ಚಳಿಗಾಲದಲ್ಲಿ ತುಟಿ ಒಡೆಯುವುದನ್ನು ತಪ್ಪಿಸಲು ಹೀಗೆ ಮಾಡಿ

ಹವಾಮಾನ ಬದಲಾವಣೆಯಾಗುತ್ತಿದ್ದಂತೆ ದೇಹದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಮಳೆಗಾಲ ಮುಗಿದ ನಂತರ ಚಳಿಗಾಲ ಸನಿಹವಾಗುತ್ತಿದ್ದಂತೆ ಚಳಿಯ ನಡುಕು ಅಲ್ಲಲ್ಲಿ ಶೀತಗಾಳಿಯ ಪ್ರಭಾವ ಬೀರುತ್ತಿದೆ. ಈ ಚಳಿಗಾಲದ ಸಮಯದಲ್ಲಿ ಹೆಚ್ಚು ತೊಂದರೆ ಆಗುವುದು ದೇಹದ ಚರ್ಮಕ್ಕೆ ಅದರಲ್ಲೂ ಕಾಲಿನ ಹಿಮ್ಮಡಿ ಮತ್ತು ತುಟಿಯು ಒಡೆದುಕೊಳ್ಳುವುದು, ಸೌಂದರ್ಯದ ಅಂಗವಾಗಿರುವ ಈ ತುಟಿ ಸೀಳುಬಿಟ್ಟರೆ ಹೇಗಾಗಬೇಡ ಕನ್ನಡಿಮುಂದೆ ನಿಂತರೆ ಮೊದಲು ಆಕರ್ಷಕವಾಗಿ ಕಾಣುವುದೇ ಈ ತುಟಿ. ಚಳಿಗಾಲದಲ್ಲಿ ಈ ತುಟಿ ಆರೈಕೆಯು ಕೂಡ ಮುಖ್ಯವಾಗುತ್ತದೆ, ಇದಕ್ಕಾಗಿ ಹೆಚ್ಚಾಗಿ ಯುವತಿಯರು ಮಾರುಕಟ್ಟೆಗಳಲ್ಲಿ ಸಿಗುವ ವಿವಿಧ ರಾಸಾಯನಿಕ ಲಿಪ್ ಬಾಮ್ ಗಳನ್ನು ಖರೀದಿಸುತ್ತಾರೆ. ಅದು ಗುಣಮಟ್ಟದ್ದೊ, ಇಲ್ಲವೋ ಎಂಬುದು ಅರಿವಿರುವುದಿಲ್ಲ ಆದರೆ ಈ ತುಟಿ ಒಡೆಯುವ ಸಮಸ್ಯೆಗೆ ಮನೆಯಲ್ಲಿಯೇ ಪರಿಹಾರ ಮಾಡಿಕೊಳ್ಳಬಹುದು. ರಾತ್ರಿಯಸಮಯದಲ್ಲಿ ಅಂದರೆ ಮಲಗುವ ಮುನ್ನ ಹಾಲಿನ ಪಧಾರ್ಥಗಳಾದ ಬೆಣ್ಣೆ ಮತ್ತು ತುಪ್ಪವನ್ನು ಒಟ್ಟಿಗೆ ಮಿಶ್ರಣ ಮಾಡಿ ತುಟಿಗೆ ಹಚ್ಚಿದರೆ ತುಟಿಯೊಡೆಯುವ ಸಮಸ್ಯೆಗಳಿಗೆ ಮುಕ್ತಿ ನೀಡಬಹುದು.

ಇದು ನಿರಂತರವಾಗಿ ಮೂರರಿಂದ ನಾಲ್ಕು ದಿನಗಳವರೆಗೆ ಈ ರೀತಿಯಾಗಿ ಮಾಡಬೇಕು. ಚಳಿಗಾಲದಲ್ಲಿ ಹೆಚ್ಚು ಟೀಕಾಫಿ ಸೇವನೆ ಸರ್ವೇಸಾಮಾನ್ಯ ಆದರೆ ಟೀ ಕಾಫಿಯಲ್ಲಿ ಬೆಲ್ಲ ಬಳಸಿದರೆ ಇನ್ನೂ ಉತ್ತಮ ಎನ್ನುತ್ತಾರೆ ಹಿರಿಯ ತಜ್ಞರು. ಕೆಲವರದು ಉಷ್ಣಾಂಶ ದೇಹ ಅವರಲ್ಲಿ ಚಳಿಗಾಲವಾಗಲಿ ಬೇಸಿಗೆಯಾಗಲೀ ಅವರ ದೇಹ ಯಾವಾಗಲೂ ಉಷ್ಣಾಂಶದಿಂದಲೇ ಕೂಡಿರುತ್ತದೆ ಚಳಿಗಾಲ ಎಂದು ಅವರು ದಿನನಿತ್ಯದಲ್ಲಿ ನಿಯಮಿತವಾಗಿ ನೀರು ಸೇವಿಸುತ್ತಿರಲೇ ಬೇಕು ಇಲ್ಲ ಅಂದರೆ ಅವರ ದೇಹದ ಚರ್ಮಕ್ಕೆ ತೊಂದರೆಯಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳಾದ ಬಯೋಲಿನ್ ಮತ್ತು ವ್ಯಾಸ್ಲೀನ್ ಜೊತೆಗೆ ಕೊಬ್ಬರಿಎಣ್ಣೆಯು ಸಹ ತುಟಿಯೊಡೆಯುವ ಸಮಸ್ಯೆಗಳಿಗೆ ರಾಮಭಾಣವಾಗಿದೆ ರಾತ್ರಿ ಮಲಗುವ ಮುನ್ನ ಕೈಕಾಲುಗಳ ಜೊತೆ ತುಟಿಯ ಭಾಗಕ್ಕೂ ಕೊಬ್ಬರಿಎಣ್ಣೆ ಸವರಿದರೆ ಚರ್ಮವು ತ್ವಚೆಯುಕ್ತವಾಗಿ ಮೃದುತ್ವದಿಂದ ಕೂಡಿರುತ್ತದೆ.

%d bloggers like this: