ಚಿತ್ರ ಗೆದ್ದು ಧನಂಜಯ ಅವರ ಜೇಬು ತುಂಬಿಸಿದ ಬಡವ ರಾಸ್ಕಲ್ ಚಿತ್ರ, ಗಳಿಸಿದ್ದೆಷ್ಟು ಗೊತ್ತೇ

ಚಂದನವನದ ನಟ ಡಾಲಿ ಧನಂಜಯ್ ಅವರು ನಟಿಸಿ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ ಬಡವ ರಾಸ್ಕಲ್ ಸಿನಿಮಾ ಯಶಸ್ವಿಯಾಗಿ ಐವತ್ತು ದಿನಗಳನ್ನು ಪೂರೈಸಿದೆ. ಬಡವ ರಾಸ್ಕಲ್ ಸಿನಿಮಾದ ಪ್ರಮೋಶನ್ ಕೆಲಸವನ್ನೇ ಬಹಳ ವಿಭಿನ್ನವಾಗಿ ಮಾಡಿದ ಚಿತ್ರ ತಂಡ ಪ್ರೇಕ್ಷಕರನ್ನ ಸಿನಿಮಾ ಮಂದಿರದತ್ತ ಕರೆತರುವಲ್ಲಿ ಉತ್ತಮವಾಗಿ ಸಫಲವಾಯಿತು. ಜೊತೆಗೆ ಪ್ರಚಾರ ಕೂಡ ಸಖತ್ ವರ್ಕೌಟ್ ಆಯಿತು. ಇದೆಲ್ಲದರ ಜೊತೆಗೆ ನಟ ರಾಕ್ಷಸ ಡಾಲಿ ಧನಂಜಯ್ ಅವರು ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡ ಕಾರಣ ಅವರ ಅಭಿಮಾನಿಗಳಲ್ಲಿಯೂ ಕೂಡ ಈ ಬಡವ ರಾಸ್ಕಲ್ ಸಿನಿಮಾದ ಬಗ್ಗೆ ಅಪಾರ ನಿರೀಕ್ಷೆ ಹುಟ್ಟಿಕೊಂಡಿತು. ಬಡವ ರಾಸ್ಕಲ್ ಸಿನಿಮಾ ವರ್ಷದ ಕೊನೆ ಡಿಸೆಂಬರ್ 24ರಂದು ಬಿಡುಗಡೆಯಾದ ಸಿನಿಮಾ.

ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ದೊರೆತು ನಿರೀಕ್ಷೆಗೆ ತಕ್ಕಂತೆ ಬಡವ ರಾಸ್ಕಲ್ ಸಿನಿಮಾ ಕೂಡ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು. ನಟ ಧನಂಜಯ್ ಅವರ ಗೆಳೆಯರಾದ ಶಂಕರ್ ಗುರು ಅವರು ನಿರ್ದೇಶನ ಮಾಡಿದ ಬಡವ ರಾಸ್ಕಲ್ ಸಿನಿಮಾಗೆ ಈಗ ಐವತ್ತು ದಿನಗಳ ಸಂಭ್ರಮ. ಈ ಐವತ್ತು ದಿನಗಳಲ್ಲಿ ಬಡವ ರಾಸ್ಕಲ್ ಸಿನಿಮಾ ಥಿಯೇಟರ್ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 16 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈ ಬಡವ ರಾಸ್ಕಲ್ ಚಿತ್ರದಲ್ಲಿ ಡಾಲಿ ಧನಂಜಯ್ ಅವರಿಗೆ ಜೋಡಿಯಾಗಿ ನಟಿ ಅಮೃತಾ ಅಯ್ಯಂಗಾರ್ ನಟಿಸಿದ್ದರು. ಯುವ ಯಶಸ್ವಿ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಜೊತೆಗೆ ಆಗಾಗ ನೆನಪಾಗುತ್ತಾಳೆ ಎಂಬ ಹಾಡನ್ನು ಕೂಡ ಹಾಡಿ ಗಮನ ಸೆಳೆದಿದ್ದರು.

ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟರಾದ ರಂಗಾಯಣ ರಘು, ನಟಿ ತಾರಾ, ನಾಗಭೂಷಣ್, ಪೂರ್ಣಚಂದ್ರ, ಸ್ಪರ್ಶ ರೇಖಾ, ನಿರ್ದೇಶಕರಾದ ಗುರು ಪ್ರಸಾದ್ ನಟಿಸಿದ್ದಾರೆ. ಒಟ್ಟಾರೆಯಾಗಿ ಸ್ಯಾಂಡಲ್ ವುಡ್ ನಲ್ಲಿ ನಟ ಡಾಲಿ ಧನಂಜಯ್ ಅವರು ತಮ್ಮ ಸಿನಿ ವೃತ್ತಿ ಬದುಕಿನಲ್ಲಿ ಹಲವು ಏಳು-ಬೀಳುಗಳನ್ನು ಕಂಡು ಟಗರು ಸಿನಿಮಾದ ನಂತರ ಸಿನಿಮಾರಂಗದಲ್ಲಿ ಹೊಸ ತಿರುವು ಪಡೆದುಕೊಂಡು ಇದೀಗ ತಮ್ಮದೇಯಾದ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಸದ್ಯಕ್ಕೆ ಧನಂಜಯ್ ಅವರು ಹೆಡ್ ಬುಷ್, ಡಾಲಿ, ಮಾನ್ಸುನ್ ರಾಗ ಅಂತಹ ಒಂದಷ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಕನ್ನಡ ಮಾತ್ರ ಅಲ್ಲದೆ ಪರಭಾಷೆಯ ಸಿನಿಮಾಗಳಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡು ಕನ್ನಡದ ಬೇಡಿಕೆಯ ನಟರ ಸಾಲಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

%d bloggers like this: