ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಕ್ಕೆ ಕೈ ಜೋಡಿಸಿದ ಕನ್ನಡದ ಸ್ಟಾರ್ ನಟ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ 83 ಸಿನಿಮಾದ ಜೊತೆ ಕೈ ಜೋಡಿಸಿದ ಸ್ಯಾಂಡಲ್ ವುಡ್ ಮೇರು ನಟ, ಭಾರತೀಯ ಕ್ರಿಕೆಟಿಗ ಕಪಿಲ್ ದೇವ್ ಜೀವನಾಧಾರಿತ ಸಿನಿಮಾ 83 ಚಿತ್ರ ಇದೇ ಡಿಸೆಂಬರ್ 24 ರ ಕ್ರಿಸ್ ಮಸ್ ಹಬ್ಬದಂದು ದೇಶಾದ್ಯಂತ ಪಂಚ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. 1983 ರಲ್ಲಿ ಭಾರತ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು 83 ಸಿನಿಮಾದಲ್ಲಿ ಹೆಣೆಯಲಾಗಿದ್ದು, ನಟ ರಣ್ ವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪತ್ನಿ ರೋಮಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ನಿರ್ದೇಶಕ ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ 83 ಸಿನಿಮಾಗೆ ಸ್ವತಃ ಕಬೀರ್ ಖಾನ್ ಸೇರಿದಂತೆ ನಟಿ ದೀಪಿಕಾ ಪಡುಕೋಣೆ ಕೂಡ ಬಂಡವಾಳ ಹೂಡಿದ್ದಾರೆ.

ಇದೀಗ ಈ 83 ಸಿನಿಮಾದ ಹೊಸ ಸುದ್ದಿ ಅಂದರೆ ಕನ್ನಡದ ಅವತರಣಿಕೆಯ ಜವಾಬ್ದಾರಿಯನ್ನು ಸ್ಯಾಂಡಲ್ ವುಡ್ ಕಿಚ್ಚ ಸುದೀಪ್ ವಹಿಸಿದ್ದಾರೆ. ಹೌದು ಸುದೀಪ್ ಅವರು ರಿಲಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆಯೊಂದಿಗೆ ಕಿಚ್ಚ ಕ್ರಿಯೇಷನ್ಸ್ ಮೂಲಕ 83 ಸಿನಿಮಾದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಈಗಾಗಲೇ ಕಿಚ್ಚ ಸುದೀಪ್ 83 ಸಿನಿಮಾದ ಟೀಸರ್ ಪೋಸ್ಟರ್ ಅನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು‌. ಇದನ್ನ ಕಂಡ ಬಹುತೇಕರು 83 ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದಾರೆ ಎಂದು ತಿಳಿದುಕೊಂಡಿದ್ದರು.

ಆದರೆ ಅಸಲಿಗೆ ಸುದೀಪ್ 83 ಚಿತ್ರದ ಕನ್ನಡ ಅವತರಣಿಕೆಯ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ. ಇನ್ನು ತೆಲುಗು ಅವತರಣಿಕೆಯ ವಿತರಣೆಯ ಹಕ್ಕನ್ನು ನಟ ನಾಗಾರ್ಜುನ್ ಪಡೆದುಕೊಂಡರೆ ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಮಲೆಯಾಳಂ ನಲ್ಲಿ ನಟ, ನಿರ್ದೇಶಕ ಪೃಥ್ವಿರಾಜ್ ಅವರು 83 ಸಿನಿಮಾದ ಡಿಸ್ಟ್ರಿಬ್ಯೂಶನ್ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ 83 ಸಿನಿಮಾದ ಮುಖ್ಯಭೂಮಿಕೆಯಲ್ಲಿ ಜೀವಾ, ತಾಹೀರ್ ರಾಜ್ ಬಾಶಿನ್ ಕಾಣಿಸಿಕೊಂಡಿದ್ದಾರೆ‌. ಈ ಕ್ರೀಡಾಧಾರಿತ 83 ಸಿನಿಮಾಗೆ ಜ್ಯೂಲಿಯಸ್ ಪ್ಯಾಕಿಯಮ್ ಅವರ ರಾಗ ಸಂಯೋಜನೆಯಿದೆ.

%d bloggers like this: