ಸ್ಯಾಂಡಲ್ ವುಡ್ ನ ಬಹು ಬೇಡಿಕೆಯ ನಟಿ ಕೈ ತುಂಬಾ ಸಿನಿಮಾಗಳಿದ್ದರು ಆಲ್ಬಂ ಸಾಂಗ್ ನಲ್ಲಿ ಹೆಜ್ಜೆ ಹಾಕಿ ಸುದ್ದಿ ಆಗಿದ್ದಾರೆ. ಸಾಮಾನ್ಯವಾಗಿ ಸಣ್ಣ ಪುಟ್ಟ ಪಾತ್ರಗಳ ಮೂಲಕ ಗಮನ ಸೆಳೆದು ಒಂದೆರಡು ಚಿತ್ರಗಳಲ್ಲಿ ಅವಕಾಶ ಪಡೆದುಕೊಂಡು ಹೆಸರು ಗಳಿಸಿಕೊಳ್ಳುವ ನಟಿಯರು ಆಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಳ್ಳಲು ಹಿಂದೇಟು ಹಾಕುವಾಗ ಇಲ್ಲೊಬ್ಬರು ಜನಪ್ರಿಯ ನಟಿ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತಾನೇ ಪೊಗರು ಚಿತ್ರದ ಮೂಲಕ ಮ್ಯೂಸಿಕ್ ಡೈರೆಕ್ಟರ್ ಆಗಿ ಬಡ್ತಿ ಪಡೆದ ರ್ಯಾಪರ್ ಚಂದನ್ ಶೆಟ್ಟಿ ಹೊಸದೊಂದು ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ. ಕನ್ನಡದಲ್ಲಿ ರ್ಯಾಪರ್ ಸಾಂಗ್ ಗಳಿಗೂ ಒಂದು ರೀತಿಯ ಕ್ರೇಜ಼್ ಹುಟ್ಟು ಹಾಕಿದವರು ಅಂದರೆ ಅದು ಚಂದನ್ ಶೆಟ್ಟಿ ಮೂರೇ ಮೂರು ಪೆಗ್, ಚಾಕ್ಲೇಟ್ ಗರ್ಲ್ ಸೇರಿದಂತೆ ಒಂದಷ್ಟು ಸೂಪರ್ ರ್ಯಾಪರ್ ಸಾಂಗ್ ನೀಡಿರುವ ಚಂದನ್ ಶೆಟ್ಟಿ ಆಕ್ಷನ್ ಪ್ರಿನ್ಸ್ ಧೃವಸರ್ಜಾ ಅಭಿನಯದ ಪೊಗರು ಚಿತ್ರಕ್ಕೆ ರಾಗ ಸಂಯೋಜನೆ ಮಾಡುವ ಮೂವಕ ಸಂಗೀತ ನಿರ್ದೇಶಕನಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ಇದೀಗ ಇದರ ನಡುವೆ ಚಂದನ್ ಶೆಟ್ಟಿ ಲಕ ಲಕ ಲ್ಯಾಂಬೋರ್ಗಿನಿ ಎಂಬ ಆಲ್ಬಂ ಸಾಂಗ್ ರೆಡಿ ಮಾಡಿದ್ದಾರೆ. ಈ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ಗೆ ನಿರ್ದೇಶಕ ನಂದಕಿಶೋರ್ ಆಕ್ಷನ್ ಕಟ್ ಹೇಳಿದ್ದಾರೆ. ಕೇಶವ್ ಮತ್ತು ಬಿಂದಿಯಾ ಗೌಡ ಹಣ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ತಾನೇ ಈ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ನ ಪೋಸ್ಟರ್ ರಿಲೀಸ್ ಆಗಿದೆ. ಈ ಪೋಸ್ಟರ್ ನೋಡಿ ಸಿನಿ ಪ್ರಿಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾರಣ ಲಕ ಲಕ ಲ್ಯಾಂಬೋರ್ಗಿನಿ ಆಲ್ಬಂ ಸಾಂಗ್ ಪೋಸ್ಟರ್ ನಲ್ಲಿ ಚಂದನ್ ಶೆಟ್ಟಿ ಜೊತೆ ನಿಂತಿರುವುದು ಡಿಂಪಲ್ ಕ್ವೀನ್ ರಚಿತಾ ರಾಮ್. ಹೌದು ಚಂದನವನದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಇದೇ ಮೊದಲ ಬಾರಿಗೆ ಆಲ್ಬಂ ಸಾಂಗ್ ವೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಡಿಂಪಲ್ ಬೆಡಗಿ ರಚಿತಾ ರಾಮ್ ಅವರು ಸದ್ಯದ ಮಟ್ಟಿಗೆ ಸಖತ್ ಬಿಝಿ಼ ಆಗಿರುವ ನಟಿ.

ಅವರು ಸದ್ಯದ ಮಟ್ಟಿಗೆ ಸುಕ್ಕಾ ಸೂರಿ ಅವರ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಅಭಿಷೇಕ್ ಅಂಬರೀಷ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಅದರ ಜೊತೆಗೆ ಅವರ ಕೈಲಿ ಇದೀಗ ಶಬರಿ ಸರ್ಚಿಂಗ್ ಫಾರ ರಾವಣ, ಡಾಲಿ, ಪಂಕಜ ಕಸ್ತೂರಿ, ಲಿಲ್ಲಿ, ಏಪ್ರಿಲ್, ವೀರಂ ಹೀಗೆ ಸಾಲು ಸಾಲು ಚಿತ್ರಗಳಿವೆ. ಹೀಗಿರುವಾಗ ನಟಿ ರಚಿತಾ ರಾಮ್ ಆಲ್ಬಂ ಸಾಂಗ್ ನಲ್ಲಿಯೂ ಮಿಂಚಿದ್ದಾರಲ್ಲಾ ಎಂದು ಅವರ ಅಭಿಮಾನಿಗಳು ಮತ್ತು ಗಾಂಧಿನಗರ ಹುಬ್ಬೇರಿಸಿದ್ದಾರೆ. ಇನ್ನು ರಚಿತಾ ರಾಮ್ ಅವರ ನಟನೆಯ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಹೊಸ ವರ್ಷದ ಜನವರಿ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಚಿತಾ ರಾಮ್ ಅವರ ಲುಕ್ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಈ ಸಿನಿಮಾ ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.