ಬಾಲಿವುಡ್ ಅಲ್ಲಿ ಚಿತ್ರವಾಗಿ ಬರುತ್ತಿದೆ ಕನ್ನಡಿಗನ ಜೀವನ ಚರಿತ್ರೆ

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧರಿತ ಸಿನಿಮಾ ಇದೀಗ ಬಾಲಿವುಡ್ ನಲ್ಲೂ ಕೂಡ ಮಿಂಚಲಿದೆ, ಹೌದು ಕಳೆದ ವರ್ಷ ತಾನೇ ಕೋವಿಡ್ ಹಿನ್ನೆಲೆ ಚಿತ್ರಮಂದಿರಗಳು ಲಾಕ್ ಆಗಿದ್ದರು ಕೂಡ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ಸೂರ್ಯ ಅಭಿನಯದ ಸೂರರೈ ಪೋಟ್ರು ಸಿನಿಮಾ ದಕ್ಷಿಣ ಭಾರತದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೂ ಡಬ್ ಆಗಿತ್ತು. ಇದೀಗ ಹಿಂದಿ ಭಾಷೆಗೆ ಈ ಸೂರರೈ ಪೊಟ್ರು ಸಿನಿಮಾ ರಿಮೇಕ್ ಆಗುತ್ತಿದೆ. ತಮಿಳಿನ ಸ್ಟಾರ್ ನಟ ಸೂರ್ಯ ಮಾರಾ ಎಂಬ ಪಾತ್ರದಲ್ಲಿ ಅಮೋಘವಾಗಿ ನಟಿಸಿದ್ದರು. ನಟ ಸೂರ್ಯ ಅವರ ಅಭಿನಯಕ್ಕೆ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು.

ಇದೀಗ ಸೂರ್ಯ ಅವರು ನಿರ್ವಹಿಸಿದ್ದ ಮಾರಾ ಪಾತ್ರವನ್ನು ಹಿಂದಿಯಲ್ಲಿ ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ನಿರ್ವಹಿಸಲಿದ್ದಾರಂತೆ. ಈಗಾಗಲೇ ಸುಧಾ ಕೊಂಗರ ಅವರ ನಿರ್ದೇಶನದ ಸೂರರೈ ಪೊಟ್ರು ಚಿತ್ರ ಹಿಂದಿಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಓಡಾಡುತ್ತಲೇ ಇತ್ತು‌. ಆದರೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿರಲಿಲ್ಲ. ಈ ಹಿಂದೆ ಹಿಂದಿ ರಿಮೇಕ್ ನಲ್ಲಿ ನಟ ಅಜಯ್ ದೇವಗನ್, ಅಬ್ರಾಹಂ ಜಾನ್ ಅಥವಾ ಹೃತಿಕ್ ರೋಶನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಕೇಳಿ ಬರುತ್ತಿತ್ತು.

ಇದೀಗ ಅಂತಿಮವಾಗಿ ಸೂರರೈ ಪೊಟ್ರು ಚಿತ್ರದ ಹಿಂದಿ ರಿಮೇಕ್ ನಲ್ಲಿ ನಟ ಅಕ್ಷಯ್ ಕುಮಾರ್ ನಟಿಸುವುದು ಬಹುತೇಕ ಖಚಿತವಾಗಿದೆ. ಇನ್ನು ನಟ ಅಕ್ಷಯ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಸಿನಿಮಾಗಳ ಆಯ್ಕೆಯ ಅಭಿರುಚಿಯ ಬಗ್ಗೆ ಕೊಂಚ ಬದಲಾವಣೆ ಕಂಡುಕೊಂಡಿದ್ದಾರೆ. ಸಾಮಾಜಿಕ ಸಂದೇಶ ಸಾರುವ ಬಯೋಪಿಕ್, ಸ್ಪೂರ್ತಿದಾಯಕ ಕಥೆ, ರಿಯಲ್ ಲೈಫ್ ಸ್ಟೋರಿ ಗಳ ಸಿನಿಮಾ ಮಾಡುವತ್ತ ಒಲವು ತೋರುತ್ತಿದ್ದಾರೆ. ಇನ್ನು ಈ ಸೂರರೈ ಪೊಟ್ರು ಚಿತ್ರ ಕರ್ನಾಟಕದ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾವಾಗಿದೆ.

ಈ ಚಿತ್ರದ ಕಥೆಯಲ್ಲಿ ಸಾಮಾನ್ಯ ಜನರು ಕೂಡ ಕೈ ಗೆಟುಕುವ ದರದಲ್ಲಿ ವಿಮಾನದಲ್ಲಿ ಪ್ರಯಾಣಿಸಬೇಕು ಎಂಬ ಸದುದ್ದೇಶದಿಂದ ಏರ್ ಡೆಕ್ಕನ್ ಎಂಬ ವಿಮಾನ ಸಂಸ್ಥೆಯನ್ನೇ ಪ್ರಾರಂಭಿಸಿದ ಕ್ಯಾಪ್ಟನ್ ಗೋಪಿನಾಥ್ ಅವರ ಕನಸಿನ ಕಥಾ ಹಂದರವೇ ಈ ಸೂರರೈ ಪೊಟ್ರುವಾಗಿದೆ. ಇನ್ನು ಹಿಂದಿಯಲ್ಲಿ ಈ ಸೂರರೈ ಪೊಟ್ರು ಚಿತ್ರವನ್ನು ಮೂಲ ನಿರ್ದೇಶಕರಾದ ಸುಧಾ ಕೊಂಗರ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಒಟ್ಟಾರೆಯಾಗಿ ಕನ್ನಡಿಗರೊಬ್ಬರ ಜೀವನದ ಯಶೋಗಾಥೆಯನ್ನು ಇಡೀ ದೇಶದ ಜನತೆ ಕೆಲವೇ ದಿನಗಳಲ್ಲಿ ನೋಡುವುದು ಖಚಿತ.

%d bloggers like this: