ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಾಡಿಗಾರ್ಡ್ ಗೆ ಬರೋಬ್ಬರಿ ಇಷ್ಟು ಸಂಬಳ ಕೊಡುತ್ತಾರೆ

ಯಾವುದೇ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಯ ವರ್ಚಸ್ಸು ಹಿರಿಮೆ ಎಷ್ಟು ಹೆಚ್ಚುತ್ತದೆಯೋ ಅದರ ಹಿಂದೆ ಅಷ್ಟೇ ತಲೆನೋವು ಅವರಿಗೆ ಇರುತ್ತದೆ. ಯಾವುದಾದರೂ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಒಂದು ಸ್ಥಳಕ್ಕೆ ಬರುತ್ತಾರೆ ಎಂದರೆ ಅಲ್ಲಿ ಅವರ ಅಭಿಮಾನಿಗಳ ದಂಡೇ ಸೇರಿರುತ್ತದೆ. ಅಭಿಮಾನಿಗಳ ನೂಕುನುಗ್ಗಾಟ ನಡುವೆ ತಾರೆಯರ ಪಾಡಂತೂ ಕೇಳಲೇಬೇಡಿ. ಹಾಗಾಗಿ ಪ್ರತಿಯೊಬ್ಬ ಸೆಲೆಬ್ರಿಟಿಯು ತಮ್ಮ ಬೆಂಗಾವಲಾಗಿ ಒಬ್ಬ ಬಾಡಿಗಾರ್ಡ್ ಅಥವಾ ಅಂಗರಕ್ಷಕರನ್ನು ನೇಮಿಸಿಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅತಿ ವೇಗವಾದ ಸೋಶಿಯಲ್ ಮೀಡಿಯಾ ಕಾರಣದಿಂದ ಸೆಲೆಬ್ರಿಟಿಗಳಷ್ಟೇ ಅಲ್ಲದೆ ಅವರ ಅಂಗರಕ್ಷಕರು ಕೂಡ ಸುದ್ದಿಯಾಗುತ್ತಿದ್ದಾರೆ.

ಅದರಲ್ಲೂ ಕೆಲವು ಸೆಲೆಬ್ರಿಟಿಗಳು ಎಷ್ಟು ವರ್ಷಗಳಿಂದ ಅದೇ ಅಂಗರಕ್ಷಕರನ್ನು ಪ್ರೀತಿಯಿಂದ ಕಾಣುತ್ತಾ ಬಂದಿರುತ್ತಾರೆ ಹಾಗೆಯೇ ಅಂಗರಕ್ಷಕರು ಅಷ್ಟೇ ಅವರಿಗೆ ವಿಧೇಯರಾಗಿರುತ್ತಾರೆ. ಅದರಂತೆ ಅವರಿಗೆ ಕೊಡುವ ಸಂಬಳ ಕೇಳಿದರೆ ನೀವು ನಿಜಕ್ಕೂ ಗಾಬರಿ ಆಗುತ್ತೀರಿ. ಕೆಲವು ಸೆಲೆಬ್ರಿಟಿ ಗಳಂತೂ ಅಂಗರಕ್ಷಕರನ್ನು ತಮ್ಮ ಮನೆಯ ಸದಸ್ಯ ಎಂದೇ ಭಾವಿಸಿರುತ್ತಾರೆ. ಅಂತಹ ಸೆಲೆಬ್ರಿಟಿಗಳ ಪೈಕಿ ಬಾಲಿವುಡ್ನ ಖ್ಯಾತ ನಟಿ ಕಂಗನಾ ರಣಾವತ್ ಕೂಡ ಒಬ್ಬರು.

ಹೌದು ಕಂಗಣ ರಣವತ್ ಅವರಿಗೆ ಹಲವು ವರ್ಷಗಳಿಂದ ಅಂಗರಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ ಕುಮಾರ ಎಂಬ ವ್ಯಕ್ತಿ. ಕುಮಾರ್ ಅವರು ಕಂಗಣ ರಣವತ್ ಅವರ ಮನೆಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಯಾವುದೇ ಖಾಸಗಿ ಸಭೆ ಸಮಾರಂಭಗಳಿಗೆ ಹೋದರೂ ಕೂಡ ಕಂಗನಾ ಅವರು ಕುಮಾರ್ ಅವರನ್ನು ಕರೆದುಕೊಂಡು ಹೋಗುತ್ತಾರೆ. ಈ ಹಿಂದೆ ತಮ್ಮ ಅಂಗರಕ್ಷ ಕುಮಾರ್ ಅವರ ಹುಟ್ಟುಹಬ್ಬವನ್ನು ಬಹಳ ಪ್ರೀತಿಯಿಂದ ಆಚರಿಸಿದ್ದರು ಕಂಗನಾ ಇದು ಆ ಸಮಯದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಹಾಗೆಯೇ ಒಂದು ವರ್ಷಕ್ಕೆ ಕಂಗನಾ ರಣವತ್ ಅವರು ಕುಮಾರ್ ಅವರಿಗೆ ಬರೋಬ್ಬರಿ 90 ರಿಂದ 95 ಲಕ್ಷ ರೂಪಾಯಿಗಳನ್ನು ಸಂಬಳವಾಗಿ ನೀಡುತ್ತಾರೆ ಎಂದರೆ ನೀವು ನಂಬಲೇಬೇಕು. ಹೌದು ತಮ್ಮ ಜೀವವನ್ನು ಪಣಕ್ಕಿಟ್ಟು ತಮ್ಮ ಮಾಲೀಕರನ್ನ ಕಾಪಾಡುವ ಬಾಡಿಗಾರ್ಡಗಳಿಗೆ ಸೆಲೆಬ್ರಿಟಿಗಳು ಹಿಂದುಮುಂದು ನೋಡದೆ ಹಣ ಸುರಿಯುತ್ತಾರೆ. ಆದರೆ ಕುಮಾರ್ ಮತ್ತು ಕಂಗನಾ ಅವರು ದುಡ್ಡಿಗಿಂತ ಹೆಚ್ಚಾಗಿ ತುಂಬಾ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂಬುದು ಶ್ಲಾಘನೀಯವಾದುದು.

%d bloggers like this: