ಬಾಲಿವುಡ್ ಗೆ ಹಾರಿದ ಕನ್ನಡದ ಖ್ಯಾತ ನಿರ್ದೇಶಕ

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಭಾರತೀಯ ಚಿತ್ರೋದ್ಯಮದಲ್ಲಿ ಕನ್ನಡ ಚಲನಚಿತ್ರರಂಗದ ಹವಾ ಸ್ವಲ್ಪ ಜೋರಾಗಿಯೇ ಇದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಹೌದು ಕನ್ನಡದ ಹೆಮ್ಮೆಯ ಚಿತ್ರ ಎನಿಸಿಕೊಂಡ ಕೆಜಿಎಫ್ ಅದರ ನಂತರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಹಾಗೂ ಇನ್ನೇನು ಬಿಡುಗಡೆ ಆಗಬೇಕಿರುವ ಕಿಚ್ಚ ಸುದೀಪ್ ಅವರು ಅಭಿನಯಿಸಿರುವ ವಿಕ್ರಂತ್ ರೋಣ ಈ ಎಲ್ಲ ಚಿತ್ರಗಳು ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೆ ದೇಶಾದ್ಯಂತ ಸುದ್ದಿ ಮಾಡಿದ ಚಿತ್ರಗಳು. ನಮ್ಮ ಚಿತ್ರರಂಗದ ನಾಯಕ ನಟರುಗಳು ಪೋಷಕ ನಟ ನಟಿಯರು, ನೃತ್ಯ ಹಾಗೂ ಸಾಹಸ ಕಲಾವಿದರು, ಸಂಗೀತ ನಿರ್ದೇಶಕರು ಹಾಗೂ ಚಿತ್ರ ನಿರ್ದೇಶಕರು ಇವರೆಲ್ಲರಿಗೂ ಬೇರೆ ಭಾಷೆಯ ಚಿತ್ರರಂಗಗಳಲ್ಲಿ ಬೇಡಿಕೆ ಶುರುವಾಗಿದೆ.

ಅದೇ ರೀತಿ ಇದೀಗ ಕನ್ನಡದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾದ ಗೂಗ್ಲಿ ಮಾಸ್ಟರ್ ಪವನ್ ಒಡೆಯರ್ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ಪವನ್ ಒಡೆಯರ್ ಅವರು ಇದೀಗ ಹಿಂದಿ ಭಾಷೆಯಲ್ಲಿ ನೋಟರಿ ಎಂಬ ಚಿತ್ರವನ್ನು ನಿರ್ದೇಶಿಸಲು ಸಜ್ಜಾಗಿದ್ದು ಅದಕ್ಕೆ ನಾಯಕ ನಟನನ್ನಾಗಿ ಬೆಂಗಾಲಿ ಚಿತ್ರರಂಗದ ಪರಂಬ್ರತ ಚಟ್ಟೋಪಾಧ್ಯಯ ಅವರನ್ನು ಆಯ್ಕೆ ಮಾಡಿದ್ದಾರೆ. ಕನ್ನಡದಲ್ಲಿ ಗೂಗ್ಲಿ, ನಟಸಾರ್ವಭೌಮ, ಗೋವಿಂದಾಯ ನಮಃ ಹೀಗೆ ಹಲವು ಹಿಟ್ ಚಿತ್ರಗಳನ್ನು ನೋಡಿ ಬೇಷ್ ಎನಿಸಿಕೊಂಡರು. ಇದೀಗ ಅದೇ ರೀತಿಯಲ್ಲಿ ಹಿಂದಿ ಚಿತ್ರ ರಂಗದಲ್ಲಿ ಕೂಡ ತಮ್ಮ ಛಾಪನ್ನು ಮೂಡಿಸಲು ಸಜ್ಜಾಗಿದ್ದಾರೆ.

%d bloggers like this: