ಬಾಲಿವುಡ್ ಸ್ಟಾರ್ ನಟಿಯ ಮನೆಗೆ ಅವಳಿ ಜವಳಿ ಮಗುಗಳ ಆಗಮನ

ಬಾಲಿವುಡ್ ಸುಪ್ರಸಿದ್ದ ಅನೇಕ ನಟ ನಟಿಯರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವರು ತಮ್ಮ ಸಿನಿಮಾ ವಿಚಾರವಾಗಿ ಸುದ್ದಿಯಾದರೆ, ಇನ್ನೂ ಕೆಲವರು ತಮ್ಮ ವೈಯಕ್ತಿಕ ಜೀವನದ ಕುರಿತಾಗಿ ಸುದ್ದಿಯಾಗುತ್ತಿರುತ್ತಾರೆ. ಅಂತೆಯೇ ಈ ಇದೀಗ ತಮ್ಮ ದಾಂಪತ್ಯ ತಾಯಿಯ ಕರ್ತವ್ಯ ಎಷ್ಟು ಸಂತೋಷ ನೀಡುತ್ತದೆ ಎಂಬ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಹೌದು ಬಾಲಿವುಡ್ ಸ್ಟಾರ್ ನಟಿ ಪ್ರೀತಿ ಜಿಂಟಾ ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಫೋಟೋವನ್ನು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ಪ್ರೀತಿ ಜಿಂಟಾ ಹಿಂದಿ ಚಿತ್ರರಂಗದ ಬೇಡಿಕೆಯ ನಟಿಯಾಗಿ ಮಿಂಚುವುದರ ಜೊತೆಗೆ ಉದ್ಯಮಿಯಾಗಿಯೂ ಕೂಡ ಗುರುತಿಸಿಕೊಂಡವರು.

ಕ್ರಿಮಿನಲ್ ಸೈಕಾಲಜಿಯಲ್ಲಿ ಪದವಿ ಪಡೆದಿರುವ ಪ್ರೀತಿ ಜಿಂಟಾ ದಿಲ್ ಸೇ ಚಿತ್ರದ ಮೂಲಕ ಬಿಟೌನ್ಗೆ ಎಂಟ್ರಿ ಕೊಡುತ್ತಾರೆ. ತದ ನಂತರ ಒಂದೇ ವರ್ಷದಲ್ಲಿ ಸೋಲ್ಜರ್ ಎಂಬ ಚಿತ್ರದಲ್ಲಿ ನಟಿಸುತ್ತಾರೆ. ಈ ಚಿತ್ರದ ನಟನೆಗಾಗಿ ಅವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸುತ್ತದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯ ನಟಿಯಾಗಿ ಮಿಂಚುವ ಪ್ರೀತಿ ಜಿಂಟಾ ಅವರು 2016ರಲ್ಲಿ ಜೀನ್ ಗುಡೆನಫ್ ಎಂಬುವರೊಟ್ಟಿಗೆ ವೈವಾಹಿಕ ಜೀವನಕ್ಕೆ ಹೆಜ್ಜೆ ಇಡುತ್ತಾರೆ. ಈ ದಂಪತಿಗಳು ಕಳೆದ ನವೆಂಬರ್ ನಲ್ಲಷ್ಟೇ ಬಾಡಿಗೆ ತಾಯಿಯ ಮೂಲಕ ಒಂದು ಗಂಡು ಒಂದು ಹೆಣ್ಣು ಮಗುವನ್ನು ಪಡೆದುಕೊಂಡು ಆ ಮಕ್ಕಳಿಗೆ ಜಯ್ ಮತ್ತು ಗಿಯಾ ಎಂಬ ಹೆಸರಿನಿಟ್ಟಿದ್ದರು.

ಮಕ್ಕಳ ಲಾಲನೆ ಪಾಲನೆಯಲ್ಲಿ ತೊಡಗಿಕೊಂಡಿರುವ ನಟಿ ಪ್ರೀತಿ ಜಿಂಟಾ ತಮ್ಮ ಮುದ್ದಾದ ಮಕ್ಕಳಿಬ್ಬರ ಪೋಟೋವನ್ನು ಇದೇ ಮೊದಲ ಬಾರಿಗೆ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮಕ್ಕಳ ಪೋಟೋ ಜತೆಗೆ ಮಕ್ಕಳ ಬರ್ಪ್ ಬಟ್ಟೆಗಳು, ಡೈಪರ್ ಗಳು ಇವೆಲ್ಲವನ್ನ ಮಕ್ಕಳ ಲಾಲನೆ ಪಾಲನೆ ತಾಯಿಯ ಕರ್ತವ್ಯವನ್ನ ನಾನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಪ್ರೀತಿ ಜಿಂಟಾ ಅವರ ಈ ಪೋಸ್ಟ್ಗೆ ಬಾಲಿವುಡ್ ನಟಿಯರಾದ ದಿಯಾ ಮಿರ್ಜಾ, ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ ಅವರು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಕೂಡ ಮಾಡಿದ್ದಾರೆ.

%d bloggers like this: