ಬಾಲಿವುಡ್ ಈ ಖ್ಯಾತ ನಟಿಗೆ ವಿಜಯ್ ದೇವರಕೊಂಡ ಅಂದರೆ ತುಂಬಾ ಇಷ್ಟವಂತೆ

ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟ ನಟಿಯರನ್ನ ಹುಡುಗ ಹುಡುಗಿಯರು ಇಷ್ಟ ಪಡುವುದು ಸಹಜ. ಇದಕ್ಕೆ ಸ್ಟಾರ್ ನಟ ನಟಿಯರ ಮಕ್ಕಳು ಕೂಡ ಹೊರತಲ್ಲ. ಇತ್ತೀಚೆಗೆ ಬಾಲಿವುಡ್ ಸ್ಟಾರ್ ನಟನ ಪುತ್ರಿಯೊಬ್ಬರು ಟಾಲಿವುಡ್ ಚಾಕ್ಲೇಟ್ ಅಂಡ್ ರೊಮ್ಯಾಂಟಿಕ್ ಹೀರೋ ವಿಜಯ್ ದೇವರಕೊಂಡ ಅವರನ್ನ ಕಂಡರೆ ನನಗೆ ತುಂಬಾ ಇಷ್ಟ ಅವರೊಂದಿಗೆ ಸಿನಿಮಾದಲ್ಲಿ ನಟಿಸಬೇಕು ಎಂದು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಆ ಬಾಲಿವುಡ್ ಸ್ಟಾರ್ ನಟನ ಪುತ್ರಿ ಬೇರಾರು ಅಲ್ಲ. ಹಿಂದಿ ಚಿತ್ರರಂಗದ ಪ್ರಸಿದ್ದ ನಟ ಸೈಫ್ ಅಲಿ ಖಾನ್ ಅವರ ಮೊದಲ ಪತ್ನಿಯ ಮಗಳಾದ ಸಾರಾ ಅಲಿಖಾನ್ ಅವರಿಗೆ ವಿಜಯ್ ದೇವರಕೊಂಡ ಅವರನ್ನ ಕಂಡರೆ ತುಂಬಾ ಇಷ್ಟ ಅಂತೆ. ಸಾರಾ ಅಲಿಖಾನ್ ಬಾಲಿವುಡ್ ನಲ್ಲಿ ಇತ್ತೀಚೆಗೆ ಶೈನ್ ಆಗುತ್ತಿದ್ದಾರೆ.

2018ರಲ್ಲಿ ಕೇದಾರ್ ನಾಥ್ ಮತ್ತು ಸಿಂಬ ಚಿತ್ರದ ಮೂಲಕ ಬಿಟೌನ್ಗೆ ಎಂಟ್ರಿಕೊಟ್ಟ ಸಾರಾ ಅಲಿಖಾನ್ ತಮ್ಮ ಮೊದಲ ಚಿತ್ರಕ್ಕೆ ಫಿಲ್ಮ್ ಫೇರ್ ಅವಾರ್ಡ್ ಅನ್ನು ಕೂಡ ಪಡೆದಿದ್ದಾರೆ. ನಟಿ ಸಾರಾ ಅಲಿಖಾನ್ 2019ರಲ್ಲಿ ಫೋರ್ಬ್ಸ್ 100ರ ಪಟ್ಟಿಯಲ್ಲಿಯೂ ಕೂಡ ಸೇರ್ಪಡೆಗೊಂಡಿದ್ದರು. ಇನ್ನು ನಟಿ ಸಾರಾ ಅಲಿಖಾನ್ ಸದ್ಯಕ್ಕೆ ಅತ್ರಾಂಗಿರೇ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಟಿ ಸಾರಾ ಅಲಿಖಾನ್ ಅವರು ಬಾಲಿವುಡ್ ಸ್ಟಾರ್ ನಿರೂಪಕ, ನಿರ್ಮಾಪಕರಾದ ಕರಣ್ ಜೋಹರ್ ಅವರ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಗೆ ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ, ನಿರ್ದೇಶಕ ಪೂರಿ ಜಗನ್ನಾಥ್, ಕಿಯಾರಾ ಮಲ್ಹೋತ್ರಾ ಕೂಡ ಪಾಲ್ಗೊಂಡಿದ್ದರು.

ಈ ಪಾರ್ಟಿಯಲ್ಲಿ ಸಾರಾ ಅಲಿಖಾನ್ ಅವರು ತನ್ನ ನೆಚ್ಚನ ನಟ ವಿಜಯ್ ದೇವರಕೊಂಡ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದರು. ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಕೂಡ ಆದವು. ಇನ್ನು ಇದೇ ವಿಚಾರವಾಗಿ ಖಾಸಗಿ ಎಂಟರ್ಟೈನ್ ಮೆಂಟ್ ಚಾನೆಲ್ ನಲ್ಲಿ ನಟಿ ಸಾರಾ ಅಲಿಖಾನ್ ಅವರು ನನಗೆ ವಿಜಯ್ ದೇವರಕೊಂಡ ಅವರೆಂದರೆ ಇಷ್ಟ. ಅವರು ಕ್ಯೂಟ್ ಅಂಡ್ ಹಾಟ್ ನಟ. ಅವರ ಜೊತೆ ಸಿನಿಮಾ ಮಾಡಬೇಕು ಎಂದು ತಮ್ಮ ಮನದಿಚ್ಚೆಯನ್ನ ವ್ಯಕ್ತಪಡಿಸಿದ್ದರು. ಇನ್ನು ದಕ್ಷಿಣ ಭಾರತದ ಬಹು ಬೇಡಿಕೆಯ ನಟ ವಿಜಯ್ ದೇವರಕೊಂಡ ಸದ್ಯಕ್ಕೆ ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಲೈಗರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಾಕ್ಸಿಂಗ್ ಕಥೆಯಾಧರಿತ ಲೈಗರ್ ಚಿತ್ರಕ್ಕೆ ಪೂರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವಾ ಮೆಹ್ತಾ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

%d bloggers like this: