ಕಾರು ಮಾರಾಟದಲ್ಲಿ ಭಾರತದ ದೈತ್ಯ ಕಂಪೆನಿಯನ್ನೇ ಹಿಂದಿಕ್ಕಿದ ಹುಂಡಾಯ್ ಕಂಪನಿ

ಆಟೋ ಮೊಬೈಲ್ ಕ್ಷೇತ್ರದಲ್ಲಿ ಒಂದಲ್ಲ ಒಂದು ಬೆಳವಣಿಗೆ ಆಗುತ್ತಾನೇ ಇರುತ್ತದೆ. ಈ ಕ್ಷೇತ್ರದಲ್ಲಿ ಆವಿಷ್ಕಾರಕ್ಕೇನೂ ಕೊರತೆ ಇಲ್ಲ. ಸದಾ ತಾವೇ ಮುಂದಿರಬೇಕು ಅಂತ ಅನೇಕ ಕಂಪನಿಗಳು ಸದಾ ಸ್ಪರ್ಧೆಯಲ್ಲಿ ಇರುತ್ತವೆ. ತಮ್ಮ ಕಂಪನಿಯ ಕಾರುಗಳೇ ಹೆಚ್ಚು ಜನಪ್ರಿಯವಾಗಬೇಕು. ಹೆಚ್ಚೆಚ್ಚು ಮಾರಾಟವಾಗಬೇಕು ಎಂಬುದು ಎಲ್ಲಾ ಸಂಸ್ಥೆಗಳ ಗುರಿಯಾಗಿರುತ್ತದೆ. ಅದರಂತೆ ಸದ್ಯಕ್ಕೆ ದೇಶದಲ್ಲಿ ಆಟೋ ಮೊಬೈಲ್ ಕ್ಷೇತ್ರದಲ್ಲಿ ಭಾರಿ ಜನಪ್ರಿಯತೆಯ ಜೊತೆಗೆ ಬೇಡಿಕೆ ಹೊಂದಿರುವ ವಾಹನಗಳು ಅಂದರೆ ಟಾಟಾ ಮೋಟಾರ್ಸ್, ಮಾರುತಿ ಸುಜುಕಿ, ಮತ್ತು ಹ್ಯುಂಡೈ ಮೋಟಾರ್ಸ್ ಕಂಪನಿಗಳು. ಇವು ಭಾರತದಲ್ಲಿ ವಿಶ್ವಾಸಾರ್ಹ ಸಂಸ್ಥೆಗಳಾಗಿವೆ. ಇದೀಗ ಹುಂಡ್ಯೈ ಕಂಪನಿ ಮತ್ತು ಟಾಟಾ ಮೋಟಾರ್ಸ್ ನಡುವೆ ಭಾರಿ ಪೈಪೋಟಿ ಏರ್ಪಟ್ಟಿವೆ. ದಕ್ಷಿಣ ಕೊರಿಯಾ ಮೂಲದ ಹುಂಡೈ ಕಂಪನಿ ತನ್ನ ವ್ಯವಹಾರದ ವಹಿವಾಟಿನಲ್ಲಿ ಗಣನೀಯವಾಗಿ ಏರಿಕೆ ಮಾಡಿಕೊಂಡಿದೆ.

ಹೌದು ಹುಂಡೈ ಕಂಪನಿಯು ಜೂನ್ ತಿಂಗಳ ವಹಿವಾಟಿನ ವರದಿಯನ್ನ ಪ್ರಕಟ ಮಾಡಿದೆ. ಈ ಜೂನ್ ತಿಂಗಳ ವರದಿಯ ಪ್ರಕಾರ ಹುಂಡೈ ಕಂಪನಿಯು ಟಾಟಾ ಮೋಟಾರ್ಸ್ ಕಂಪನಿಯನ್ನು ಸೈಡ್ ಲೈನ್ ಮಾಡಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದೇ ಟಾಟಾ ಮೋಟಾರ್ಸ್ ಕಂಪನಿಯು ಕಳೆದ ಡಿಸೆಂಬರ್ ತಿಂಗಳಿನಿಂದ ಅತ್ಯುತ್ತಮವಾಗಿ ಮಾರಾಟವಾಗಿ ಎರಡನೇ ಸ್ಥಾನದಲ್ಲಿ ಇತ್ತು. ಹೊಸ ವರ್ಷದಲ್ಲಿ ಅನೇಕ ಕಂಪನಿಗಳ ಅಡ್ವಾನ್ಸ್ಡ್ ಫೀಚರ್ ಹೊಂದಿರುವ ಕಾರುಗಳು ಸಾಲು ಸಾಲಾಗಿ ಲಾಂಚ್ ಆದವು. ಅವುಗಳಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯದ್ದೇ ಭಾರಿ ಜನಪ್ರಿಯತೆ ಪಡೆದುಕೊಂಡಿತ್ತು. ಆದ ಕಾರಣ ಹುಂಡೈ ಸಂಸ್ಥೆ ಎರಡನೇ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ತದ ನಂತರ ಅಂದರೆ ಇದೀಗ ಹುಂಡೈ ಕಂಪನಿಯು ಮತ್ತೆ ತನ್ನ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ.

ಹೌದು ಮಾರುತಿ ಸುಜುಕಿ ಕಂಪನಿ ಎಂದಿನಂತೆ ಮೊದಲ ಸ್ದಾನವನ್ನ ಉಳಿಸಿಕೊಂಡಿದೆ. ಜೂನ್ ತಿಂಗಳಿನಲ್ಲಿ ಹುಂಡೈ ಕಂಪನಿಯು ಬರೋಬ್ಬರಿ 49,001 ವಾಹನಗಳನ್ನು ಮಾರಾಟ ಮಾಡಿದೆ. ಇದೇ ಹುಂಡೈ ಕಂಪನಿಯು ಕಳೆದ ವರ್ಷ 40,496 ವಾಹನಗಳನ್ನು ಮಾರಾಟ ಮಾಡಿತ್ತು‌. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ ಈ ವರ್ಷ ಹುಂಡೈ ಕಂಪನಿಯು ಶೇಕಡಾ 21ರಷ್ಟು ಏರಿಕೆ ಮಾಡಿಕೊಂಡಿದೆ. ಈ ಮೂಲಕ ಹುಂಡೈ ಕಂಪನಿಯು ಎರಡನೇ ಸ್ಥಾನದಲ್ಲಿ ಇದ್ದ ಟಾಟಾ ಮೋಟಾರ್ಸ್ ಕಂಪನಿಯನ್ನ ಸೈಡ್ ಹೊಡೆದು ಹುಂಡೈ ಕಂಪನಿಯು ಎರಡನೇ ಸ್ಥಾನಕ್ಕೆ ಜಿಗಿದಿದೆ. ಸದ್ಯಕ್ಕೆ ಹುಂಡೈ ಕಂಪನಿಯ ಹ್ಯುಂಡೈ ವೆನ್ಯೂ ಕಾರು ಮಾರುಕಟ್ಟೆಯಲ್ಲಿ ಸಖತ್ ಬೇಡಿಕೆಯನ್ನ ಸೃಷ್ಟಿಸಿಕೊಂಡಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದಕ್ಕಿಂತ ಒಂದು ಹೊಸದಾದ ವಿಭಿನ್ನ ಅಡ್ವಾನ್ಸ್ಡ್ ಫೀಚರ್ ಹೊಂದಿರುವ ಕಾರುಗಳು ಭಾರಿ ಪೈಪೋಟಿ ನಡೆಸಲು ಸಜ್ಜಾಗುತ್ತಿವೆ.

%d bloggers like this: