ಕಾರಿಗೆ 25 ಕೋಟಿ ಕೊಟ್ಟು ಅದರ ನಂಬರ್ ಪ್ಲೇಟಿಗೆ ಬರೋಬ್ಬರಿ 60 ಕೋಟಿ ಕೊಟ್ಟ ಭಾರತೀಯ

ಜಗತ್ತು ಹೇಗಿದೆ ನೋಡಿ, ಕೆಲವರಿಗೆ ಒಂದು ಹೊತ್ತು ಊಟಕ್ಕೂ ಗತಿ ಇರುವುದಿಲ್ಲ ಆದರೆ ಮತ್ತೆ ಕೆಲವರಿಗೆ ದುಡ್ಡಿನಲ್ಲೇ ಎದ್ದು ದುಡ್ಡಿನಲ್ಲೆ ಮಲಗುವಷ್ಟು ಹಣ ಆಸ್ತಿಯನ್ನು ಭಗವಂತ ಕೊಟ್ಟಿರುತ್ತಾನೆ. ಕೆಲವು ಶ್ರೀಮಂತರು ಅಂತೂ ಇರುವ ಕೋಟಿ ಕೋಟಿ ಹಣವನ್ನು ಹೇಗೆ ವ್ಯಯ ಮಾಡಬೇಕು ಎಂದು ಗೊತ್ತಾಗದೆ ಹುಚ್ಚುತನ ಎನಿಸುವ ಕೆಲವು ವಿಷಯಗಳಿಗೆ ಹಣ ಸುರಿಯುತ್ತಾರೆ. ಕೋಟಿ ಕೋಟಿ ಹಣವನ್ನು ನೀರಿನಂತೆ ಬಳಸುವ ಆಗರ್ಭ ಶ್ರೀಮಂತರ ಸಂಖ್ಯೆ ಏನು ಕಡಿಮೆಯಿಲ್ಲ. ಅಂತಹ ಶ್ರೀಮಂತರ ದೊಡ್ಡ ದಂಡನ್ನೆ ಹೊಂದಿರುವ ಒಂದು ನಗರ ಅಥವಾ ದೇಶ ಎಂದರೆ ಅದು ದುಬೈ.

ಹೌದು ಕನಸಿನ ನಗರ ನಿದ್ರಿಸದ ನಗರ ಎಂದು ಕರೆಯಲ್ಪಡುವ ಈ ದ್ವೀಪ ದೇಶದಲ್ಲಿ ಬಹುತೇಕ ಕೋಟ್ಯಾಧಿಪತಿಗಳು ವಾಸವಾಗಿದ್ದಾರೆ. ಎಷ್ಟರ ಮಟ್ಟಿಗೆ ಸಿರಿವಂತರು ಅಲ್ಲಿದ್ದಾರೆ ಎಂದರೆ ಅವರ ಮನೆಯ ಸ್ನಾನದ ಟಬ್ ಶೌಚಾಲಯಗಳು ಕೂಡ ಚಿನ್ನದಿಂದ ಮಾಡಲ್ಪಟ್ಟಿವೆ ಎಂದರೆ ನೀವು ನಂಬಲೇಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ಇವೆಲ್ಲವನ್ನು ಮೀರಿಸಿದ್ದಾನೆ. ಅದೇನಪ್ಪ ಎಂದು ನೀವು ಯೋಚನೆ ಮಾಡುವ ಬದಲು ಮುಂದೆ ಓದಿ. ದುಬೈ ನಲ್ಲಿ ವಾಸವಾಗಿರುವ ಬಲವಿಂದರ್ ಸಹಾನಿ ಎಂಬ ಭಾರತಿಯ ಮೂಲದ ಶ್ರೀಮಂತ ಯುವಕನೊಬ್ಬ ಮಾಡಿದ ಕೆಲಸ ಕೇಳಿದರೆ ನಿಜಕ್ಕೂ ಅಚ್ಚರಿ ಪಡುವಿರಿ.

ಈತ ತನ್ನ ಕಾರಿನ ನಂಬರ್ ಪ್ಲೇಟ್ ಗೆ ಬರೋಬ್ಬರಿ 60 ಕೋಟಿ ರೂಪಾಯಿಗಳನ್ನು ವ್ಯಯ ಮಾಡಿದ್ದಾನೆ, ಅಬ್ಬಾ 60 ಕೋಟಿ ರೂಪಾಯಿ ಕೇವಲ ನಂಬರ್ ಗೆ ಆದರೆ ಕಾರಿನ ಬೆಲೆ ಎಷ್ಟು ಎಂದು ನಿಮಗೆ ಅನಿಸಬಹುದು. ಆದರೆ ಆ ಕಾರಿನ ಬೆಲೆ ಕೇವಲ 25 ಕೋಟಿ ರೂಪಾಯಿಗಳ ರಾಲ್ಸ್ ರಾಯ್ಸ್, 60 ಕೋಟಿ ಖರ್ಚು ಮಾಡಿ ನಂಬರ್ ಪ್ಲೇಟ್ ಹಾಕಿಸಿದ್ದಾರೆ ಎಂದರೆ ಅದರಲ್ಲಿ ಏನಿರಬಹುದು ಆ ನಂಬರ್ ಯಾವುದು ಇರಬಹುದು ಎಂದು ನಮಗೆ ಪ್ರಶ್ನೆ ಬರುತ್ತದೆ.

ಹೌದು ಆ ನಂಬರ್ 9, ಸಹಾನಿ ಅವರಿಗೆ 9 ನಂಬರ್ ಎಂದರೆ ಅದೃಷ್ಟದ ಸಂಖ್ಯೆ ಅಂತೆ. ಆ ಒಂದು ಸಂಖ್ಯೆ ಇಂದಲೇ ತಾವು ಇಷ್ಟು ಶ್ರೀಮಂತ ವ್ಯಕ್ತಿ ಆದರಂತೆ ಹಾಗಾಗಿ ಆ ನಂಬರ್ ಪ್ಲೇಟ್ ಗೆ ಅಷ್ಟು ಖರ್ಚು ಮಾಡಿರುವದಾಗಿ ಅವರು ಹೇಳುತ್ತಾರೆ. ನೋಡಿ ಪಡೆದ ಸಂಬಳ ಬೇಗನೆ ಖಾಲಿಯಾಗಿ ಮುಂದಿನ ತಿಂಗಳ ಸಂಬಳಕ್ಕಾಗಿ ಕಾದು ಕುಳಿತುಕೊಳ್ಳುವ ಕೋಟಿ ಕೋಟಿ ಜನರ ನಡುವೆ ಕೇವಲ ಒಂದು ನಂಬರ್ ಗಾಗಿ ಕೋಟಿ ಕೋಟಿ ಸುರಿಯುವ ಜನರಿದ್ದಾರೆ ಎಂದರೆ ನಾವು ಹೆಚ್ಚು ಯೋಚನೆ ಮಾಡದೆ ನಂಬಲೇಬೇಕು.

%d bloggers like this: