ಬಾಲಿವುಡ್ ಗೆ ಎಂಟ್ರಿ ಕೊಡುವ ಸೂಚನೆ ನೀಡಿದ ದಕ್ಷಿಣ ಭಾರತದ ಸ್ಟಾರ್ ನಟಿ

ಬಾಲಿವುಡ್ ಗೆ ಎಂಟ್ರಿ ಕೊಡುವ ಸೂಚನೆ ನೀಡಿದ ಸೌತ್ ಸಿನಿ ದುನಿಯಾದ ಸುಪ್ರಸಿದ್ದ ನಟಿ, ಹೌದು ಇತ್ತೀಚೆಗಿನ ಕಳೆದ ಕೆಲವು ವರ್ಷಗಳಿಂದ ಹಿಂದೀಚೆಗೆ ದಕ್ಷಿಣ ಭಾರತದ ಅನೇಕ ನಟ ನಟಿಯರು ಹಿಂದಿ ಭಾಷೆಯಲ್ಲಿ ನಟಿಸುವ ಅವಕಾಶ ಪಡೆಯುತ್ತಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಖ್ಯಾತ ನಟಿಯರಾದ ಪೂಜಾ ಹೆಗ್ಡೆ, ಸಮಂತಾ, ರಶ್ಮಿಕಾ ಮಂದಣ್ಣ, ನಭಾ ನಟೇಶ್ ಸೇರಿದಂತೆ ಅನೇಕರು ತೆಲುಗು, ತಮಿಳು, ಮಲೆಯಾಳಂ ಹೀಗೆ ಎಲ್ಲಾ ರೀತಿಯ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಸಾಯಿ ಪಲ್ಲವಿ ಕೂಡ ಸೇರ್ಪಡೆಯಾಗುವ ಇಚ್ಚೆಯನ್ನ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಟಿ ಸಾಯಿ ಪಲ್ಲವಿ ಅವರು ತೆಲುಗು, ತಮಿಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ನಟನೆಯ ಜೊತೆಗೆ ತಮ್ಮ ನೃತ್ಯದ ಮೂಲಕವೂ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಸದ್ಯದ ಮಟ್ಟಿಗೆ ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಸಾಯಿಪಲ್ಲವಿ ಅವರು ಹಿಂದಿ ಸಿನಿಮಾದಲ್ಲಿ ನಟಿಸಲು ಸಿದ್ದರಾಗಿದ್ದಾರಂತೆ. ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. ಆದರೆ ಅವರು ಹಿಂದಿ ಸಿನಿಮಾಗಳಲ್ಲಿ ನಟಿಸಲು ಕೆಲವು ನಿರ್ಬಂಧ ಷರತ್ತುಗಳನ್ನು ಅಳವಡಿಸಿಕೊಳ್ಳುತ್ತಾರಂತೆ.
ನಟಿ ಸಾಯಿ ಪಲ್ಲವಿ ಅವರು ಮೂವತ್ತು ವರ್ಷದೊಳಗಿನ ಜನಪ್ರಿಯ ವ್ಯಕ್ತಿಗಳ 2020ರ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು.

ಎಂ.ಬಿ.ಬಿ.ಎಸ್. ಪದವೀಧರರಾಗಿರುವ ಸಾಯಿ ಪಲ್ಲವಿ ಅವರು 2015ರಲ್ಲಿ ಮಲೆಯಾಳಂನ ಪ್ರೇಮಂ ಎಂಬ ಚಿತ್ರದಲ್ಲಿ ಮಲಾರ್ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಇದಾದ ಬಳಿಕ 2016 ರಲ್ಲಿ ತೆಲುಗಿನ ಕಾಲಿ ಚಿತ್ರದಲ್ಲಿ ನಟಿಸುವ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟರು ಸಾಯಿ ಪಲ್ಲವಿ. ಟಾಲಿವುಡ್ ನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಮತ್ತು ಸಾಯಿ ಪಲ್ಲವಿ ಅವರ ಜೋಡಿ ಸೂಪರ್ ಜೋಡಿಯಾಗಿ ಹೆಸರು ಮಾಡಿದೆ‌. ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಅವರು ನಾಗಚೈತನ್ಯ ಅವರೊಟ್ಟಿಗೆ ಲವ್ ಸ್ಟೋರಿ ಎಂಬ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಯಶಸ್ಸಿನ ಬಳಿಕ ಸಾಯಿ ಪಲ್ಲವಿ ಅವರಿಗೆ ಸಾಲು ಸಾಲು ಸಿನಿಮಾಗಳು ಹರಸಿ ಬರುತ್ತಿವೆ.

ಸಿನಿಮಾದ ಕಥೆ ಮತ್ತು ತಮ್ಮ ಪಾತ್ರದ ಬಗ್ಗೆ ಅಪಾರ ಕಾಳಜಿ ವಹಿಸುವ ಸಾಯಿ ಪಲ್ಲವಿ ಅವರು ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಉತ್ತಮ ಸಕ್ಸಸ್ ರೇಟಿಂಗ್ ಹೊಂದಿದ್ದಾರೆ. ಅಂತೆಯೇ ತಾವು ಹಿಂದಿ ಸಿನಿಮಾಗಳಲ್ಲಿ ನಟಿಸಲು ಇಚ್ಚೆ ಇದೆ. ಆದರೆ ನನಗೆ ಸಿನಿಮಾದ ಕಥೆ ಗಟ್ಟಿತನವಾಗಿದ್ದು, ನಾನು ಮಾಡುವ ಪಾತ್ರ ಪ್ರಾಶಸ್ತ್ಯ ಹೊಂದಿದ್ದರೆ ನಾನು ಹಿಂದಿ ಚಿತ್ರಗಳಲ್ಲಿ ನಟಿಸಲು ಸಿದ್ದ ಎಂದು ಸಾಯಿ ಪಲ್ಲವಿ ತಿಳಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಯಶಸ್ಸು ಕಂಡ ಕೂಡಲೇ ಬಾಲಿವುಡ್ ನಲ್ಲಿ ಸಕ್ಸಸ್ ಕಾಣುವುದಿಲ್ಲ ಎಂಬುದನ್ನ ಅರಿತಿರುವ ಸಾಯಿ ಪಲ್ಲವಿ ಅವರು ಕೊಂಚ ಜಾಗೃತವಾಗಿಯೆ ಬಾಲಿವುಡ್ ಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

%d bloggers like this: