ನಮ್ಮ ಕರ್ನಾಟಕದಿಂದ ಸಾಕಷ್ಟು ಪ್ರತಿಭೆಗಳು ಭಾರತದಲ್ಲೆಡೆ ರಾರಾಜಿಸುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ನಮ್ಮ ಕರ್ನಾಟಕದವರು ಮಿಂಚುತ್ತಿದ್ದಾರೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ನಮ್ಮ ಕರ್ನಾಟಕದಿಂದ ಅನೇಕ ಜನರು ಬೇರೆ ಭಾಷೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇದೀಗ ಇಂತಹ ಸಾಲಿನಲ್ಲಿ ಮತ್ತೊಬ್ಬ ನಮ್ಮ ಕನ್ನಡದ ಹುಡುಗಿ ಸೇರಿಕೊಳ್ಳುತ್ತಿದ್ದಾರೆ. ಕಾಲ್ ಶೀಟ್ ಸಮಸ್ಯೆಯಿಂದಾಗಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದ ಗರಡಿ ಚಿತ್ರದಿಂದ ನಟಿ ರಚಿತಾ ರಾಮ್ ಹೊರ ಬಿದ್ದ ಕಾರಣ ನಾಯಕಿಯ ಸ್ಥಾನಕ್ಕೆ ಸೋನಾಲ್ ಮೊಂತೆರೋ ಅವರು ಆಯ್ಕೆಯಾಗಿದ್ದ ವಿಷಯ ಎಲ್ಲರಿಗೂ ತಿಳಿದಿದೆ. ಇದೇ ಸೋನಲ್ ಅವರು ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದ ಪಂಚತಂತ್ರ ಸಿನಿಮಾ ಮೂಲಕ ಕೊಸ್ಟಲ್ ವುಡ್ ನಿಂದ ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು.

ಸೋನಾಲ್ ಮೊಂತೆರೋ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ತನು ಪಾತ್ರದ ಮೂಲಕ ಯಶಸ್ಸು ಕಂಡ ನಟಿ ಸೋನಲ್ ಅವರಿಗೆ ಸದ್ಯಕ್ಕೆ ಸಾಲು ಸಾಲುಗಳು ಅರಸಿಕೊಂಡು ಬರುತ್ತಿವೆ. ಪದವಿಪೂರ್ವ, ಭಗವಾನ್ ಶ್ರೀಕೃಷ್ಣ ಪರಮಾತ್ಮ, ಶುಗರ್ ಫ್ಯಾಕ್ಟರಿ, ತಲ್ವಾರ್ ಪೇಟೆ, ನಟವರ್ ಲಾಲ್, ಬನಾರಸ್ ಬುದ್ಧಿವಂತ2, ಶಂಭೋಶಂಕರ ಹೀಗೆ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿ ಸೋನಲ್ ನಟಿಸುತ್ತಿದ್ದಾರೆ. ಎಲ್ಲರಿಗೂ ಬಾಲಿವುಡ್ ನಲ್ಲಿ ನಟಿಯಾಗಿ ಮಿಂಚಬೇಕು ಎಂಬ ಆಸೆ ಇದ್ದೇ ಇರುತ್ತದೆ. ಆದರೆ ಈ ಕನಸು ನನಸಾಗಿಸಿಕೊಳ್ಳುವ ಭಾಗ್ಯ ಕೇವಲ ಕೆಲವರಿಗಷ್ಟೇ ದೊರಕುತ್ತದೆ. ಇಂತಹ ಅದೃಷ್ಟವಂತರ ಸಾಲಿನಲ್ಲಿ ಸದ್ಯಕ್ಕೆ ಸೋನಾಲ್ ಮೊಂತೆರೋ ಅವರು ನಿಲ್ಲುತ್ತಾರೆ ಎನ್ನಬಹುದು.



ಹೌದು ಸದ್ಯಕ್ಕೆ ಬಾಲಿವುಡ್ ನಲ್ಲಿ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರ ಜೀವನ ಆಧಾರಿತ ಕಥೆಗಳನ್ನು ಸಿನಿಮಾ ಮಾಡುತ್ತಿದ್ದಾರೆ. ಕ್ರಿಕೆಟ್, ಸಂಗೀತ, ರಾಜಕೀಯ, ಸಿನಿಮಾ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳ ಜೀವನಾಧಾರಿತ ಕತೆಯನ್ನು ಪ್ರೇಕ್ಷಕರ ಮುಂದೆ ಸಿನಿಮಾ ಮೂಲಕ ಬಿಚ್ಚಿಡುವುದು ಸದ್ಯಕ್ಕೆ ಬಾಲಿವುಡ್ ನಲ್ಲಿ ಟ್ರೆಂಡ್ ನಲ್ಲಿದೆ. ಸದ್ಯಕ್ಕೆ ಯಾವ ವ್ಯಕ್ತಿಯ ಜೀವನಾಧಾರಿತ ಕಥೆಯನ್ನು ಚಿತ್ರವಾಗಿ ನಿರ್ಮಿಸುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ ಮುಂದೆ ಓದಿ. ಭಾರತದ ಕೋಗಿಲೆಯೆಂದೇ ಖ್ಯಾತಿಯಾಗಿರುವ ಪ್ರಖ್ಯಾತ ಗಾಯಕಿ ಸರೋಜಿನಿ ನಾಯ್ಡು ಅವರ ಜೀವನಾಧಾರಿತ ಸಿನಿಮಾ ರೆಡಿಯಾಗುತ್ತಿದೆ.



ಸರೋಜಿನಿ ನಾಯ್ಡು ಅವರು ಯುವತಿಯಾಗಿರುವ ಸಂದರ್ಭದ ಪಾತ್ರವನ್ನು ಮಂಗಳೂರು ಮೂಲದ ನಟಿ ಸೋನಲ್ ಮೊಂತೆರೋ ಅವರು ನಿರ್ವಹಿಸುತ್ತಿದ್ದಾರೆ. ಹೌದು ಈಗಾಗಲೇ ಸರೋಜಿನಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಶಾಂತಿಪ್ರಿಯ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸರೋಜಿನಿ ನಾಯ್ಡು ಅವರ ಪಾತ್ರ ಮಾಡುತ್ತಿರುವುದಕ್ಕೆ ಮತ್ತು ಬಾಲಿವುಡ್ನಲ್ಲಿ ಇಷ್ಟು ಬೇಗ ಅವಕಾಶ ಪಡೆದುಕೊಂಡಿರುವುದಕ್ಕೆ ನಟಿ ಸೋನಲ್ ಅವರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ ಸೋನಲ್ ಅವರು ಬಾಲಿವುಡ್ ನಲ್ಲಿ ನಟಿಸುವುದು ನನ್ನ ಬಹುಕಾಲದ ಕನಸಾಗಿತ್ತು. ಈಗ ಅದು ನನಸಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.