ಬ್ರೇಕಿಂಗ್ ನ್ಯೂಸ್, ಕೊರೊನ ವಿಷಯದಲ್ಲಿ ಕರ್ನಾಟಕದ ಜನತೆಗೆ ಸಿಹಿ ಸುದ್ದಿ

ಮನುಕುಲವನ್ನ ಬಿಟ್ಟುಬಿಡದೇ ಕಾಡಿದ್ದ ಈ ಕೊರೋನ ವೈರಸ್ ಇತ್ತೀಚಿನ ದಿನಗಳಲ್ಲಿ ತನ್ನ ಅಟ್ಟಹಾಸವನ್ನು ನಿಲ್ಲಿಸಿದೆ ಎನ್ನಬಹುದು, ಕೊರೋನ ಸೋಂಕು ಎಂಬುದು ಔಷಧಿಯೇ ಇಲ್ಲದ ರೋಗ ಎಂದು ಭಯಬೀತರಾಗಿದ್ದ ಮನುಕುಲಕ್ಕೆ ಸಂಜೀವಿನಿ ದೊರೆತಿದ್ದು, ಇದೀಗ ಜನಸಾಮನ್ಯರು ನಿರಾಳವಾಗಿ ಬದುಕಬಹುದಾಗಿದೆ. ಹೌದು ಹೈದ್ರಾಬಾದ್ ಮೂಲದ ಭಾರತ ಬಯೋಟಿಕ್ ಸಂಸ್ಥೆ ತಯಾರಿಸಿರುವ ಕೋವ್ಯಾಕ್ಸಿನ್ ಕೋವಿಡ್ ನಿಯಂತ್ರಣದಲ್ಲಿ ಪರಿಣಾಮಕಾರಿಯಾಗಿ ಫಲಿತಾಂಶ ಬೀರಿದೆ ಎನ್ನಬಹುದು. ಒಂದೆಡೆ ಕೋವಿಡ್19ಗೆ ಲಸಿಕೆ ಸಿದ್ದವಾಯಿತು ಎಂದು ಸಂತೋಷವಾದರೆ, ಮತ್ತೊಂದೆಡೆ ಕೋರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದು ಸಂತೋಷದ ವಿಚಾರವಾಗಿದೆ.

ರಾಜ್ಯದಲ್ಲಿ ಜಿಲ್ಲಾವಾರು ಈ ವಾರದ ಸೋಂಕಿತರ ಅಂಕಿ ಅಂಶಗಳನ್ನು ಗಮನಿಸುವುದಾದರೆ ಮಂಗಳವಾರ ಬೆಂಗಳೂರು ನಗರದಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಒಬ್ಬರು ಬಲಿಯಾಗಿದ್ದಾರೆ. ಇನ್ನು ಉಳಿದ ಜಿಲ್ಲೆಗಳಲ್ಲಿ ಯಾವುದೇ ರೀತಿಯ ಸೋಂಕಿನಿಂದ ಮೃತಪಟ್ಟ ದಾಖಲೆಗಳಿಲ್ಲ. ಹಾವೇರಿ, ಕೊಪ್ಪಳ, ರಾಮನಗರ ಜಿಲ್ಲೆಗಳಲ್ಲಿ ಯಾವುದೇ ರೀತಿರ ಹೊಸದಾಗಿ ಕೊರೋನ ಸೋಂಕು ಪ್ರಕರಣಗಳು ದಾಖಲಾಗಿಲ್ಲ. ಕರ್ನಾಟಕ ರಾಜ್ಯದಾದ್ಯಂತ ಸೋಂಕಿತರ ಸಂಖ್ಯೆ 9,36,462 ಆಗಿದೆ.

ಇದರಲ್ಲಿ 9,17,361ಸೋಂಕಿತರು ಗುಣಮುಖರಾಗಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 3,97,333 ಕ್ಕೆ ಏರಿಕೆಯಾಗಿದೆ. 4442 ಸೋಂಕಿತ ಪ್ರಕರಣಗಳು ಸಕ್ರೀಯವಾಗಿವೆ. ಇದುವರೆಗೂ 4380 ಜನರು ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ.ಜಿಲ್ಲಾವಾರು ಸೋಂಕಿತರ ಸಂಖ್ಯೆಯನ್ನು ನೋಡುವುದಾದರೆ ಬಾಗಲಕೋಟೆಯಲ್ಲಿ 01, ಬಳ್ಳಾರಿ 01, ಬೆಳಗಾವಿ05, ಚಾಮರಾಜನಗರ 05, ಚಿಕ್ಕಮಗಳೂರು 01, ಚಿತ್ರದುರ್ಗ 10, ದಕ್ಷಿಣ ಕನ್ನಡ 31, ದಾವಣಗೆರೆ 05, ಹಾಸನ 10, ಮೈಸೂರು27, ರಾಯಚೂರು 06 ಮತ್ತು ಉತ್ತರ ಕನ್ನಡ 07 ಹೊಸ ಸೋಂಕಿತರ ಪ್ರಕರಣಗಳು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

%d bloggers like this: