ಚಿತ್ರ ಮಾಡದೇ ಇದ್ದರೂ ಸಹ ಬಾಲಿವುಡ್ ದೊಡ್ಡ ನಟಿಯರನ್ನ ಹಿಂದಿಕ್ಕಿದ ಸ್ಟಾರ್ ನಟಿ

ಫೀಲ್ಡ್ ನಲ್ಲಿ ಇಲ್ದೇ ಹೋದ್ರು ಫೀಲ್ಡ್ ಆಳೋದ್ ಹೇಗೆ ಎಂಬುದನ್ನ ಬಾಲಿವುಡ್ ನ ಈ ಸ್ಟಾರ್ ನಟಿಯನ್ನ ನೋಡಿ ಕಲಿಯಬೇಕಾಗಿದೆ. ಹೌದು ರಾಕಿಂಗ್ ಸ್ಟಾರ್ ಯಶ್ ಹೇಳುವ ಡೈಲಾಗ್ ನಾನ್ ಬರೋವರ್ಗ್ ಮಾತ್ರ ಬೇರೆ ಅವರ ಹವಾ ನಾನ್ ಬಂದ್ಮೇಲೆ ನಂದೇ ಹವಾ. ಆದರೆ ಇಲ್ಲೊಬ್ಳು ಬಾಲಿವುಡ್ ಸುಂದರಿ ಯಾವಾಗ್ಲೂ ನಾನ್ ಪೀಲ್ಡ್ ಅಲ್ಲಿ ಇರ್ಲಿ ಬಿಡ್ಲಿ ನಾನೇ ನಂಬರ್ ಒನ್ ಎನ್ನುತ್ತಿದ್ದಾರೆ. ಹೌದು ಇತ್ತೀತೆಗೆ ಭಾರತೀಯ ಚಿತ್ರರಂಗದ ಅನೇಕ ನಟಿಯರು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ‌. ಅಂತೆಯೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಪ್ರಮೋಶನ್ ಜೊತೆಗೆ ತಮ್ಮ ಒಂದಷ್ಟು ಫೋಟೋಗಳು ತಮ್ಮ ಸುಂದರ ಕ್ಷಣಗಳನ್ನು ಹಂಚಿಕೊಂಡು ಅಪಾರ ಅನುಯಾಯಿಗಳನ್ನು ಸೃಷ್ಟಿಸಿಕೊಂಡಿರುತ್ತಾರೆ.

ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಟಿಯಾಗಿ ರಶ್ಮಿಕಾ ಮಂದಣ್ಣ ಗುರುತಿಸಿಕೊಂಡಿದ್ದಾರೆ. ಆದರೆ ಬಾಲಿವುಡ್ ನಲ್ಲಿ ಸದ್ಯದಲ್ಲಿ ಬಹುಬೇಡಿಕೆಯ ಜನಪ್ರಿಯ ನಟಿಯಾಗಿ ಮಿಂಚುತ್ತಿರುವ ಕತ್ರಿನಾ ಕೈಫ್, ದೀಪಿಕಾ ಪಡುಕೊಣೆ ಹೀಗೆ ಇಂತಹ ಸ್ಟಾರ್ ನಟಿಯರನ್ನೇ ಹಿಂದಿಕ್ಕಿ ಸೋಶಿಯಲ್ ಮೀಡಿಯಾದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದಾರೆ ಪ್ರಿಯಾಂಕಾ ಚೋಪ್ರಾ. ಇತ್ತೀಚೆಗೆ ಕೆಲವು ತಿಂಗಳ ಹಿಂದೆಯಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ಹೋಟೆಲ್ ಎಂಟ್ರಿಕೊಟ್ಟು ಭಾರಿ ಸುದ್ದಿಯಾಗಿದ್ದರು. ಹೌದು ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೇರಿಕಾದಲ್ಲಿ ರೆಸ್ಟೋರೆಂಟ್ ವೊಂದನ್ನು ಆರಂಭಿಸಿದ್ದಾರೆ.

ಅಮೇರಿಕಾದ ನಿಕ್ ಜಾನ್ಸ್ ಎಂಬ ಪಾಪ್ ಸಿಂಗರ್ ರೊಬ್ಬರನ್ನು ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಅಮೇರಿಕಾದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.ಅಮೇರಿಕಾದ ಪ್ರತಿಷ್ಟಿತ ನಗರ ನ್ಯೂಯಾರ್ಕ್ ನಲ್ಲಿ ಸೋನಾ ಎಂಬ ಎಂಬ ಸ್ಟಾರ್ ರೆಸ್ಟೋರೆಂಟ್ ನಿರ್ಮಿಸುವ ಮೂಲಕ ಹೋಟೆಲ್ ಉದ್ಯಮ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇದಾದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ನಟಿಸಿದ ಕೊನೆಯ ಚಿತ್ರ ಅಂದರೆ ಅದು ದಿ ವೈಟ್ ಟೈಗರ್. ಇದೀಗ ನಟಿ ಪ್ರಿಯಾಂಕಾ ಚೋಪ್ರಾ ಅವರು ಭಾರಿ ಸುದ್ದಿಯಾಗಿರುವ ವಿಚಾರ ಅಂದರೆ ಇನ್ಸ್ಟಾ ಗ್ರಾಮ್.

ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಬೇಡಿಕೆಯ ನಟಿಯರಾದ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಅಂತಹ ಸ್ಟಾರ್ ನಟಿಯರಿಗಿಂತ ಅತ್ಯಧಿಕ ಫ್ಯಾನ್ಸ್ ಫಾಲೋಯಿಂಗ್ ಹೊಂದುವ ಮೂಲಕ ಪ್ರಿಯಾಂಕಾ ಚೋಪ್ರಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೋಬ್ಬರಿ ಏಳುವರೆ ಕೋಟಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಇವರ ನಂತರದಲ್ಲಿ 68.5 ಮಿಲಿಯನ್ ಫ್ಯಾನ್ ಫಾಲೋಯಿಂಗ್ ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿ ಶ್ರದ್ದಾ ಕಪೂರ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಬಾಲಿವುಡ್ ಡಿಂಪಲ್ ದೀಪಿಕಾ ಪಡುಕೋಣೆ 63.4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

%d bloggers like this: