ಚಿತ್ರ ಬಿಡುಗಡೆ ಆಗುವ ಮೊದಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ ವಿಕ್ರಾಂತ್ ರೋಣ ಚಿತ್ರದ ನಿರ್ದೇಶಕರು

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಸಿನಿಮಾದ ಟೀಸರ್, ಮೇಕಿಂಗ್ ನೋಡಿ ಈಗಾಗಲೇ ವಿಶ್ವದ ಚಿತ್ರರಂಗವೇ ಮಾರಿ ಮೆಚ್ಚುಗೆ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ನಿರ್ದೇಶಕ ಅನೂಪ್ ಭಂಡಾರಿ ಅವರಿಗೆ ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಅನೂಪ್ ಭಂಡಾರಿ ಅವರ ಮುಂದಿನ ಚಿತ್ರಗಳಿಗೆ ಬಂಡವಾಳ ಹೂಡಲು ದಕ್ಷಿಣ ಭಾರತ ಸಿನಿಮಾ ನಿರ್ಮಾಪಕರು ಮಾತ್ರ ಅಲ್ಲದೆ ಉತ್ತರ ಭಾರತದ ದಿಗ್ಗಜ ನಿರ್ಮಾಪಕರು ನೂರು ಕೋಟಿ ಆದರೂ ಸಹ ನಿರ್ದೇಶಕ ಅನೂಪ್ ಭಂಡಾರಿ ಅವರ ನಿರ್ದೇಶನದ ಚಿತ್ರ ಮಾಡಲು ಉತ್ಸುಕರಾಗಿದ್ದಾರೆ. ಪ್ಯಾನ್ ಇಂಡಿಯಾ ಫ್ಯಾಂಟಸಿ ವಿಕ್ರಾಂತ್ ರೋಣ ಸಿನಿಮಾ ಇನ್ನೂ ಕೂಡ ಬಿಡುಗಡೆಯೇ ಆಗಿಲ್ಲ‌. ಇದರ ನಡುವೆಯೇ ಅನೂಪ್ ಭಂಡಾರಿ ಅವರು ಸುದೀಪ್ ಅವರೊಟ್ಟಿಗೆ ಅಶ್ವತ್ಥಾಮ ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ಚಿತ್ರದ ಕಥೆಯ ಬಗ್ಗೆ ಚರ್ಚೆ ಕೂಡ ನಡೆಯುತ್ತಿದ್ದಂತೆ. ಹೀಗಾಗಿ ಸೌತ್ ಅಂಡ್ ನಾರ್ಥ್ ಸಿನಿ ರಂಗದ ದಿಗ್ಗಜ ನಿರ್ಮಾಪಕರು ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಈಗಾಗಲೇ ಭೇಟಿ ಮಾಡಿದ್ದಾರೆ ಎನ್ನಲಾಗುತ್ತದೆ. ಅನೂಪ್ ಭಂಡಾರಿ ಅವರು ರಂಗಿತರಂಗ ಎಂಬ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸನ್ಶೇನಲ್ ಕ್ರಿಯೆಟ್ ಮಾಡಿದ್ದರು‌. ಇದೀಗ ಮೊಟ್ಟ ಮೊದಲ ಬಾರಿಗೆ ಸ್ಟಾರ್ ನಟ ಸುದೀಪ್ ಅವರೊಟ್ಟಿಗೆ ವಿಕ್ರಾಂತ್ ರೋಣ ಎಂಬ ಬಹುಕೋಟಿ ವೆಚ್ಚದ ಸಿನಿಮಾ ಮಾಡಿದ್ದು ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಈಗಾಗಲೇ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಾಕಷ್ಟು ಸುದ್ದಿ ಮಾಡಿದೆ. ಇದುವರೆಗೆ ವಿಕ್ರಾಂತ್ ರೋಣ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ತಿಳಿದು ಬಂದಿತ್ತು.

ಆದರೆ ಇದೀಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ವಿಕ್ರಾಂತ್ ರೋಣ ಚಿತ್ರ 14 ಭಾಷೆಗಳಲ್ಲಿ ಬರೋಬ್ಬರಿ 55 ದೇಶಗಳಲ್ಲಿ ರಿಲೀಸ್ ಆಗಲಿದೆಯಂತೆ. ಇತ್ತೀಚೆಗೆ ತಾನೇ ಈ ವಿಕ್ರಾಂತ್ ರೋಣ ಸಿನಿಮಾಗೆ ಓಟಿಟಿ ಯಿಂದ ಭಾರಿ ಮೊತ್ತಕ್ಕೆ ಬೇಡಿಕೆ ಬಂದಿದ್ದರು ಕೂಡ ನಿರ್ಮಾಪಕರಾದ ಜಾಕ್ ಮಂಜು ಅವರು ಚಿತ್ರವನ್ನು ಥಿಯೇಟರ್ ಗಳಲ್ಲೇ ರಿಲೀಸ್ ಮಾಡುವುದಾಗಿ ನಿರ್ಧರಿಸಿದ್ದಾರೆ. ಇನ್ನು ವಿಕ್ರಾಂತ್ ರೋಣ ಸಿನಿಮಾ ಇದೇ ವರ್ಷ ಫೆಬ್ರವರಿ 24ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಬಿ.ಅಜನೀಶ್ ಲೋಕನಾಥ್ ವಿಕ್ರಾಂತ್ ರೋಣ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು, ನಿರೂಪ್ ಭಂಡಾರಿ, ರವಿ ಶಂಕರ್ ಗೌಡ, ನೀತಾ ಅಶೋಕ್, ಜಾಕ್ವೇಲಿನ್ ಫರ್ನಾಂಡೀಸ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ವಿಕ್ರಾಂತ್ ರೋಣ ನಿರ್ದೇಶಕರಿಗೆ ದೇಶದ ದೊಡ್ಡ ನಿರ್ಮಾಣ ಸಂಸ್ಥೆಗಳು ಸಂಪರ್ಕಿಸಿದ್ದು ವಿಕ್ರಾಂತ್ ರೋಣ ಅನುಪ್ ಭಂಡಾರಿ ಅವರಿಗೆ ದೊಡ್ಡ ಹೆಸರು ತಂದುಕೊಡುವಲ್ಲಿ ಸಂದೇಹವೇ ಇಲ್ಲ.

%d bloggers like this: