ಬಾಲಿವುಡ್ ಅಲ್ಲಿ ಮೊದಲ ಚಿತ್ರದ ಮೂಲಕವೇ ಗೆಲುವು ಸಾಧಿಸಿದ ಕರ್ನಾಟಕ ಮೂಲದ ನಟನ ಮಗ

ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಅವರ ಪುತ್ರ ಬಿ-ಟೌನ್ ಗೆ ಪಾದಾರ್ಪಣೆ ಮಾಡಿದ್ದಾರೆ. ನಿರ್ದೇಶಕ ಮಿಲನ್ ಲುಥರಿಯಾ ನಿರ್ದೇಶನದ ತಡಪ್ ಚಿತ್ರದ ಮೂಲಕ ಸುನೀಲ್ ಶೆಟ್ಟಿ ಮಗ ಅಹಾನ್ ಶೆಟ್ಟಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಅಹಾನ್ ಶೆಟ್ಟಿ ತನ್ನ ಚೊಚ್ಚಲ ಚಿತ್ರ ತಡಪ್ ಸಿನಿಮಾದಲ್ಲಿ ಉತ್ತಮವಾಗಿ ನಟಿಸಿದ್ದು, ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ‌. ತಡಪ್ ಸಿನಿಮಾಗೆ ಹಿಂದಿ ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ವಾರದಲ್ಲಿ ತಡಪ್ ಚಿತ್ರಕ್ಕಿದ್ದಂತಹ ರೆಸ್ಪಾನ್ಸ್ ಇದೀಗ ಎರಡನೇ ವಾರದಲ್ಲಿಯೂ ಕೂಡ ಅದೇ ರೀತಿಯ ಉತ್ತಮ ಮೆಚ್ಚುಗೆ ಪಡೆದುಕೊಂಡು ಕಲೆಕ್ಷನ್ ನಲ್ಲಿಯೂ ಸಹ ಉತ್ತಮವಾಗಿ ಗಳಿಗೆ ಮಾಡುತ್ತಿದೆ.

ಇತ್ತೀಚೆಗಷ್ಟೇ ತಡಪ್ ಚಿತ್ರದ ನಿರ್ಮಾಪಕರಾದ ಸಾಜಿದ್ ನಾಡಿಯಾಡ್ವಾಲಾ ಅವರು ತಮ್ಮ ಮನೆಯಲ್ಲಿ ಚಿತ್ರದ ಸಕ್ಸಸ್ ಪಾರ್ಟಿಯೊಂದನ್ನ ಆಯೋಜನೆ ಮಾಡಿದ್ದರು. ಈ ಸಕ್ಸಸ್ ಪಾರ್ಟಿಗೆ ನಿರ್ದೇಶಕರಾದ ಮಿಲನ್ ಲುಥ್ರಿಯಾ, ನಾಯಕಿ ತಾರಾ ಸುತಾರಿಯಾ ಸೇರಿದಂತಿ ಇಡೀ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತ್ತು‌. ವಿಶೇಷ ಅಂದರೆ ತಡಪ್ ಚಿತ್ರದ ನಾಯಕ ಅಹಾನ್ ಶೆಟ್ಟಿ ತಮ್ಮ ಗರ್ಲ್ ಫ್ರೆಂಡ್ ನಟಿ ತಾನಿಯಾ ಶ್ರಾಫ್ ಜೊತೆ ಆಗಮಿಸಿದ್ದರು. ನಟ ಅಹಾನ್ ಶೆಟ್ಟಿ ಮತ್ತು ನಟಿ ತಾನಿಯಾ ಶ್ರಾಫ್ ಜೋಡಿಗಳು ಒಂದೇ ರೀತಿಯ ಕಪ್ಪು ಬಣ್ಣದ ಉಡುಪುಗಳನ್ನು ಧರಿಸಿ ಬಂದಿದ್ದರಿಂದ ಪಾರ್ಟಿಯಲ್ಲಿ ನೆರೆದಿದ್ದ ಎಲ್ಲರ ಗಮನವನ್ನು ತಮ್ಮತ್ತ ಸೆಳೆದಿದ್ದರು.

ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ನಟ ಅಹಾನ್ ಶೆಟ್ಟಿ ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದರು. ಈ ಯುವ ನಟನ ಜೊತೆ ಒಂದಷ್ಟು ಮಂದಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಅವರೊಂದಿಗೆ ಉತ್ತಮವಾಗಿ ಸ್ಪಂದಿಸಿ ಎಲ್ಲರೊಟ್ಟಿಗೆ ಈ ಜೋಡಿಗಳು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇನ್ನು ಅಹಾನ್ ಶೆಟ್ಟಿ ಮತ್ತು ತಾರಾ ಸುತಾರಿಯಾ ಅಭಿನಯದ ಈ ತಡಪ್ ಸಿನಿಮಾ ಡಿಸೆಂಬರ್ 3 ರಂದು ತೆರೆ ಕಂಡಿದೆ. ರೊಮ್ಯಾಂಟಿಕ್ ಆಕ್ಷನ್ ಡ್ರಾಮಾ ಆಗಿರುವ ಈ ತಡಪ್ ಚಿತ್ರದ ಹಾಡುಗಳಿಗೆ ಪ್ರೀತಮ್ ಸಾಹಿತ್ಯ ಬರೆದಿದ್ದು, ಜಾನ್ ಸ್ಟೀವರ್ಟ್ ಮ್ಯೂಸಿಕ್ ನೀಡಿದ್ದಾರೆ. ಅಜಯ್ ಭೂಪತಿ ಅವರು ಕಥೆ ಬರೆದಿದ್ದಾರೆ. ಒಟ್ಟಾರೆಯಾಗಿ ಅಹಾನ್ ಶೆಟ್ಟಿ ತನ್ನ ತಂದೆ ಸುನೀಲ್ ಶೆಟ್ಟಿ ಅವರಂತೆ ಬಾಲಿವುಡ್ ನಲ್ಲಿ ನೆಲೆ ಕಂಡುಕೊಳ್ಳುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಅಹಾನ್ ಶೆಟ್ಟಿ ತಮ್ಮ ಮೊದಲ ಚಿತ್ರದಲ್ಲೇ ಉತ್ತಮವಾಗಿ ನಟಿಸುವ ಮೂಲಕ ಬಾಲಿವುಡ್ ಭರವಸೆಯ ನಟ ಎಂದು ಅಭಿಪ್ರಾಯ ಮೂಡಿಸಿದ್ದಾರೆ.

%d bloggers like this: