ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿದ ಆಲಿಯಾ ಅವರ ಹೊಸ ಚಿತ್ರ, 3 ದಿನದಲ್ಲಿ ಗಳಿಸಿದ್ದೆಷ್ಟು ಗೊತ್ತಾ

ಕಳೆದ ವಾರ ಅಂದರೆ ಫೆಬ್ರವರಿ 25ರಂದು ತೆರೆಕಂಡ ಗಂಗೂಬಾಯಿ ಕಾಠಿಯಾವಾಡಿ ಸಿನಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಬಹು ಪರಾಕ್ ಹೇಳಿಸಿಕೊಂಡಿದೆ. ಅದರಲ್ಲಿಯೂ ನಟಿ ಆಲಿಯಾ ಭಟ್ ಅವರ ಅಮೋಘ ನಟನೆಗೆ ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೌದು ಬಾಲಿವುಡ್ ಸುಪ್ರಸಿದ್ದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಿನಿಂದ ಭಾರಿ ಕುತೂಹಲ ಮೂಡಿಸಿತ್ತು. ಅದರಂತೆ ಚಿತ್ರ ಕೂಡ ಇದೀಗ ಪ್ರೇಕ್ಷಕರ ನಿರೀಕ್ಷೆಯನ್ನು ಉಳಿಸಿಕೊಂಡು ಯಶಸ್ವಿಯಾಗಿದೆ.

ಹಿಂದಿಯ ಖ್ಯಾತ ಬರಹಗಾರರಾದಂತಹ ಹುಸೇನ್ ಜೈದಿ ಅವರು ಬರೆದಿರುವ ಮಾಫಿಯಾ ಕ್ವೀನ್ಸ್ ಆಫ್ ಮುಂಬೈ ಎಂಬ ಪುಸ್ತಕವನ್ನು ಆಧಾರಿಸಿ ತಯಾರಾಗಿರುವ ಈ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲಿ ಆಲಿಯಾ ಭಟ್ ಅವರು ಹರಜಿವನ್ದಾಸ್ ಪಾತ್ರದಲ್ಲಿ ಕಾಮಾಟಿಪುರದ ಲೇಡಿ ಡಾನ್ ಆಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಇವರ ಅಭಿನಯಕ್ಕೆ ಪ್ರೇಕ್ಷಕ ಪ್ರಭು ಫುಲ್ ಮಾರ್ಕ್ಸ್ ಕೊಟ್ಟಿದ್ದಾನೆ. ಅದರಂತೆ ಮುಖ್ಯ ಭೂಮಿಕೆಯಲ್ಲಿ ಶಾಂತನು ಮಹೇಶ್ವರಿ, ಅಜಯ್ ದೇವಗನ್, ಹುಮಾ ಖುರೇಷಿ, ವಿಜಯ್ ರಾಝ್, ಇಂದಿರಾ ತಿವಾರಿ, ಸೀಮಾ ಪಾಹ್ವಾ ಇನ್ನಿತರರು ಅಭಿನಯಿಸಿದ್ದಾರೆ.

ಈ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ನಟಿ ಆಲಿಯಾಭಟ್ ಅವರ ವೃತ್ತಿ ಜೀವನದ ಮತ್ತೊಂದು ಮೈಲಿಗಲ್ಲಿನ ಸಿನಿಮಾ ಎಂಬುದಾಗಿದೆ. ಮಹಿಳಾ ಪ್ರಧಾನ ಕಥಾ ಹಂದರದಲ್ಲಿ ನಟಿ ಆಲಿಯಾ ಭಟ್ ಅವರ ನಟನಾ ಪ್ರತಿಭೆಗೆ ಮತ್ತೊಂದು ಉತ್ತಮವಾದ ಅವಕಾಶ ಕಲ್ಪಿಸಿಕೊಟ್ಟಿದೆ ಎನ್ನಬಹುದು. ಅದರಂತೆ ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಆಲಿಯಾ ಭಟ್ ಅವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದಾರೆ. ಮತ್ತೊಂದು ದಾಖಲೆ ಅಂದರೆ ನಟಿ ಆಲಿಯಾ ಭಟ್ ಅವರು ನಟಿಸಿದ ಅನೇಕ ಸಿನಿಮಾಗಳು ಒಳ್ಳೆ ಕಲೆಕ್ಷನ್ ಮಾಡಿವೆ.

ಆದರೆ ಈ ಗಂಗೂಬಾಯಿ ಕಾಠಿಯಾವಾಡಿ ಸಿನಿಮಾ ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ ಐವತ್ತು ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಹೌದು ಶುಕ್ರವಾರ ಮೊದಲ ದಿನವೇ ಈ ಚಿತ್ರ ಬರೋಬ್ಬರಿ ಹತ್ತು ಕೋಟಿ ಗಳಿಕೆ ಕಂಡಿತು. ಚಿತ್ರದ ಬಗ್ಗೆ ಒಳ್ಳೆಯ ರಿಯಾಕ್ಷನ್ ಕೇಳಿಬಂದ ಕೂಡಲೆ ಮರುದಿನ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರ ನಿರೀಕ್ಷೆಯಂತೆ ಶನಿವಾರ 13.32 ಕೋಟಿ ಕಲೆಕ್ಷನ್ ಮಾಡಿದರೆ, ಭಾನುವಾರ ಒಂದೇ ದಿನ ಭಾರತ ಸೇರಿದಂತೆ ಆಸ್ಟ್ರೇಲಿಯಾದಲ್ಲಿ 1.41 ಕೋಟಿ, ನ್ಯೂಜಿಲೆಂಡ್ ನಲ್ಲಿ 20.87 ಲಕ್ಷ ಅಮೇರಿಕಾದಲ್ಲಿ 2.35ಕೋಟಿ ಗಳಿಕೆ ಮಾಡಿದೆ.

%d bloggers like this: