ಕ್ಯಾನ್ಸರ್ ಪೀಡಿತರಿಗೆ ತಮ್ಮ ಕೂದಲು ದಾನ ಮಾಡಿ ಇತರರಿಗೆ ಮಾದರಿಯಾದ ಕನ್ನಡ ನಟ

ಸಿಕ್ಸರ್ ಬಾರಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಡೈನಾಮಿಕ್ ಸ್ಟಾರ್ ನಟ ದೇವರಾಜ್ ಮಗ ಪ್ರಜ್ವಲ್ ದೇವರಾಜ್ ಇದೀಗ ಸ್ಯಾಂಡಲ್ ವುಡ್ ನಲ್ಲಿ ಬಿಝಿ಼ಯೆಸ್ಟ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ವರ್ಷ ತೆರೆಕಂಡ ಜೆಂಟಲ್ ಮ್ಯಾನ್ ಕೆಲವು ತಿಂಗಳ ಹಿಂದೆಯಷ್ಟೆ ಬಿಡಗಡೆಗೊಂಡ ಇನ್ಸ್ಪೆಕ್ಟರ್ ವಿಕ್ರಂ ಚಿತ್ರಗಳ ಯಶಸ್ಸಿನ ಮೂಲಕ ಫಾರ್ಮ್ ಗೆ ಬಂದಿರುವ ನಟ ಪ್ರಜ್ವಲ್ ದೇವರಾಜ್ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೀರಂ ಸಿನಿಮಾಗಾಗಿ ಉದ್ದ ಕೂದಲು ಬಿಟ್ಟಿದ್ದ ಪ್ರಜ್ವಲ್ ಇದೀಗ ಮಾಫಿಯಾ ಚಿತ್ರಕ್ಕಾಗಿ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದಾರೆ. ಉದ್ದ ಕೂದಲನ್ನು ತೆಗೆಸಿದ ನಂತರ ಆ ಕೂದಲನ್ನ ಕ್ಯಾನ್ಸರ್ ಪೀಡಿತರಿಗೆ ನೀಡುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ.

ಈ ಹಿಂದೆ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಕೂಡ ತಮ್ಮ ಪೊಗರು ಚಿತ್ರಕ್ಕಾಗಿ ಬಿಟ್ಟಿದ್ದ ಉದ್ದ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ನೀಡಿ ಮಾದರಿಯಾಗಿದ್ದರು. ಇದೀಗ ನಟ ಪ್ರಜ್ವಲ್ ದೇವರಾಜ್ ಕೂಡ ಅದೇ ದಾರಿಯಲ್ಲಿ ಸಾಗಿದ್ದಾರೆ. ಇನ್ನು ಈ ಮಾಫಿಯಾ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಅವರಿಗೆ ಮಮ್ಮಿ ಮತ್ತು ದೇವಕಿ ಅಂತಹ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಯಂಗ್ ಅಂಡ್ ಎನರ್ಜಿಟಿಕ್ ಡೈರೆಕ್ಟರ್ ಲೋಹಿತ್ ಆಕ್ಷನ್ ಕಟ್ ಹೇಳುತ್ತಿದ್ದು, ಮಾಫಿಯಾ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಪೊಲೀಸ್ ಪಾತ್ರಕ್ಕಾಗಿ ನಟ ಪ್ರಜ್ವಲ್ ದೇವರಾಜ್ ಭರ್ಜರಿ ತಯಾರಿ ನಡೆಸುತ್ತಿದ್ದು, ತಮ್ಮ ಹೇರ್ ಸ್ಟೈಲ್ ಮತ್ತು ಫಿಟ್ ನೆಸ್ ನಲ್ಲಿಯೂ ಕೂಡ ಭಾರಿ ಬದವಾವಣೆ ಮಾಡಿಕೊಂಡಿದ್ದಾರೆ. ಮಾಫಿಯಾ ಸಿನಿಮಾ ಪ್ರಜ್ವಲ್ ದೇವರಾಜ್ ಅವರ 35ನೇ ಸಿನಿಮಾ.

ಪ್ರಜ್ವಲ್ ಗೆ ನಾಯಕಿಯಾಗಿ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗುತ್ತಿರುವ ನಟಿ ಅದಿತಿ ಪ್ರಭುದೇವ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಡಿಸೆಂಬರ್ ಎರಡರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದ, ಡಿಸೆಂಬರ್ 6ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಶೂಟಿಂಗ್ ಗಾಗಿ ಎಲ್ಲಾ ರೀತಿಯ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಲೋಹಿತ್. ಈ ಹಿಂದೆ ಈ ಮಾಫಿಯಾ ಚಿತ್ರವನ್ನು ಗುರುದತ್ ಗಾಣಿಗ ಅವರು ನಿರ್ದೇಶನ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರದಿಂದ ಹೊರ ಬಂದ ಗುರುದತ್ ಅವರ ಜಾಗಕ್ಕೆ ಲೋಹಿತ್ ಬಂದರು. ಬಿ.ಕುಮಾರ್ ಅವರು ಮಾಫಿಯಾ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಟಗರು, ಸಲಗ ಸಿನಿಮಾ ಖ್ಯಾತಿಯ ಸಂಭಾಷಣೆಕಾರ ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದು, ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡುತ್ತಿದ್ದಾರೆ.

%d bloggers like this: