ಕಾರು ಕೊಳ್ಳಬೇಕೆಂದವರಿಗೆ ಮಾರುತಿ ಸುಜುಕಿ ಕಡೆಯಿಂದ ಭರ್ಜರಿ ಆಫರ್

ಹಬ್ಬವಿಲ್ಲ, ಹರಿದಿನ ಇಲ್ಲ ಆದರೂ ಕೂಡ ಭರ್ಜರಿ ಆಫರ್ ನೀಡುತ್ತಿದೆ ಮಾರುತಿ ಸುಜುಕಿ ಕಂಪನಿ. ಹೌದು ಕಾರು ಪ್ರಿಯರಿಗೆ ಇದೊಂದು ಸುವರ್ಣಾವಕಾಶ ಅಂತಾನೇ ಹೇಳಬಹುದು. ಮಾರುತಿ ಸುಜುಕಿ ಕಾರುಗಳ ಮೇಲೆ ಈ ತಿಂಗಳಾಂತ್ಯವರೆಗೂ ಭಾರಿ ರಿಯಾಯಿತಿ ಸಿಗುತ್ತಿದೆ. ಅಟೋಮೊಬೈಲ್ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ವಾಹನ ಎಂದರೆ ಅದು ಮಾರುತಿ ಸುಜುಕಿ. ಈ ಮಾರುತಿ ಸುಜುಕಿ ಕಂಪನಿಯು ಜುಲೈ ತಿಂಗಳಿನಲ್ಲಿ ಕಾರು ಪ್ರಿಯರಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಸುಜುಕಿ ಅರೆನಾ ಬ್ರ್ಯಾಂಡ್ ಮಾದರಿಯ ಎಲ್ಲಾ ಕಾರುಗಳಿಗೆ ಈ ರಿಯಾಯಿತಿ ಇರಲಿದೆ. ಮಾರುತಿ ಸುಜುಕಿಯ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳು ಅಂದರೆ ಅದು ಮಾರುತಿ ವ್ಯಾಗನರ್. ಈ ಕಾರಿನ ಮೇಲೆ ಬರೋಬ್ಬರಿ 74,000 ಗಳವರೆಗೆ ರಿಯಾಯಿತಿ ಸಿಗುತ್ತಿದೆ.

1.0 ಲೀಟರಿನ ಎಂಜಿನ್ ಮಾದರಿಯಲ್ಲಿ ಸುಮಾರು 30,000 ರೂ.ವರೆಗೆ ಕ್ಯಾಶ್ ಬ್ಯಾಕ್ ಆಫರ್ ಇರಲಿದೆ. ಇದರ ಜೊತೆಗೆ 15,000 ಎಕ್ಸಚೇಂಜ್ ಆಫರ್ ಅಂಡ್ ಆರು ಸಾವಿರ ರೂ.ಗಳ ಕಾರ್ಪೋರೇಟ್ ಡಿಸ್ಕೌಂಟ್ ಕೂಡ ಇರಲಿದೆ. ಇನ್ನು ಮಾರುತಿ ಸುಜುಕಿಯ ಮತ್ತೊಂದು ಜನಪ್ರಿಯ ಕಾರು ಅಂದರೆ ಅದು ಸ್ವಿಫ್ಟ್ ಕಾರು. ಪ್ರೀಮಿಯಂ ಹ್ಯಾಚ್ ಬ್ಯಾಕ್ ನಲ್ಲಿ ಈ ಕಾರಿನ ಮೇಲೆ ಒಟ್ಟಾರೆಯಾಗಿ 32,000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಇನ್ನು ಇತ್ತೀಚೇಗೆ ಎಲ್ಲೆಡೆ ಕಾರು ಪ್ರಿಯರ ಮೆಚ್ಚುಗೆ ಪಡೆದುಕೊಳ್ಳುತ್ತಿರುವ ಮಾರುತಿ ಆಲ್ಟೋ 800 ಕಾರಿನ ಮೇಲೆ ಕೂಡ 31,000 ಗಳವರೆಗೆ ರಿಯಾಯಿತಿ ಇದ್ದು, ಇನ್ನು ಇದೇ ಕಾರಿಗೆ ಕಾರ್ಪೋರೇಟ್ ವಿನಾಯಿತಿಯನ್ನ 9,000 ವರೆಗೆ ಪಡೆಯಬಹುದಾಗಿದೆ. ಇನ್ನು ಟೂರ್ಸ್ ಅಂಡ್ ಟ್ರಾವೇಲ್ಸ್ ಮತ್ತು ಐಟಿ ಕಂಪನಿಗಳಿಗೆ ಪಿಕ್ ಅಪ್ ಡ್ರಾಪ್ ಅಟ್ಯಾಚ್ ಮಾಡಿಕೊಳ್ಳುವ ಅತಿ ಹೆಚ್ಚು ಕಾರುಗಳು ಅಂದರೆ ಅದು ಮಾರುತಿ ಸುಜುಕಿ ಡಿಜೈ಼ರ್.

ಈ ಕಾರಿನ ಮೇಲೆ ಸಹ ಸರಿ ಸುಮಾರು 34,000 ಗಳವರೆಗೆ ರಿಯಾಯಿತಿ ಪಡೆಯಬಹುದಾಗಿದ್ದು, ಇದರ ಜೊತೆಗೆ ಐದರಿಂದ ಹತ್ತು ಸಾವಿರ ವರೆಗೆ ಎಕ್ಸ್ ಚೇಂಜ್ ಬೋನಸ್ ಕೂಡ ಪಡೆಯಬಹುದಾಗಿದೆ. ಅದೇ ರೀತಿ ಈ ಮಾರುತಿ ಸುಜುಕಿಯ ಸೆಲೆರಿಯೋ ಹ್ಯಾಚ್ ಬ್ಯಾಕ್ ಕಾರಿನ ಮೇಲೆ ಬರೋಬ್ಬರಿ 51,000 ಗಳವರೆಗೆ ಎಕ್ಸ್ ಚೇಂಜ್ ಆಫರ್ ಅಂಡ್ 30,000 ವರೆಗೆ ಡಿಸ್ಕೌಂಟ್ ಪಡೆಯಬಹುದಾಗಿದೆ. ಈ ಕೊಡುಗೆಗಳು ಕೇವಲ ಈ ಜುಲೈ ತಿಂಗಳ ಅಂತ್ಯದವರೆಗೆ ಮಾತ್ರ ಲಭ್ಯ ಇರಲಿದೆ ಎಂದು ಮಾರುತಿ ಸುಜುಕಿ ಕಂಪನಿ ತಿಳಿಸಿದೆ. ಒಟ್ಟಾರೆಯಾಗಿ ಮಾರುತಿ ಸುಜುಕಿ ಕಂಪನಿಯು ನಗದು ರಿಯಾಯಿತಿಗಳ ಜೊತೆ ಕಾರ್ಪೊರೇಟ್ ಮತ್ತು ವಿನಿಮಯ ಬೋನೋಸ್ ಗಳನ್ನು ನೀಡುತ್ತಿರುವುದು ಗ್ರಾಹಕರಿಗೆ ಸಂತೋಷವಾಗುತ್ತಿದೆ.

%d bloggers like this: