ಚಿತ್ರ ಒಂದೇ ಭಾಷೆಯಲ್ಲಿ ಬರುತ್ತಿದ್ದರೂ ಸಹ ಈ‌ ಚಿತ್ರಕ್ಕೆ ಬರೊಬ್ಬರಿ 300 ಕೋಟಿ ಆಫರ್

ದೇಶದಲ್ಲಿ ಕೋವಿಡ್ ರೂಪಾಂತರಿ ತಳಿ ಡೇಲ್ಟಾ ಮತ್ತು ಒಮಿಕ್ರಾನ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋರೋನಾ ಎರಡನೇ ಅಲೆಯಿಂದ ಸುಧಾರಿಸಿಕೊಂಡು ಇನ್ನೇನು ಎಲ್ಲವು ಸರಿಹೋಗುತ್ತಿದೆ ಎನ್ನುವಷ್ಟರಲ್ಲಿ, ದೇಶದಲ್ಲಿ ಆರಂಭವಾದ ಮೂರನೇ ಅಲೆಯಿಂದಾಗಿ ಮತ್ತೆ ಎಲ್ಲ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಹಾಗೂ ಜನಭರಿತ ನಗರಗಳಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೆಹಲಿ ಹಾಗೂ ಮುಂಬೈನಂತಹ ದೊಡ್ಡ ನಗರಗಳಲ್ಲಿ ದಿನಕ್ಕೆ 17 ರಿಂದ 20 ಸಾವಿರ ಹೊಸ ಹೊಸ ಪ್ರಕರಣಗಳು ವರದಿಯಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಈ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ಇದೀಗ ಕೆಲವು ರಾಜ್ಯಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿವೆ.

ಕೆಲವು ರಾಜ್ಯಗಳಲ್ಲಿ ಮತ್ತೆ ಮೊದಲಿನಂತೆ ಎಲ್ಲಾ ಶಾಲಾ ಕಾಲೇಜುಗಳಿಗೆ ಬಂದ್ ಘೋಷಿಸಲಾಗಿದೆ. ಈ ಹಿಂದೆಯೂ ಕೂಡ ಕೋರೋಣ ಅಲೆಯನ್ನು ನಿಯಂತ್ರಿಸಲು ಎಲ್ಲ ಶಾಲಾ ಕಾಲೇಜುಗಳು, ಎಲ್ಲ ಕಚೇರಿಗಳು ಹಾಗೂ ಸಿನಿಮಾ ಥಿಯೇಟರ್ ಗಳನ್ನು ಕೂಡ ಬಂದ್ ಮಾಡಲಾಗಿತ್ತು. ಇದೀಗ ಕೊರೋನ ಮೂರನೇ ಅಲೆಯು ಮತ್ತೆ ದೇಶದಲ್ಲಿ ಪ್ರಾರಂಭವಾಗಿರುವುದರಿಂದ ಸಿನಿಮಾ ಥಿಯೇಟರ್ ಗಳನ್ನು ಮತ್ತೆ ಬಂದ್ ಮಾಡಲು ಚರ್ಚೆ ನಡೆಯುತ್ತಿದೆ. ಕಳೆದ ವರ್ಷ ಕೊರೋನಾ ಕಾರಣದಿಂದಾಗಿ ಅನೇಕ ಸಿನಿಮಾಗಳು ಸಿನಿಮಾ ಥಿಯೇಟರ್ ಗಳಲ್ಲಿ ರಿಲೀಸ್ ಆಗದೇ ಇರುವ ಕಾರಣ ಒಟಿಟಿಗಳಲ್ಲಿ ರಿಲೀಸ್ ಆಗಿದ್ದವು.

ಲಾಕಡೌನ್ ಕಾರಣದಿಂದಾಗಿ ಇದೀಗ ಮತ್ತೆ ಎಲ್ಲ ಚಿತ್ರಗಳು ಒಟಿಟಿಗಳತ್ತ ಮುಖ ಮಾಡುವಂತಾಗಿದೆ. ಈಗಾಗಲೇ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿ ಜನರ ಮೆಚ್ಚುಗೆಯನ್ನು ಗಳಿಸಿದೆ. ತೆಲುಗು ನಟ ಅಲ್ಲು ಅರ್ಜುನ್ ರವರ ಬಹುನಿರೀಕ್ಷಿತ ಸಿನೆಮಾ ಪುಷ್ಪ ಕೂಡ ಜನವರಿ 7 ರಂದು ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಇದೀಗ ಅಜಿತ್ ಅವರ ವಲಿಮೈ ಚಿತ್ರವು ಕೂಡ ಬಿಡುಗಡೆಯಾಗಲು ಸಜ್ಜಾಗಿದ್ದು, ಬೋನಿ ಕಪೂರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಮಿಳು, ತೆಲುಗು, ಹಿಂದಿ ಮೂರು ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ. ವಲಿಮೈ ಸಿನಿಮಾದಲ್ಲಿ ಸೆನ್ಸಾರ್ ಮಂಡಳಿಯು 15 ತಿದ್ದುಪಡಿಗಳನ್ನು ಮಾಡಿದ್ದು, ಯು/ ಎ ಸರ್ಟಿಫಿಕೇಟ್ ದೊರೆತಿದೆ. ಇನ್ನೂ ಕೆಲವು ಅಂಶಗಳಿಗೆ ದಕ್ಕೆ ತರುವಂತಹಗಳನ್ನು ಮ್ಯೂಟ್ ಮಾಡಲಾಗಿದೆ ಎಂದು ಸೆನ್ಸಾರ್ ಮಂಡಳಿ ಹೇಳಿದೆ.

ಎಚ್ ವಿನೋತ್, ವಲಿಮೈ ಸಿನಿಮಾವನ್ನು ನಿರ್ದೇಶಿಸಿದ್ದು, ಅಜಿತ್ ಅವರು ಈ ಸಿನಿಮಾದಲ್ಲಿ ಅವರು ಪೊಲೀಸ್ ಪಾತ್ರಧಾರಿಯಾಗಿ ರಂಜಿಸಲಿದ್ದಾರೆ. ಈ ಚಿತ್ರವು ಆಕ್ಷನ್ ಮತ್ತು ರೇಸಿಂಗ್ ದೃಶ್ಯಗಳಿಂದ ಕೂಡಿದ್ದು ಈ ಚಿತ್ರದಲ್ಲಿ ಕಾರ್ತಿಕೇಯ ಅವರು ಅಜಿತ್ ವಿರುದ್ಧ ಹೋರಾಡಲಿದ್ದಾರೆ. ಹುಮಾ ಕುರೇಶಿ, ಯೋಗಿ ಬಾಬು, ಸುಮಿತ್ರ, ಪುಗಜ್, ರಾಜ್ ಅಯ್ಯಪ್ಪ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಯುವನ್ ಶಂಕರ್ ರಾಜಾ ಹಾಡುಗಳಿಗೆ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತವನ್ನು ಘಿಬ್ರನ್ ಸಂಯೋಜಿಸಿದ್ದಾರೆ ಎಂದು ತಿಳಿದುಬಂದಿದೆ. ಎಲ್ಲವೂ ಸರಿಯಾಗಿದ್ದರೆ ಈ ಚಿತ್ರವನ್ನು ಜನೆವರಿ 13 ಪೊಂಗಲ್ ಹಬ್ಬದ ದಿನದಂದು ಬಿಡುಗಡೆ ಮಾಡಲು ಚಿತ್ರತಂಡವು ನಿರ್ಧರಿಸಿತ್ತು.

ಆದರೆ ಕೋವಿಡ್ ಕಾರಣದಿಂದಾಗಿ ಈ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಆದರೆ ಇತ್ತೀಚೆಗೆ ದೊರೆತಿರುವ ಮಾಹಿತಿಯ ಪ್ರಕಾರ ಅಜಿತ್ ಅವರ ವಲಿಮೈ ಚಿತ್ರವನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂ ನಲ್ಲಿ ಬಿಡುಗಡೆ ಮಾಡಲು 300 ಕೋಟಿ ರುಪಾಯಿಯ ಒಪ್ಪಂದದ ಆಫರ್ ನೀಡಲಾಗಿತ್ತು. ಈ ಚಿತ್ರವನ್ನು ಜನರು ಥಿಯೇಟರ್ ಗಳಲ್ಲಿ ನೋಡಬೇಕೆಂಬ ಉದ್ದೇಶದಿಂದ ನಿರ್ಮಿಸಿರುವುದರಿಂದ ಸಿನಿಮಾದ ನಿರ್ಮಾಪಕರು ಇಷ್ಟು ದೊಡ್ಡ ಮೊತ್ತದ ಒಪ್ಪಂದವನ್ನು ತಿರಸ್ಕರಿಸಿದ್ದು, ಚಿತ್ರ ಬಿಡುಗಡೆ ತಡವಾದ ಮಾತ್ರಕ್ಕೆ ಜನರಿಗೆ ಸಿನಿಮಾದ ಮೇಲಿರುವ ನಿರೀಕ್ಷೆ ಹೋಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ಅಜಿತ್ ಅವರು ಶೀಘ್ರದಲ್ಲಿಯೇ ತಮ್ಮ 61ನೇ ಚಿತ್ರದ ಕೆಲಸವನ್ನು ಪ್ರಾರಂಭಿಸಲಿದ್ದು, ಅವರು ನಿರಂತರವಾಗಿ ಮೂರನೆಯ ಬಾರಿಗೆ ಎಚ್ ವಿನೋತ್ ಮತ್ತು ಬೋನಿಕಪೂರ್ ಅವರೊಂದಿಗೆ ಜೊತೆಯಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯಾವ ಸಿನಿಮಾ ಹಾಗೂ ಯಾವ ಪಾತ್ರ ಎಂಬುದು ಇದುವರೆಗೆ ತಿಳಿದುಬಂದಿಲ್ಲ.

%d bloggers like this: