ರಿಕ್ ಬಸ್ ಗಳ ನಿರ್ವಹಣೆಗಾಗಿ ಪ್ರತಿ ಬಸ್ ಡಿಪೋ ನಲ್ಲಿ ಚಾರ್ಜಿಂಗ್ ಪಾಯಿಂಟ್ ವ್ಯವಸ್ಥೆ ಮಾಡಲಾಗುತ್ತದೆಯಂತೆ. ಈ ಎಲೆಕ್ಟ್ರಿಕ್ ಬಸ್ ಗಳು ಕನಿಷ್ಟ ಆರು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸರಿ ಸುಮಾರು ಇನ್ನೂರೈವತ್ತು ಕಿ.ಮೀ ದೂರದವರೆಗೆ ಕ್ರಮಿಸಬಹುದಾಗಿದೆಯಂತೆ. ಆದರೆ ಈ ಕರ್ನಾಟಕ ರಾಜ್ಯ ಸರ್ಕಾರ ಸಾರಿಗೆ ನಿಗಮವು ನಷ್ಟ ತಡೆಗಟ್ಟಲು ಮತ್ತು ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ ಮುಂದಾಗಿರುವುದು ಯಾವ ಉದ್ದೇಶಕ್ಕಾಗಿ ಎಂಬುದು ಸರ್ಕಾರಕ್ಕೆ ಬಿಟ್ಟಿದ್ದಾಗಿರುತ್ತದೆ. ಆದರೆ ಇದು ಬಹುತೇಕರಿಗೆ ಅನುಕೂಲವಾಗುತ್ತದೆ ಎಂದು ಹೇಳುತ್ತಿದ್ದಾರೆ. ಎಲೆಕ್ಟ್ರಿಕ್ ಬಸ್ ಗಳಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಇರುವುದಿಲ್ಲ ಜೊತೆಗೆ ಇಂಧನದ ಅಗತ್ಯ ಇರುವುದಿಲ್ಲ ಕಿರಿಕಿರಿಯಿಲ್ಲದೆ ಪ್ರಯಾಣಿಕರು ಆರಾಮದಾಯಕವಾಗಿ ಪ್ರಯಾಣ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ.

%d bloggers like this: