ಬಾಲಿವುಡ್ ನಲ್ಲಿ ಹೊಸ ಜೀವನ ಶುರು ಮಾಡಿದ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ

ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ನಟ ನಟಿಯರಲ್ಲಿ ರಶ್ಮಿಕ ಮಂದಣ್ಣ ಕೂಡ ಒಬ್ಬರು, ಸಿನಿಮಾ ರಂಗಕ್ಕೆ ಬಂದ ಕೇವಲ ಮೂರೇ ವರ್ಷದಲ್ಲಿ ಅವರು 3ಭಾಷೆಯಲ್ಲಿ ಹೆಸರು ಮಾಡಿದವರು. ಸದಾ ನಗುಮುಖದ ಈ ಚೆಲುವೆ ಜೀವನದ ಇನ್ನೊಂದು ಮುಖ್ಯ ಮೆಟ್ಟಿಲನ್ನು ಏರುತ್ತಿದ್ದಾರೆ. 2016ರಲ್ಲಿ ಕನ್ನಡದ ಕಿರಿಕ್ ಪಾರ್ಟಿ ಚಿತ್ರದೊಂದಿಗೆ ಚಿತ್ರರಂಗ ಪ್ರವೇಶಿಸಿದ ಈ ನಟಿ ರಶ್ಮಿಕ ಮಂದಣ್ಣ ರಕ್ಷಿತ್ ಜೊತೆ ಅತ್ಯುನ್ನತವಾದ ನಟಿನೆ ಮಾಡಿ ಸೈ ಎನಿಸಿಕೊಂಡರು. ತದನಂತರ ಕನ್ನಡದ ಘಟಾನುಘಟಿ ದೊಡ್ಡ ನಟರ ಜೊತೆಯಲ್ಲ ಹಿಟ್ ಚಿತ್ರಗಳನ್ನು ಮಾಡಿ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡರು.

ಬಳಿಕ 2018ರಲ್ಲಿ ತೆಲುಗು ಚಿತ್ರರಂಗವನ್ನು ಸಹ ಪ್ರವೇಶ ಮಾಡಿಬಿಟ್ಟರು, ತೆಲುಗು ನಟ ವಿಜಯ್ ದೇವರಕೊಂಡ ಅವರ ಜೊತೆ ನಟಿಸಿ ತಮ್ಮ ಜೀವನದ ಮೊಟ್ಟ ಮೊದಲ 100 ಕೋಟಿ ಚಿತ್ರವನ್ನು ಪಡೆದುಕೊಂಡರು. ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಇರುವ ನಟಿ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮೊತ್ತದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಈಗಿನ ಸಂಭಾವನೆ ಒಂದು ಕೋಟಿಗೂ ಅಧಿಕ ಎಂದು ಹೇಳಲಾಗುತ್ತಿದೆ, ಕರ್ನಾಟಕ ಹಾಗೂ ಆಂಧ್ರದಲ್ಲಿ ಸದ್ದು ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಈಗ ಉತ್ತರ ಭಾರತದಲ್ಲಿಯೂ ತಮ್ಮ ಕೈಚಳಕವನ್ನು ತೋರಿಸಲು ತಯಾರಾಗಿದ್ದಾರೆ.

ಹೌದು ರಶ್ಮಿಕಾ ಅವರು ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದ ಹಿಂದಿ ನಟ ಸಿದ್ಧಾರ್ಥ್ ಮಲ್ಹೋತ್ರ ಅವರೊಂದಿಗೆ ನಟಿಸುತ್ತಿದ್ದಾರೆ.ಚಿತ್ರದ ಟೈಟಲ್ ಅನ್ನು ಮಿಷನ್ ಮಜ್ನು ಎಂದು ಇಡಲಾಗಿದ್ದು ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದ ಮೂಲಕ ರಶ್ಮಿಕ ಮಂದಣ್ಣ ಅವರು ಹಿಂದಿ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಜೀವನ ಶುರು ಮಾಡಿದ ರಶ್ಮಿಕ ಮಂದಣ್ಣ ಅವರ ಯಶಸ್ಸು ಗಳಿಸಲಿ ಎಂದು ಹಾರೈಸೋಣ.

%d bloggers like this: