ಸಾಮಾನ್ಯವಾಗಿ ಹೈ ಬಜೆಟ್ ಸಿನಿಮಾಗಳು ಮತ್ತು ಅತ್ಯಧಿಕ ಸಂಭಾವನೆ ಪಡೆಯುವ ನಟರು ಅಂದಾಕ್ಷಣ ನೇರವಾಗಿ ಹಾಲಿವುಡ್ ಮತ್ತು ಬಾಲಿವುಡ್ ಮಂದಿಯತ್ತ ದೃಷ್ಟಿ ನೆಟ್ಟುತ್ತದೆ. ಆದರೆ ನಮ್ಮ ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟರೊಬ್ಬರು ಸೈಲೆಂಟಾಗಿಯೇ ಶತಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಇದು ಭಾರತೀಯ ಚಿತ್ರರಂಗದ ಅನೇಕ ಸ್ಟಾರ್ ನಟರಿಗೇ ಅಚ್ಚರಿಯನ್ನುಂಟು ಮಾಡಿದೆ. ಹೌದು ಶತಕೋಟಿ ಸಂಭಾವನೆ ಪಡೆಯುತ್ತಿರುವ ಈ ನಟ ಬೇರಾರು ಅಲ್ಲ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಇಳಯ ದಳಪತಿ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್. ಹೌದು ನಟ ವಿಜಯ್ ಕಾಲಿವುಡ್ನ ಕ್ಲಾಸ್ ಅಂಡ್ ಮಾಸ್ ಹೀರೋ.

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವೊಂದಿರುವ ನಟರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವ ನಟ. ಇಳಯ ದಳಪತಿ ವಿಜಯ್ ಅವರ ಸಂಭಾವನೆಯಲ್ಲಿ ಇತ್ತೀಚೆಗೆ ಭಾರಿ ಏರಿಕೆ ಕಂಡಿದೆ ಅಂತೆ. ಅದಕ್ಕೆ ಪ್ರಮುಖ ಕಾರಣ ಅಂದರೆ ಅವರ ಅಭಿನಯದ ಬಹುತೇಕ ಸಿನಿಮಾಗಳು ಮೊದಲ ವಾರದೊಳಗೆ ನೂರಾರು ಕೋಟಿ ಗಳಿಕೆ ಮಾಡಿ ದಾಖಲೆ ನಿರ್ಮಣ ಮಾಡುತ್ತಿವೆ. ಅದೂ ಕೂಡ ಕೋವಿಡ್ ಕಠಿಣ ನಿಯಮಗಳ ನಡುವೆಯೂ ಕೂಡ ನೂರಾರು ಕೋಟಿ ಕಲೆಕ್ಷನ್ ಮಾಡಿದೆ ಅಂದರೆ ಅವರ ಫ್ಯಾನ್ ಕ್ರೇಜ಼್ ಎಷ್ಟರ ಮಟ್ಟಿಗೆ ಎಂಬುದನ್ನ ಊಹೆ ಮಾಡಿಕೊಳ್ಳಲೇಬೇಕು. ಕಳೆದ ವರ್ಷ ಅವರ ನಟನೆಯ ಮಾಸ್ಟರ್ ಸಿನಿಮಾ ಬಿಡುಗಡೆ ಆಯಿತು.

ಈ ಸಂಧರ್ಭದಲ್ಲಿ ಥಿಯೇಟರ್ ಗಳಲ್ಲಿ ಶೇಕಡ ಐವತ್ತರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಇಂತಹ ಸಂಧರ್ಭದಲ್ಲಿಯೂ ಕೂಡ ಈ ಮಾಸ್ಟರ್ ಸಿನಿಮಾ ವಾರದೊಳಗೆ ನೂರಾರು ಕೋಟಿ ಕಮಾಯಿ ಮಾಡಿತ್ತು. ಇಳಯ ದಳಪತಿ ವಿಜಯ್ ಅವರ ಸಿನಿಮಾಗಳಿಗೆ ಹಣ ಹೂಡಿದ ನಿರ್ಮಾಪಕರು ಅದರ ಹತ್ತು ಪಟ್ಟು ಹಣ ಗಳಿಸುತ್ತಾರೆ. ಅಷ್ಟರ ಮಟ್ಟಿಗೆ ವಿಜಯ್ ಸಿನಿಮಾಗಳಿಗೆ ಕ್ರೇಜ಼್ ಇರುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ರಿಲೀಸ್ ಆದ ಬಿಗಿಲ್ ಸಿನಿಮಾ ದಾಖಲೆ ಮಟ್ಟದಲ್ಲಿ ಗಳಿಕೆ ಮಾಡಿತ್ತು. ಇದಾದ ಬಳಿಕ ಕಳೆದ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಮಾಸ್ಟರ್ ಸಿನಿಮಾ ಕೂಡ ಬರೋಬ್ಬರಿ 300 ಕೋಟಿ ದಾಖಲೆಯ ಕಲೆಕ್ಷನ್ ಮಾಡಿತು. ಮಾಸ್ಟರ್ ಸಿನಿಮಾದ ಮಾಡಿದ ಈ ಪ್ರಮಾಣದ ಕಲೆಕ್ಷನ್ ವಿಜಯ್ ಅವರು ತಮ್ಮ ಸಂಭಾವನೆಯನ್ನು ಏರಿಸಿ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ.

ಹೌದು ನಟ ವಿಜಯ್ ತಮ್ಮ ನಟನೆಯ 66ನೇ ಸಿನಿಮಾಗೆ ಬರೋಬ್ಬರಿ 120 ಕೋಟಿ ಸಂಭಾವನೆ ಪಡೆಯಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಿನಿಮಾವನ್ನು ಖ್ಯಾತ ನಿರ್ಮಾಪಕರಾದ ದಿಲ್ ರಾಜು ಅದ್ದೂರಿಯಾಗಿ ನಿರ್ಮಾಣ ಮಾಡಲಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಇಳಯ ದಳಪತಿ ನಟ ವಿಜಯ್ ನೂರು ಕೋಟಿಗಿಂತ ಅಧಿಕ ಸಂಭಾವನೆ ಪಡೆಯುವ ಮೂಲಕ ಬಾಲಿವುಡ್ ಸ್ಟಾರ್ ನಟರನ್ನೇ ಹಿಂದಿಕ್ಕಿದ್ದಾರೆ.

ಈ ಮೂಲಕ ಅತಿ ಹೆಚ್ಚು ಸಂಭಾವನೆಯ ಪಡೆಯುವ ವಿಚಾರದಲ್ಲಿ ನಟ ವಿಜಯ್ ದಾಖಲೆ ನಿರ್ಮಿಸಿದ್ದಾರೆ. ಇದೀಗ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ನಟ ವಿಜಯ್ ಕೂಡ ಸೇರ್ಪಡೆಗೊಂಡಿದ್ದಾರೆ. ಇದರ ನಡುವೆಯೆ ಓಟಿಟಿ ದಿಗ್ಗಜ ಸಂಸ್ಥೆಯೊಂದು ಇಳಯ ದಳಪತಿ ಅವರ ಮುಂದಿನ ಚಿತ್ರ ಆರಂಭವಾಗುವ ಮುನ್ನವೇ ಆ ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್ ರೈಟ್ಸ್ ಖರೀದಿಗಾಗಿ ಬರೋಬ್ಬರಿ ಇನ್ನೂರು ಕೋಟಿ ಆಫರ್ ಮಾಡಿದೆಯಂತೆ. ಆದರೆ ಈ ಸಿನಿಮಾದ ಚಿತ್ರೀಕರಣ ಮಾರ್ಚ್ ತಿಂಗಳಿನಿಂದ ಆರಂಭವಾಗುವುದರಿಂದ ಇದಾದ ಬಳಿಕ ಇದರ ಬಗ್ಗೆ ಮಾತುಕತೆ ನಡೆಸುವುದಾಗಿ ನಿರ್ಮಾಪಕರು ತಿಳಿಸಿದ್ದಾರಂತೆ.