ಚಿತ್ರದ ಶೂಟಿಂಗ್ ಶುರುವಾಗುವ ಮೊದಲೇ ಬರೊಬ್ಬರಿ 120 ಕೋಟಿ ಗಳಿಕೆ ಮಾಡಿದ ಶಾರುಖ್ ಖಾನ್ ಅವರ ಹೊಸ ಚಿತ್ರ

ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ಒಂದಕ್ಕಿಂತ ಒಂದು ಸಕ್ಸಸ್ ಕಾಣುವುದರ ಜೊತೆಗೆ ಬಾಕ್ಸ್ ಅಫೀಸ್ ನಲ್ಲಿ ಕೋಟಿ ಕೋಟಿ ನೂರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ. ಆದರೆ ಬಾಲಿವುಡ್ ನಲ್ಲಿ ಘಟಾನುಘಟಿ ದಿಗ್ಗಜ ನಟರ ಸಿನಿಮಾಗಳು ಮಾತ್ರ ಸೋತು ಸುಣ್ಣವಾಗುತ್ತಿವೆ. ಅದಕ್ಕೆ ಇತ್ತೀಚೆಗೆ ತೆರೆಕಂಡ ತ್ರಿಬರ್ ಆರ್ ಸಿನಿಮಾ, ಪುಷ್ಪಾ, ಕೆಜಿಎಫ್2, 777ಚಾರ್ಲಿ ಅಂತಹ ಸಿನಿಮಾಗಳನ್ನ ಉತ್ತಮ ಉದಾಹರಣೆಯಾಗಿ ನೋಡಬಹುದು. ಆದ್ರೇ ದಕ್ಷಿಣ ಭಾರತದ ಸಿನಿಮಾಗಳ ಮುಂದೆ ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮಿತಾಬ್ ಬಚ್ಚನ್ ಅಂತಹ ಬಾಲಿವುಡ್ ಸೂಪರ್ ಸ್ಟಾರ್ ನಟರ ಸಿನಿಮಾಗಳು ಹೇಳ ಹೆಸರಿಲ್ಲದೆ ಚಿತ್ರ ಮಂದಿರಗಳಿಂದ ಓಟ ಕಿತ್ತಿವೆ. ಇದರಿಂದ ಹಿಂದಿ ಸಿನಿಮಾಗಳು ಕಲೆಕ್ಷನ್ ನಲ್ಲಿ ಅಪಾರ ನಷ್ಟವನ್ನ ಕೂಡ ಕಂಡಿವೆ.

ಇದೀಗ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರು ಮತ್ತೆ ಫಾರ್ಮ್ ಗೆ ಬರಲು ಎಲ್ಲಾ ರೀತಿ ಸಜ್ಜಾಗುತ್ತಿದ್ದಾರೆ ಎನ್ನಬಹುದು. ಯಾಕಂದ್ರೆ ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ನಟ ಶಾರುಖ್ ಖಾನ್ ಅವರ ಸಿನಿಮಾಗಳು ಯಾವುದೇ ಯಶಸ್ಸು ಕಾಣುತ್ತಿಲ್ಲ. ಹಾಕಿದ ಬಂಡವಾಳ ವಾಪಸ್ ತೆಗೆದರೆ ತೃಪ್ತಿ ಪಡಬೇಕು ಅನ್ನುವಷ್ಟರ ಮಟ್ಟಿಗೇ ಶಾರುಖ್ ಖಾನ್ ಅವರು ಬಾಲಿವುಡ್ ನಲ್ಲಿ ಸೋಲನ್ನ ಕಂಡಿದ್ದಾರೆ. ಇದೀಗ ಕಾಲಿವುಡ್ ರಂಗದಲ್ಲಿ ಯಶಸ್ವಿ ಸಿನಿಮಾಗಳನ್ನ ನೀಡಿದ ಸೂಪರ್ ಸ್ಟಾರ್ ನಿರ್ದೇಶಕ ಅಟ್ಲೀ ಕುಮಾರ್ ಸಾರಥ್ಯದಲ್ಲಿ ತಯಾರಾಗುತ್ತಿರುವ ಜವಾನ್ ಸಿನಿಮಾ ಓಟಿಟಿಯಲ್ಲಿ ಭರ್ಜರಿ ವ್ಯಾಪಾರ ಮಾಡಿದೆ. ಹೌದು ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪಾತ್ರ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡ ಸೇರಿದಂತೆ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲಿ ರಿಲೀಸ್ ಕಾಣಲಿದೆ.

ಈ ಚಿತ್ರದಲ್ಲಿ ಶಾರುಖ್ ಖಾನ್ ಅವರಿಗೆ ನಾಯಕಿಯಾಗಿ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಟಿ ನಯನಾತಾರಾ ಅವರು ಜೋಡಿಯಾಗಿ ನಟಿಸಲಿದ್ದಾರೆ. ಜವಾನ್ ಸಿನಿಮಾದ ಚಿತ್ರೀಕರಣ ಭಾಗಶಃ ಮುಕ್ತಾಯದ ಹಂತಕ್ಕೆ ಬಂದಿದೆ ಎಂದು ಚಿತ್ರ ತಂಡದ ಆಪ್ತ ಮೂಲಗಳು ತಿಳಿಸಿವೆ. ಇದೀಗ ಜವಾನ್ ಸಿನಿಮಾದ ಹೊಸದೊಂದು ಅಪ್ ಡೇಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ಶಾರುಖ್ ಖಾನ್ ಅಭಿನಯದ ಈ ಜವಾನ್ ಸಿನಿಮಾದ ಸ್ಟ್ರೀಮಿಂಗ್ ರೈಟ್ಸ್ ಅನ್ನು ಓಟಿಟಿ ದಿಗ್ಗಜ ಸಂಸ್ಥೆಯಾಗಿರುವ ನೆಟ್ ಫ್ಲೆಕ್ಸ್ ಅವರು ಬರೋಬ್ಬರಿ ನೂರಾ ಇಪ್ಪತ್ತು ಕೋಟಿಗೆ ಖರೀದಿ ಮಾಡಿದ್ದಾರೆ. ಈ ಸುದ್ದಿ ಇದೀಗ ಬಾಲಿವುಡ್ ನಲ್ಲಿ ಸಖತ್ ಸೌಂಡ್ ಆಗ್ತಿದೆ. ಒಟ್ಟಾರೆಯಾಗಿ ಶಾರುಖ್ ಖಾನ್ ಅವರ ಜವಾನ್ ಸಿನಿಮಾ ಇಷ್ಟು ಬಹುಕೋಟಿಗೆ ಸೇಲ್ ಆಗಿರೋದು ಶಾರುಖ್ ಖಾನ್ ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.

%d bloggers like this: