ಚಿತ್ರ ಸೋತಿದ್ದರಿಂದ ಭಾರಿ ನಷ್ಟ, ನಷ್ಟ ತುಂಬಿಸಲು ಪ್ರಾಪರ್ಟಿ ಮಾರಲು ಸಜ್ಜಾದ ನಿರ್ದೇಶಕ

ಸಿನಿಮಾ ಜಗತ್ತು ಎಲ್ಲಾ ಸಮಯದಲ್ಲಿಯೂ ಅದ್ಭುತವಾಗಿ ಇರುವುದಿಲ್ಲ. ಒಂದು ಸಿನಿಮಾ ಗೆದ್ದರೆ, ಆ ಚಿತ್ರದಲ್ಲಿ ಕೆಲಸ ಮಾಡಿದ ನಟ ನಟಿ, ನಿರ್ದೇಶಕರಿಂದ ಹಿಡಿದು ಆ ಚಿತ್ರದ ಲೈಟ್ ಬಾಯ್ ಅವರ ಬದುಕನ್ನ ಕೂಡ ಬದಲಾಯಿಸಿ ಬಿಡುತ್ತದೆ. ಅದೂ ಒಮ್ಮೊಮ್ಮೆ ಅದೃಷ್ಟ ಕೂಡ ಆಗುತ್ತದೆ. ಸಾಮಾನ್ಯ ನಟನ ಜೊತೆ ಸಿನಿಮಾ ಮಾಡಿ ಇಂದು ಕೋಟಿ ಕೋಟಿ ಒಡೆಯರಾದವರ ಕಥೆ ಕೂಡ ನಮ್ಮ ಮುಂದೆ ಇದೆ. ಅದೇ ರೀತಿ ಸೂಪರ್ ಸ್ಟಾರ್ ನಟನ ಜೊತೆ ಬೀದಿ ಪಾಲಾಗಿರುವ ಉದಾಹರಣೆ ಕೂಡ ನಮ್ಮ ಮುಂದೆ ಇದೆ. ಅದೇ ರೀತಿ ಇದೀಗ ತೆಲುಗು ಸಿನಿ ರಂಗದಲ್ಲಿ ಸ್ಟಾರ್ ನಟನ ಜೊತೆ ಸಿನಿಮಾ ಮಾಡಿ ಇದೀಗ ನಿರ್ದೇಶಕ ಆಸ್ತಿ ಮಾರುವ ಮಟ್ಟಿಗೆ ದುಸ್ಥಿತಿ ತಲುಪಿದ್ದಾನೆ. ಹೌದು ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಅವರ ಪುತ್ರ ಸ್ಟಾರ್ ನಟ ರಾಮ್ ಚರಣ್ ತೇಜಾ ಮಲ್ಟಿ ಸ್ಟಾರರ್ ಸಿನಿಮಾ ಆಚಾರ್ಯ ಚಿತ್ರ ಬಿಡುಗಡೆಗೆ ಮುನ್ನ ಅಪಾರ ನಿರೀಕ್ಷೆ ಹುಟ್ಟುಹಾಕಿತ್ತು.

ನಂತರದಲ್ಲಿ ಹೇಳ ಹೆಸರಿಲ್ಲದಂತೆ ಬಾಕ್ಸ್ ಆಫೀಸ್ ನಲ್ಲಿ ಆಚಾರ್ಯ ಮಕಾಡೆ ಮಲಗಿತ್ತು. ಈ ಆಚಾರ್ಯ ಸಿನಿಮಾ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿ ವೃತ್ತಿ ಜೀವನದಲ್ಲಿ ಭಾರಿ ನಷ್ಟ ತಂದೊಡ್ಡಿತು. ಒಂದು ಕಾಲದಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾ ಅಂದರೆ ಅದು ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲಿ ಹಬ್ಬದ ವಾತಾವರಣದಂತೆ ಕಂಗೊಳಿಸುತ್ತಿತ್ತು. ಆದರೆ ಇದೀಗ ಆಚಾರ್ಯ ಸಿನಿಮಾ ಮಕಾಡೆ ಮಲಿಗಿದ ಕಾರಣ ನಿರ್ಮಾಪಕರು ಸೇಫ್ ಆದರೂ ಕೂಡ ನಿರ್ದೇಶಕರು ಮಾತ್ರ ತಮ್ಮ ಆಸ್ತಿ ಮಾರುವಂತಹ ದುಸ್ಥಿತಿಗೆ ಬಂದು ತಲುಪಿದ್ದಾರೆ. ಹೌದು ಆಚಾರ್ಯ ಸಿನಿಮಾವನ್ನು ಸ್ವತಃ ನಟ ರಾಮ್ ಚರಣ್ ತೇಜಾ ಅವರೇ ನಿರ್ಮಾಣ ಮಾಡಿದ್ದರು. ಚಿತ್ರ ಬಾಕ್ಸ್ ಅಫೀಸ್ ನಲ್ಲಿ ಸೋತರು ಕೂಡ ಮೊದಲ ವಾರದ ಕಲೆಕ್ಷನ್ ಜೊತೆಗೆ ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್, ಓವರ್ ಸೀಸ್ ರೈಟ್ಸ್ ಮಾರಾಟ ಮಾಡುವ ಮೂಲಕ ಸೇಫ್ ಆದರು. ಆದರೆ ಈ ಚಿತ್ರದ ನಿರ್ದೇಶಕ ಕೊರಟಾಲ ಶಿವ ಮಾತ್ರ ನಷ್ಟಕ್ಕೆ ಸಿಲುಕಿದ್ದಾರೆ.

ಹೌದು ಕೊರಟಾಲ ಶಿವ ಅವರು ಸೂಪರ್ ಹಿಟ್ ಚಿತ್ರಗಳನ್ನ ನೀಡಿದ ಒಬ್ಬ ಸ್ಟಾರ್ ನಿರ್ದೇಶಕ. ಈ ಹಿಂದೆ ಅವರು ಶ್ರೀಮಂತಡು, ಭರತ್ ಆನೇ ನೇನು, ಜನತಾ ಗ್ಯಾರೇಜ್ ಅಂತಹ ಸೂಪರ್ ಹಿಟ್ ಚಿತ್ರ ನೀಡಿದ್ರು. ಈ ಸಿನಿ‌ಮಾಗಳಿಂದ ಬಂದ ಲಾಭದಲ್ಲಿ ಒಂದಷ್ಟು ಪ್ರಾಪರ್ಟಿ ಕೂಡ ಮಾಡಿದ್ದರು. ಆದರೆ ಇದೀಗ ಆಚಾರ್ಯ ಸಿನಿಮಾ ಮಾಡಿ ವಿತರಕರಿಂದ ನಮ್ಮ ನಷ್ಟ ತುಂಬಿಕೊಡಿ ಎಂಬ ಒತ್ತಾಯದ ಮೇರೆಗೆ ಅವರು ತಮ್ಮ ಆಸ್ತಿಯೊಂದನ್ನ ಮಾರಲು ಮುಂದಾಗಿದ್ದಾರೆ. ಇದು ಟಾಲಿವುಡ್ ಅಂಗಳದಲ್ಲಿ ಭಾರಿ ಸುದ್ದಿ ಆಗಿದೆ. ಆದರೆ ಆಪ್ಥ ವಲಯದಲ್ಲಿ ಕೊರಟಾಲ ಶಿವ ಅವರಿಗೆ ಅವರ ಗೆಳೆಯರು ಆರ್ಥಿಕವಾಗಿ ಸಹಾಯ ಮಾಡಿದ್ದು, ಆಸ್ತಿ ಮಾರುವ ನಿರ್ಧಾರ ಬೇಡ ಎಂಬ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಇದೀಗ ಕೊರಾಟಲ ಶಿವ ಅವರು ಜ್ಯೂ.ಎನ್.ಟಿ.ಆರ್ ಅವರ ಜೊತೆ ಸಿನಿಮಾವೊಂದನ್ನ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

%d bloggers like this: