ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಜೀ಼ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ರೋಮಾಂಚಕ ಧಾರವಾಹಿ ಯಾರೇ ನೀ ಮೋಹಿನಿ. ಈ ಧಾರವಾಹಿ ಈಗ ಮುಕ್ತಾಯಗೊಳ್ಳುವ ಎಲ್ಲಾ ಹಂತದಲ್ಲಿದೆ ಇದು ಅಂತಿಮವಾಗಿ ಕಥಾನಾಯಕ, ನಾಯಕಿ ಒಂದಾಗಿ ಎಲ್ಲರೂ ಸಂತೋಷದಿಂದ ಕೂಡಿ ಮುಕ್ತಾಯಗೊಳ್ಳುವ ಹ್ಯಾಪಿ ಎಂಡಿಂಗ್ ಧಾರವಾಹಿ ಆಗಿಲ್ಲ. ಒಂದೆಡೆ ಕಥಾ ನಾಯಕ ಮುತ್ತು ಮತ್ತೊಂದೆಡೆ ನಾಯಕಿ ಬೆಳ್ಳಿ ಇವರಿಬ್ಬರು ಮದುವೆಯಾಗುವುದನ್ನೆ ಎದುರು ನೋಡುತ್ತಿದ್ದ ಪ್ರೇಕ್ಷಕರು ನಂತರ ಆ ಮದುವೆಯು ಆದ ನಂತರ ಧಾರವಾಹಿ ಮತ್ತೊಂದು ತಿರುವಿಗೆ ಹೊರಳುತ್ತದೆ. ಇವರಿಬ್ಬರು ಮದುವೆಯಾದರೂ ಸಹ ಈ ವಿಷಯ ಯಾರಿಗೂ ಗೊತ್ತಿಲ್ಲದಂತೆ ಜೀವನ ಸಾಗಿಸ ಬೇಕೆಂಬ ಅನಿವಾರ್ಯ ಸೃಷ್ಠಿ ಮಾಡಿತು. ನಂತರ ಆತ್ಮವೊಂದರ ಪ್ರವೇಶ ಹೀಗೆ ಚಿತ್ರ ವಿಚಿತ್ರವಾಗಿ ಧಾರವಾಹಿಯನ್ನು ರೋಚಕತೆಗೆ ತೆಗೆದುಕೊಂಡು ಹೋಗಿ ಯಾರೇನೀ ಮೋಹಿನಿ ಧಾರವಾಹಿ ಪ್ರೇಕ್ಷಕರನ್ನು ಕುತೂಹಲಕ್ಕೆ ಕರೆದೊಯ್ದಿತ್ತು.

ಧಾರವಾಹಿಯಾಗಲೀ, ಸಿನಿಮಾವಾಗಲೀ ಕೆಲವೊಮ್ಮೆ ಅನಿವಾರ್ಯತೆ ಕಾರಣದಿಂದ ಆ ಸೀರಿಯಲ್ ಎಷ್ಟೇ ಚೆನ್ನಾಗಿದ್ದರೂ ಒತ್ತಡ ಅಥವಾ ಇನ್ಯಾವುದೋ ಕಾರಣಗಳನ್ನು ನೀಡಿ ಆ ಧಾರವಾಹಿ ಸ್ಥಗಿತಗೊಳ್ಳುತ್ತವೆ. ಇದೇ ರೀತಿಯಾಗಿ ಕಿರುತೆರೆಯ ಜನಪ್ರಿಯ ವಾಹಿನಿ ಜೀ಼ ಕನ್ನಡದಲ್ಲಿ ಪ್ರಸಾರ ವಾಗುತ್ತಿರುವ ಮೋಹಿನಿ ಧಾರವಾಹಿಯನ್ನು ನಿಲ್ಲಿಸುವ ಸಾಧ್ಯತೆಯಿದೆ. ಕಾರಣ ಏನೇ ಆಗಿದ್ದರೂ ಸಹ ಟಿವಿ ರೇಟಿಂಗ್ ನಲ್ಲಿ ಉತ್ತಮವಾದ ಫಲಿತಾಂಶ ಬರುತ್ತಿದ್ದರೂ ಈ ಧಾರವಾಹಿಯನ್ನು ಅಂತಿಮಗೊಳಿಸುವ ನಿರ್ಧಾರಕ್ಕೆ ಬರಬಹುದು ಎಂಬ ಮಾಹಿತಿ ವಾಹಿನಿಯ ಮೂಲಗಳಿಂದ ಹೊರಬಿದ್ದಿದೆ. ಇದಕ್ಕೂ ಮುಂಚೆ ಪ್ರೇಕ್ಷಕರ ವಲಯದಿಂದ ಕೇಳಿಬರುತ್ತಿರುವ ಅಭಿಪ್ರಾಯ ಅಂದರೆ ಮೋಹಿನಿ ಧಾರವಾಹಿಯು ಅಷ್ಟಾಗಿ ಆಸಕ್ತಿದಾಯಕವಾಗಿ ಮೂಡಿಬರುತ್ತಿಲ್ಲ ಎಂದು ತಿಳಿಸಿದ್ದಾರೆ.