ಚಲಿಸುತ್ತಿರುವ ಕಾರಿನಲ್ಲೇ ಜನಿಸಿದ ಜಗತ್ತಿನ ಮೊದಲ ಮಗು, ಇದು ಆಟೋಮೊಬೈಲ್ ಕ್ಷೇತ್ರದ ಸಾಧನೆಯೇ ಸರಿ

ಕೆಲವೊಮ್ಮೆ ಅನಿರೀಕ್ಷಿತವಾಗಿ ಗರ್ಭಿಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಅದು ಎಂತಹ ಪರಿಸ್ದಿತಿ ಅಥವಾ ಯಾವುದೇ ಪ್ರದೇಶದಲ್ಲಿದ್ದರೂ ಕೂಡ ಮಗುವಿಗೆ ಜನ್ಮ ನೀಡುತ್ತಾರೆ. ನಾವು ಕೇಳಿರುವ ಮತ್ತು ನೋಡಿರುವ ಸುದ್ದಿಗಳ ಉದಾಹರಣೆಗಳನ್ನ ಕಾಣುವುದಾದರೆ ಸಾಮಾನ್ಯವಾಗಿ ರೈಲಿನಲ್ಲಿ, ಆಟೋದಲ್ಲಿ ಪ್ರಯಾಣಿಸಬೇಕಾದರೆ ಅಥವಾ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾದರೆ ದಿಢೀರ್ ಹೆರಿಗೆ ನೋವು ಕಾಣಿಸಿಕೊಂಡು ಇದ್ದಂತಹ ಜಾಗದಲ್ಲಿಯೇ ಮಗುವಿಗೆ ಜನ್ಮ ನೀಡಿರುವುದನ್ನ ಗಮನಿಸಬಹುದಾಗಿರುತ್ತದೆ. ಇದೇ ರೀತಿಯಾಗಿ ಕೊಂಚ ವಿಭಿನ್ನವಾದ ಸಂಧರ್ಭದಲ್ಲಿ ಅಂದರೆ ಕಾರಿನಲ್ಲಿ ಪ್ರಯಾಣಿಸುವಾಗ ಹೆರಿಗೆ ನೋವು ಕಾಣಿಸಿಕೊಂಡು, ಅಲ್ಲಿ ತನ್ನ ಪತ್ನಿಯ ಕರುಳ ಬಳ್ಳಿಯನ್ನ ಗಂಡನೇ ಸ್ವತಃ ತಾನೇ ಕತ್ತರಿಸಿದ್ದಾನೆ.

ಈ ಅಚ್ಚರಿಯ ಮೈ ಜುಮ್ಮೆನ್ನಿಸುವ ಘಟನೆ ನಡೆದಿರುವುದು ಅಮೆರಿಕಾದ ಪೆನ್ಸಿಲ್ವೇನಿಯಾದಲ್ಲಿ. ಹೌದು ಪೆನ್ಸಿಲ್ವೇನಿಯಾದ ಕೀಟಿಂಗ್ ಶೆರ್ರಿ ಮತ್ತು ಐರನ್ ಶೆರ್ರಿ ಎಂಬ ದಂಪತಿಗಳು ಕೆಲಸದ ನಿಮಿತ್ತ ತಮ್ಮ ಟೆಸ್ಲಾ ಕಾರಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಮೂವತ್ತ್ಮೂರು ವರ್ಷದ ಐರನ್ ಶೆರ್ರಿ ಅವರು ತುಂಬು ಗರ್ಭಿಣಿ ಆಗಿರುತ್ತಾರೆ. ಮನೆಯಿಂದ ಹೊರಡುವಾಗಲೇ ಕೊಂಚ ಸೊಂಟದ ನೋವು ಕಾಣಿಸಿಕೊಂಡಿತ್ತಾದರು ಕೂಡ ಏನೂ ಆಗಲ್ಲ ಎಂಬ ಆತ್ಮ ವಿಶ್ವಾಸದಿಂದ ಕಾರಿನಲ್ಲಿ ಪ್ರಯಾಣ ಮಾಡುತ್ತಾರೆ.

ಆಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಐರನ್ ಶೆರ್ರಿ ಅವರಿಗೆ ಇದು ಮೂರನೇ ಹೆರಿಗೆಯಾಗಿರುತ್ತದೆ. ಈ ಸಂಧರ್ಭದಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಇದ್ದಕಿದ್ದಂತೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಜಾಗೃತಗೊಂಡ ಪತಿ ಕೀಟಿಂಗ್ ಶೆರ್ರಿ ತಮ್ಮ ಟೆಸ್ಲಾ ಕಾರಿನಲ್ಲಿ ಅಟೋ ಪೈಲಟ್ ಮೋಡ್ ಆನ್ ಮಾಡುತ್ತಾರೆ. ತುರ್ತಾಗಿ ಆಸ್ಪತ್ರೆಗೆ ತೆರಳಲು ರಸ್ತೆ ಸಂಚಾರ ದಟ್ಟಣೆಯ ನಡುವೆಯೂ ಕೂಡ ಕನಿಷ್ಠ ಅಂದರೂ ಕೂಡ ಇಪ್ಪತ್ತು ನಿಮಿಷಗಳ ಕಾಲ ಸಮಯಾವಧಿ ತೋರುತ್ತದೆ. ಆಗ ವೈದ್ಯರಿಗೆ ಕರೆ ಮಾಡಿದ ಪತಿ ಅವರ ಸಲಹೆ ಮೇರೆಗೆ ತನ್ನ ಪತ್ನಿ ಐರಿಶ್ ಶೆರ್ರಿ ಅವರನ್ನು ಕಾರಿನ ಹಿಂಬದಿ ಸೀಟಿಗೆ ಕೂರಿಸಿದ್ದಾರೆ.

ಅಲ್ಲಿ ಐರಿಶ್ ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಕರುಳ ಬಳ್ಳಿಯನ್ನ ಕತ್ತರಿಸುತ್ತಾರೆ. ಇದು ಇಡೀ ವಿಶ್ವದಲ್ಲೇ ಕಾರು ಅಟೋ ಪೈಲಟ್ ಮೋಡ್ ನಲ್ಲಿರುವಾಗ ಜನಿಸಿದ ಮೊದಲ ಮಗು ಎಂಬ ಹೆಸರಿಗೆ ಪಾತ್ರವಾಗಿದೆ. ಇನ್ನು ತದನಂತರ ಆಸ್ಪತ್ರೆಗೆ ಕರೆ ತಂದು ಇನ್ನಿತರ ಔಷಧೋಪಚಾರವನ್ನು ಗರ್ಭಿಣಿಗೆ ನೀಡಲಾಗಿದ್ದು, ಇದೀಗ ತಾಯಿ ಮಗು ಆರೋಗ್ಯವಾಗಿ ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಐರಿಶ್ ಶೆರ್ರಿ ಮತ್ತು ಕೀಟಿಂಗ್ ಶೆರ್ರಿ ದಂಪತಿಗಳಿಗೆ ಜನಿಸಿದ ಈ ಮಗುವಿಗೆ ಪೋಷಕರು ಮೇವ್ ಲಿಲಿ ಎಂದು ಹೆಸರಿಟ್ಟಿದ್ದರು. ಇದೀಗ ಏಲನ್ ಮಸ್ಕ್ ಒಡೆತನದ ಟೆಸ್ಲಾ ಕಾರಿನಲ್ಲಿ ಜನಿಸಿದ ವಿಶ್ವದ ಮೊದಲ ಮಗು ಆದ ಕಾರಣ ಈ ಮಗುವಿಗೆ ಟೆಸ್ಲಾ ಬೇಬಿ ಎಂದು ನಾಮಕರಣ ಮಾಡಿದ್ದಾರೆ.

ಇನ್ನು ಐರಿಶ್ ಶೆರ್ರಿ ಮತ್ತು ಕೀಟಿಂಗ್ ದಂಪತಿಗಳಿಗೆ ವೈದ್ಯರು ವೈದ್ಯಕೀಯ ಸಿಬ್ಬಂದಿಗಳ ಸಹಾಯ ಇಲ್ಲದೆ ಹೆರಿಗೆ ಮಾಡಿಸುವುದು ಕಷ್ಟ ಸಾಧ್ಯ. ಅದೂ ಕೂಡ ಕಾರಿನಂತಹ ಸಣ್ಣ ಜಾಗದಲ್ಲಿ ಹೆರಿಗೆ ಮಾಡಿಸುವುದು ಅಂದರೆ ಅದು ಹರ ಸಾಹಸವೇ ಸರಿ‌. ಹೀಗಿದ್ದರು ಕೂಡ ಕೀಟಿಂಗ್ ಅವರು ತಮ್ಮ ಸಮಯ ಪ್ರಜ್ಞೆಯಿಂದ ಐರಿಶ್ ಶೆರ್ರಿ ಅವರಿಗೆ ಹೆರಿಗೆ ಮಾಡಿಸಿರುವುದು ನಿಜಕ್ಕೂ ಕೂಡ ಅಭಿನಂದನಾರ್ಹವಾದುದು. ಜೊತೆಗೆ ಈ ದಂಪತಿಗಳಿಗೆ ಈ ಟೆಸ್ಲಾ ಕಾರು ಕೂಡ ಅಷ್ಟೇ ಪೂರಕವಾಗಿ ಸಹಾಯಮಾಡಿದೆ. ಈ ಘಟನೆಯನ್ನ ಈ ದಂಪತಿಗಳು ತಮ್ಮ ಜೀವಮಾನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಾರೆ.

%d bloggers like this: