ಬ್ರಿಟನ್ನಿನ ಹೊಸ ರೂಪಾಂತರಿ ವೈರಸ್ ನ ಈ ಲಕ್ಷಣಗಳ ಬಗ್ಗೆ ತಪ್ಪದೆ ತಿಳಿದುಕೊಳ್ಳಿ

ಇಡೀ ಜಗತ್ತು 2020 ರಲ್ಲೀ ಕೋರೋನ ಎಂಬ ಒಂದು ಮಹಮಾರಿಯಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಎಂದು ಕೂಡ ಕಂಡು ಕೇಳರಿಯದ ಸಾವು ನೋವುಗಳಿಗೆ ನಮ್ಮ ಜಗತ್ತು ಸಾಕ್ಷಿಯಾಗಿದೆ, ಇನ್ನೇನೂ ಕೋರೋನ ವೈರಸ್ ಮುಗಿತು ಎನ್ನುವ ಸಮಯದಲ್ಲಿ ಬ್ರಿಟನ್ ಅಲ್ಲಿ ರೂಪಾಂತರಗೊಂಡ ಹೊಸ ಕೋರೋನ ವೈರಸ್ ನಿಂದ ಸೋಂಕು ಹರಡುವ ಪ್ರಕರಣಗಳು ವರದಿಯಾಗುವುದು ಜನರಲ್ಲಿ ಬಹಳಷ್ಟು ಆತಂಕ ಮೂಡಿಸಿದೆ. ಇದು ಯಾವ ರೀತಿ ಸಾವು ನೋವು ತರಲಿದೆ ಎಂಬ ಭೀತಿ ಶುರುವಾಗಿದೆ.

ಈ ಬಗ್ಗೆ WTO ದ ತುರ್ತು ಆರೋಗ್ಯ ಯೋಜನೆಗಳ ವಿಭಾಗದ ನಿರ್ದೇಶಕ ಮೈ ರ್ಯಾನ್ ಈ ವೈರಸ್ ನ ಬಗ್ಗೆ ಮಾತನಾಡಿದ್ದು ಈ ಹಿಂದಿನ ಕೋರೋನಗಿಂತ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ. ಇದೀಗ ರಾಜ್ಯಕ್ಕೆ ಬ್ರಿಟನ್ ನಿಂದ ವಾಪಸ್ ಆದ ಕೆಲವು ಜನರಿಗೆ ಹೊಸ ರೂಪಾಂತರ ಕೋರೋನ ವೈರಸ್ ಸೋಂಕು ದೃಢಪಡುವುದರ ಮೂಲಕ ಜನರಲ್ಲಿ ಬಹಳಷ್ಟು ಆತಂಕ ಮೂಡಿಸಿದೆ. ಈ ಹಿಂದೆ ಬಂದ ಕೋರೋನ ವೈರಸ್ ನ ಹಾನಿಯಿಂದ ಚೇತರಿಸಿಕೋಳುವ ಮೊದಲೇ ಬ್ರಿಟನ್ ನಿಂದ ರಾಜ್ಯಕ್ಕೆ ಬಂದ ಕೆಲವು ಜನರಿಗೆ ಈ ವೈರಸ್ ದೃಢಪಟ್ಟಿದೆ.

ಇದು ಈಗ ರಾಜ್ಯದ ಜನತೆಯ ಎದೆಯಲ್ಲಿ ನಡುಕ ಹುಟ್ಟಿಸಿದೆ. ಬನ್ನಿ ಮೊದಲಿಗೆ ಈ ವೈರಸ್ ನ ಲಕ್ಷಣಗಳನ್ನು ತಿಳಿದುಕೊಳ್ಳುವುದು ತುಂಬಾ ಪ್ರಮುಖವಾಗಿದೆ. ಈ ಬ್ರಿಟನ್ ಸೋಂಕು ತಗುಲಿದ ವ್ಯಕ್ತಿಗೆ ಹಸಿವು ಆಗುವುದಿಲ್ಲ, ಸಿಕ್ಕಾಪಟ್ಟೆ ಜ್ವರ ಕಾಣಿಸಿಕೊಳ್ಳುತ್ತದೆ, ಜ್ವರ ಹೆಚ್ಚಾಗಿ ಮೈ ಮೇಲೆ ಗುಳ್ಳೆ ಕಾಣಿಸಿಕೊಳ್ಳುತ್ತವೆ, ಬಾಯಿಗೆ ರುಚಿ ಸಿಗುವುದಿಲ್ಲ ಹಾಗು ಮೂಗಿಗೆ ವಾಸನೆ ಬರುವುದಿಲ್ಲ, ಒಣಕಫ ಇದ್ದಾರೆ ಅದು ಈ ವೈರಸ್ ಮುಖ್ಯ ಲಕ್ಷ ವಾಗಿದೆ, ತಲೆ ನೋವು ಸ್ನಾಯು ನೋವು ಕಾಣಿಸಿಕೊಳ್ಳುತ್ತದೆ.

ಈ ಹಿಂದಿನ ಕೋರೋಣ ವೈರಸ್ ಗಿಂತ ವಿಭಿನ್ನವಾಗಿರುವ ಹೊಸ ಬ್ರಿಟನ್ ವೈರಸ್ ಬಗ್ಗೆ ಬಹಳ ಕಾಳಜಿ ವಹಿಸುವುದು ಅನಿವಾರ್ಯ ಆಗಿದೆ. ಇದು ಕೂಡ ಕೋರೋಣ ಮಹಾಮಾರಿಯಂತೆ ಹರಡುವ ಮೊದಲೇ ನಾವು ಜಾಗೃತರಾಗಬೇಕಿದೆ. ಈ ವೈರಸ್ ಹಿಂದಿನ ವೈರಸ್ ಗಿಂತ ಗಂಭೀರ ಪರಿಣಾಮ ಬೀರುವುದರಿಂದ ಜನರು ಅತಿ ಹೆಚ್ಚು ಜನಸಂದಣಿ ಇರುವ ಸ್ಥಳಕ್ಕೆ ಹೋಗುವಾಗ ಮುಂಜಾಗರುಕತೆಯನ್ನು ಪಾಲಿಸಬೇಕು.

%d bloggers like this: