ಚರ್ಮ ಮತ್ತು ಕೂದಲ ಆರೋಗ್ಯಕ್ಕೆ ಈ ಆಹಾರ ಪದಾರ್ಥಗಳನ್ನು ಸೇವಿಸಿ

ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ ಆರೋಗ್ಯ ಎಂಬುದು ದೂರದ ಮಾತು. ರೂಢಿಸಿಕೊಂಡಿರುವ ಜೀವನ ಕ್ರಮ ಮತ್ತು ಸೇವಿಸುವ ಆಹಾರ ಇವು ಆರೋಗ್ಯದ ಮೇಲೆ ತುಂಬ ಪರಿಣಾಮಕಾರಿಯಾಗಿರುತ್ತವೆ. ಅಂತೆಯೇ ಇಂದು ನಾವು ಸೇವಿಸುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶಗಳನ್ನು ಕಾಣುವುದು ಅಷ್ಟಕಷ್ಟೇ. ಇಂತಹ ದಿನಮಾನಗಳಲ್ಲಿ ಕೆಲವು ಆಹಾರ ಪದಾರ್ಥಗಳಲ್ಲಿ ಮಾತ್ರ ಉತ್ತಮ ಪೌಷ್ಟಿಕಾಂಶಗಳನ್ನು ನಿರೀಕ್ಷೆ ಮಾಡಬಹುದಾಗಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ವಿಟ್ ಮಿನ್ ಇ ತುಂಬಾ ಮುಖ್ಯವಾದದು. ವಿಟ್ ಮಿನ್ ಇ ಕೊರತೆ ಇರುವವರಿಗೆ ಚರ್ಮ ಮತ್ತು ಖನಿಜಾಂಶಗಳ ಕೊರತೆ, ಫಿಟ್ ನೆಸ್, ಕೂದಲಿನಿ ಸಮಸ್ಯೆ ಸೇರಿದಂತೆ ಅನೇಕ ದೈಹಿಕ ಸಮಸ್ಯೆಗಳಿಗೆ ಒಳಗಾಗುತ್ತರೆ.

ಅಂತಹವರು ವಿಟ್ ಮಿನ್ ಇ ಇರುವ ಆಲಿವ್ ಅಯಿಲ್ ಎಣ್ಣೆಯನ್ನ ಅಡುಗೆಯಲ್ಲಿ ಬಳಸಿದರೆ ಉತ್ತಮ ಪರಿಹಾರ ಕಂಡುಕೊಳ್ಳಬಹುದು. ಇದರಲ್ಲಿ ವಿಟಮಿನ್ ಇ ಹೇರಳವಾಗಿರುತ್ತದೆ. ಇದು ನಿಮ್ಮ ಎಲ್ಲಾ ದೌರ್ಬಲ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇನ್ನು ವಿಟಮಿನ್ ಇ ಇರುವ ಅವಕಾಡೋ ಕೂಡ ಅತ್ಯುತ್ತಮ ವಿಟಮಿನ್ ಇ ಪ್ರೋಟಿನ್ ಅಂಶಗಳನ್ನು ಹೊಂದಿದ್ದು, ಚರ್ಮ ಮತ್ತು ದೇಹದ ಸೌಂದರ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಅದರಂತೆ ಹಣ್ಣುಗಳಲ್ಲಿ ವಿಶೇಷವಾಗಿರುವ ಪಪ್ಪಾಯಿ ಹಣ್ಣಿನಲ್ಲಿಯೂ ಕೂಡ ವಿಟಮಿನ್ ಇ ಪೋಷಾಕಾಂಶಗಳು ಅಧಿಕವಾಗಿದ್ದು, ಚರ್ಮದಲ್ಲಿ ತುಕ್ಕು, ಮೊಡವೆ ಉಂಟಾಗುವುದನ್ನ ತಡೆಗಟ್ಟುತ್ತದೆ. ಜೊತೆಗೆ ವಿಟಮಿನ್ ಅಂಶ ಅಧಿಕವಾಗಿರುವ ಕಡ್ಲೆಕಾಯಿಯನ್ನು ತಿನ್ನುವುದರಿಂದ ನರದೌರ್ಬಲ್ಯ ಸಮಸ್ಯೆ ನಿವಾರಣೆಯಾಗಿ ದೇಹ ಸಧೃಡವಾಗಿರಲು ಸಹಾಯಕವಾಗಿರುತ್ತದೆ. ಒಟ್ಟಾರೆಯಾಗಿ ಪೌಷ್ಠಿಕಾಂಶ ಕೊರತೆಯ ಆಹಾರ ಇಂದು ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿ ಇಂದಿನ ಆಧುನಿಕ ಆಹಾರಗಳಾದ ಜಂಕ್ ಫುಡ್ ಗಳು ಮನುಷ್ಯರನ್ನ ಅನಾರೋಗ್ಯಕ್ಕಾಗಿ ತುತ್ತಾಗುವಂತೆ ಮಾಡುತ್ತಿದೆ.

%d bloggers like this: